ನಮಸ್ತೆ ಸ್ನೇಹಿತರೆ, ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋದಕ್ಕೆ ಈ 19 ವರ್ಷದ ಹುಡುಗಿ ಈಗ ಉದಾಹರಣೆ ಯಾಗಿದ್ದರೆ.. ಯಾಕೆಂದರೆ 19 ವರ್ಣದ ಈ ಹುಡುಗಿ ನೀರಿಗಾಗಿ ಮಾಡಿದ ಉಪಾಯ ನೋಡಿದ್ರೆ ಎಂಥವರಿಗೂ ಕೂಡ ಒಂದು ಕ್ಷಣ ಆಶ್ಚರ್ಯವಾಗುತ್ತದೆ.. ಅದು ಹೇಗೆ ಗೊತ್ತಾ? ನೋಡೋಣ ಬನ್ನಿ.. ಮಧ್ಯಪ್ರದೇಶ ರಾಜ್ಯದ ಆಗ್ರೋದ ಗ್ರಾಮದಲ್ಲಿ 1400 ಜನರು ವಾಸಿಸುತ್ತಿದ್ದಾರೆ.. ಆದರೆ ಈ ಊರಿನ ಸುತ್ತಮುತ್ತಲಿನ ಜಾಗದಲ್ಲಿ ಒಂದು ಕೆರೆ ಹಾಗು ಬಾವಿ ಇದೇ, ಇನ್ನು ಈ ಗ್ರಾಮದ ಜನರಿಗೆ ಮಳೆಗಾಲದ ಸಮಯದಲ್ಲಿ ಕೃಷಿ ಮಾಡಲು ವ್ಯವಸಾಯ ಮಾಡಲು ಯಾವುದೇ ತೊಂದರೆ ಇರೋದಿಲ್ಲ, ಆದರೆ ಬೇಸಿಗೆ ಸಮಯದಲ್ಲಿ ಅಂತು ಈ ಊರಿನ ಜನರು ನೀರಿಗಾಗಿ ತುಂಬಾನೇ ಕಷ್ಟ ಪಡುತ್ತಿರುತ್ತಾರೆ..
[widget id=”custom_html-2″]

ಅಲ್ಲದೇ ಕೆರೆ ಬಾವಿಗಳು ಕೂಡ ಪೂರ್ತಿಯಾಗಿ ಬತ್ತಿ ಒಣಗಿ ಹೋಗುತ್ತವೆ, ಈ ಒಂದು ಪರಿಸ್ಥಿತಿಯಲ್ಲಿ ಕುಡಿಯಲು, ವ್ಯಾವಸಾಯ, ಮಾಡಲು ನೀರಿನ ಸೌಲಭ್ಯ ಇಲ್ಲದೇ ತುಂಬಾ ಕಷ್ಟ ಪಡುತ್ತಿರುತ್ತಾರೆ, ಆದರೆ ಈ ಊರಿನ ಜನರಿಗೆ ಒಂದು ಆಶಾ ಕಿರಣ ಇದೇ ಅದೇನೆಂದರೆ, ಆ ಗ್ರಾಮದ ಸುತ್ತ ಮುತ್ತ ಇರುವ ಬೆಟ್ಟಗಳು, ಆ ಒಂದು ಬೆಟ್ಟಗಳಿಂದ ವರ್ಷ ಪೂರ್ತಿ ಸರಾಗವಾಗಿ ನೀರು ಹರಿದು ಬರುತ್ತಿರುತ್ತದೆ, ಆದರೆ ಬೆಟ್ಟದಿಂದ ಬರುವ ನೀರು ಅಲ್ಲಿಯೇ ಇರುವ ನದಿಗೆ ನೀರು ಹರಿದುಕೊಂಡು ಹೋಗುತ್ತದೆ.. ಅದರಿಂದ ಸುತ್ತ ಮುತ್ತ ಇರುವ ಬೆಟ್ಟಗಳಿಂದ ಹರಿದು ಬರುವ ನೀರಿನ ಊರಿನ ಕೆರೆಗೆ ಬರುವಂತೆ ಮಾಡಿದರೆ ಊರಿನಲ್ಲಿ ನೀರಿನ ಸಮಸ್ಯೆಯೇ ಇರೋದಿಲ್ಲ.. ಇನ್ನು ಬೆಟ್ಟದಿಂದ ಬರುವ ನೀರನ್ನು ಊರಿನ ಕೆರೆಗೆ ತರುವುದು ತುಂಬಾನೇ ಕಷ್ಟ,
[widget id=”custom_html-2″]

ಯಾಕೆಂದರೆ ಆ ಊರಿನ ಮಧ್ಯೆ ಒಂದಲ್ಲ ಬೆಟ್ಟ ಮಧ್ಯದಲ್ಲಿ ಇರುವ ಕಾರಣ ಆ ಬೆಟ್ಟವನ್ನು ದಾಟಿ ಊರಿಗೆ ನೀರಿನ ಸೌಲಭ್ಯ ಮಾಡಿಕೊಳ್ಳ ಬೇಕು ಎನ್ನುವುದು ಅಲ್ಲಿನ ಜನರ ಕನಸಾಗಿತ್ತು, ಆದರೆ ಈ ಕೆಲಸ ಮಾಡಲು ಅಲ್ಲಿನ ಅರಣ್ಯ ಇಲಾಖೆ ಅವಕಾಶ ಕೊಡದ ಕಾರಣ, ಯಾರು ಕೂಡ ಯೋಚನೆ ಮಾಡಲಿಲ್ಲ, ಇನ್ನು ಆದೇ ಊರಿನ 19 ವರ್ಷದ ಬವಿತಾ ಎನ್ನುವ ಹುಡುಗಿ ಪ್ರತಿನಿತ್ಯ ಅರಣ್ಯ ಇಲಾಖೆಯ ಸುತ್ತಮುತ್ತಲು ತಿರುಗಾಡಿದ ಬವಿತಾ ತಮ್ಮ ನೋವನ್ನು ಅವರಿಗೆ ಮನವರಿಕೆ ಮಾಡಿ ಅರಣ್ಯ ಇಲಾಖೆಯಿಂದ ನೀರಿನ ಸೌಲಭ್ಯ ಮಾಡಿಕೊಳ್ಳಲು ಪರ್ಮಿಷನ್ ಸಿಕ್ಕಿ ಬಿಟ್ಟಿತು.. ಇನ್ನು ಪರ್ಮಿಷನ್ ಸಿಕ್ಕ ಮೇಲೂ ಅಲ್ಲಿನ ಜನರು ಸುಮ್ಮನೆ ಇದು ಬಿಟ್ಟರು..

ಆದರೆ ತನ್ನ ಹನ್ನೆರಡು ಗೆಳೆಯರ ತಂಡ ಕಟ್ಟಿಕೊಂಡು ಬವಿತಾ ಬೆಟ್ಟ ಖಡಿಯಲು ಶುರುಮಾಡಿದರು.. ನಂತರ ಅ ಗ್ರಾಮದ 200 ಮಹಿಳೆಯರು ಬೆಟ್ಟ ಖಡಿಯಲು ಸೇರಿಕೊಂಡರು, ಆದರೆ ಈ ಮಹಿಳೆಯರು ತಮ್ಮ ಮನೆಯ ಎಲ್ಲ ಕೆಲಸ ಮುಗಿದ ಮೇಲೆ ಬೆಟ್ಟ ಖಡಿಯಲು ಬರುತ್ತಿದ್ದರು.. ಇನ್ನು ಈ ಬೆಟ್ಟವನ್ನು ಖಡಿಯಲು ಸುಮಾರು 18 ತಿಂಗಳ ಕಾಲ ಕಷ್ಟಪಟ್ಟು ಅರ್ಧ ಕಿಮೀ ದೂರ ಇರುವ ಈ ಬೆಟ್ಟವನ್ನು ಕಡಿದು ತಮ್ಮ ಊರಿನ ನೀರಿನ ವ್ಯವಸ್ಥೆ ಮಾಡುವಲ್ಲಿ ಯಶಸ್ಸನ್ನು ಸಾಧಿಸಿದರು.. ಗ್ರಾಮದಲ್ಲಿ ಜನರು ಮಾಡಲು ಸಾಧ್ಯವಾಗದ ಈ ಕೆಲಸವನ್ನ 19 ವರ್ಷದ ಈ ಹುಡುಗಿ ಮಾಡಿ ತೋರಿಸಿದ್ದಾರೆ, ಸ್ನೇಹಿತರೆ ಈ ಹುಡುಗಿಯ ಸಾಧನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..