Advertisements

1983 ರಲ್ಲಿ ಮೈಸೂರು ಶ್ರೀಕಂಠದತ್ತ ಮಹಾರಾಜರು ನನಗೆ ಮತ ಹಾಕಿ ಅಂತ ಜನರ ಬಳಿ ಕೇಳಿಲು ಹೋದಾಗ ವಯಸ್ಸಾದ ಅಜ್ಜ ಹೇಳಿದ್ದೇನು ಗೊತ್ತಾ.!

Kannada Mahiti

ನಮಸ್ತೆ ಸ್ನೇಹಿತರೆ, ಮೈಸೂರು ಹೆಸರು ಕೇಳಿದರೆ ಸಾಕು ತಕ್ಷಣ ಎಲ್ಲರಿಗೂ ನೆನಪಾಗುವುದು ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿ, ಇನ್ನು ಈ ದೃಶ್ಯವನ್ನು ನೋಡಲು ಕರ್ನಾಟಕ ಅಲ್ಲದೇ ನಾನಾ ದೇಶಗಳಿಂದ ಜನಸಾಗರವೇ ಮೈಸೂರಿನಲ್ಲಿ ತುಂಬಿರುತ್ತದೆ.. ಆದರೆ ಮೈಸೂರಿನ ಮಹಾರಾಜರಾದ ಶ್ರೀಕಂಠದತ್ತ ಅವರು ರಾಜಕೀಯಕ್ಕೆ ಬಂದಾಗ ಜನ ಅವರಿಗೆ ಹೇಳಿದ್ದೇನು ಗೊತ್ತಾ.. ಬನ್ನಿ ನೋಡೋಣ.. ಹೌದು ಸ್ನೇಹಿತರೆ 1984 ರಲ್ಲಿ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು, ಮತ್ತೆ ಅವರು ಚುನಾವಣೆಗೆ ನಿಂತಿರುವುದು ಮೈಸೂರಿನ ಸುತ್ತಮುತ್ತಲಿನ ಹತ್ತು ಊರುಗಳಲ್ಲಿ, ಇನ್ನು ಇವರು ಚುನಾವಣೆಗೆ ನಿಲ್ಲುವ ವಿಷಯದ ಬಗ್ಗೆ ಪ್ರತಿಯೊಂದು ಮನೆಮಾತಾಗಿತ್ತು.. ಆದರೆ ಚುನಾವಣೆಯಲ್ಲಿ ಸ್ಪರ್ಧಿಸಿದ ಮೇಲೆ ಪ್ರಚಾರಕ್ಕೆ ಹೋಗುವುದು ಸಾಮಾನ್ಯ ವಿಷಯ.. ಆದರೆ ಇವರು ಮೊದಲ ಬಾರಿಗೆ ಪ್ರಚಾರಕ್ಕೆ ಹೋಗಿದ್ದು ಹೆಗ್ಗಡ ಕೋಟೆ‌ ತಾಲ್ಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋರಾಟರು,

[widget id=”custom_html-2″]

Advertisements
Advertisements

ಮೈಸೂರಿನ ಶ್ರೀರಾಮಪುರದ ಬಳಿ ಇರುವ ಸಾಲಹಳ್ಳಿಗೆ ಮೊದಲು ಹೋಗಿದ್ದರು, ಆ ಹಳ್ಳಿಗೆ ಹೋಗಿ ಕಾರಿನಿಂದ ಶ್ರೀಕಂಠ ದತ್ತ ಅವರು ಕೆಳಗೆ ಇಳಿದ ತಕ್ಷಣ ಅಲ್ಲಿ ಸುತ್ತಮುತ್ತಲೂ ಇರುವ ಜನರು ಅವರ ಬಳಿ ಬಂದು ಸೇರಿದರು, ಆಗ ಶ್ರೀಕಂಠದತ್ತರು ಜನರನ್ನು ಕುರಿತು ಭಾಷಣ ಮಾಡಿವ ಸಮಯದಲ್ಲಿ ಜನರು ಪಿಸುಗುಟ್ಟುವ ಮಾತು ಕೇಳಿಸಿತ್ತು, ಆ ಜನರ ಮಧ್ಯೆ ಇದ್ದ 80 ವರ್ಷ ವಯಸ್ಸಾದ ಅಜ್ಜ ಮಹಾರಾಜರ ಮುಂದೆ ನಡುಗುವ ಕೈಯಲ್ಲಿ ಊರೂ ಗೋಲು ಊರಿಕೊಂಡು ಬಂದು ಈ ರೀತಿ ಹೇಳಿದರು, ಅಪ್ಪ ನನ್ನ ದೊರೆ, ನೀವು ನಮಗೆ ಅಪ್ಪ ಇದ್ದಾಗೆ, ನೀವು ನಿಮ್ಮ ತಂದೆ ಅವರ ತಂದೆ ಎಲ್ಲರೂ ಕೂಡ ನಮಗಾಗಿ ನೀರು ನೆರಳು ಊಟ ದೀಪಾ ಔಷಧಿ ಶಾಲೆ ಒಂದಾ ಎರಡಾ ನಮ್ಮನ್ನ ಸಾಕುವುದಕ್ಕೆ, ಅವರ ಜೀವನ ಪೂರ್ತಿ ಮುಡಿಪಾಗಿಟ್ಟು ಹೋದರು, ಅಂತದರಲ್ಲಿ ನೀವು ಇಲ್ಲಿಗೆ ಬರುವುದು ಅಂದ್ರೆ ಏನು, ನೀವು ಈ ರೀತಿ ನಮಗೆ ಕೈ ಮುಗಿಯ ಬಾರದು ನಿಮಗಲ್ಲದೆ ನಾವು ಯಾರಿಗೆ ಮತ ನೀಡಲಿ,

[widget id=”custom_html-2″]

ನಮ್ಮೆಲ್ಲರ ಮತ ನಿಮಗೇನೇ ನೀವು ಈ ರೀತಿ ಬಿಸಿಲಲ್ಲಿ ಬರಬಾರದು ಆರಾಮಾಗಿ ಅರಮನೆಯಲ್ಲಿ ಇರೀ ಮತದಾನದ ಚಿಂತೆ ನಮಗೆ ಬಿಟ್ಟುಬಿಡಿ, ಎಂದು ಹೇಳಿ‌ ಕೈ ಕಟ್ಟಿ ನಿಂತಿದ್ದ ಆ ಹಿರಿಯ ಜೀವವನ್ನು ನೋಡುತ್ತಾ ನಿಂತಿದ್ದ ಶ್ರೀಕಂಠ ದತ್ತ ಅವರ ಕಾಲಿಗೆ ಊರಿನ ಜನ ಸರದಿಯಂತೆ ಬಂದು ಕಾಲಿಗೆ ನಮಸ್ಕರಿಸುತ್ತಾ‌ ಅವರಿಗೆ ಆರತಿ ಮಾಡಿ ಅಲ್ಲಿಂದ ಬೀಳ್ಕೊಡುಗೆ ನೀಡಿದರು.. ಇನ್ನು‌ ಈ ಒಂದು ಸುದ್ದಿ ಕಾಡುಗಿಚ್ಚಿನ ಹಾಗೆ ಇಡೀ ಕೋಟೆ ತಾಲೂಕಿನ ಸುತ್ತಮುತ್ತ ಹಬ್ಬಿತು, ಮಾರನೇ ದಿನ ಪ್ರಚಾರಕ್ಕೆ ಎಂದು ಹೋರಾಟಗಾ ಮಹಾರಾಜರಿಗೆ ಕಾಣಿಸಿದ್ದು ಮೈಸೂರಿನ ಹೆಗ್ಗಡಕೋಟೆಯ ಮುಖ್ಯ ರಸ್ತೆಯ ಅಕ್ಕಪಕ್ಕದ 17 ಹಳ್ಳಿಯ ಜನ ಅರತಿ ಸಮೇತ ರಸ್ತೆಯಲ್ಲಿ ನಿಂತಿದ್ದರು, ಪ್ರತಿಯೊಂದು ಹಳ್ಳಿಯಲ್ಲಿ ರಾಜರಿಗೆ ಹೂವನ್ನು ಚಲಿ ಅರತಿ ಮಾಡುತ್ತಾ ಕಾಲಿಗೆ ನಮಸ್ಕರಿಸಿ ಅವರನ್ನು ಮುಂದಕ್ಕೆ ಕಳುಹಿಸುತ್ತಿದ್ದರು,

[widget id=”custom_html-2″]

ಸ್ನೇಹಿತರೆ ನೀವು ನಂಬುತ್ತೀರೋ ಗೊತ್ತಿಲ್ಲ, ಶ್ರೀಕಂಠದತ್ತ ಅವರು ಇಡೀ ಚುನಾವಣಾ ಪ್ರಚಾರದಲ್ಲಿ ಒಂದು ದಿ ಕೂಡ ನನಗೆ ಮತನೀಡಿ ಎಂದು ಕೇಳಲಿಲ್ಲ, ಯಾಕೆಂದರೆ ಮೈಸೂರಿನ ಜನ ನಮ್ಮ ಮಹರಾಜರು ಎನ್ನುವ ಪ್ರೀತಿಯಿಂದ ಅವರನ್ನು ಲೋಕಸಭೆಗೆ ಕಳುಹಿಸಿ ಕೊಟ್ಟರು.. ಇದ್ದಾಗಿ ಸುಮಾರು 36 ವರ್ಷವಾಯಿತ್ತು, ಆದರೆ ಕೆಲವು ದಿನಗಳ ಹಿಂದೆಯಷ್ಟೇ ಈಗಿನ ಮೈಸೂರು ಮಹರಾಜ ಯದುವೀರ ಕೃಷ್ಣದತ್ತ ಒಡೆಯರು.. ತಮ್ಮ ಪತ್ನಿ ಸಮೇತರಾಗಿ ಮೈಸೂರಿನ ಐತಿಹಾಸಿಕ ದೇವರಾಜ ಮಾರುಕಟ್ಟೆಗೆ ಬೇಟಿ ನೀಡಿದರು, ಅಲ್ಲಿ ತರಕಾರಿ ಹಣ್ಣು ಹಂಪಲು ಖರೀದಿ ಮಾಡಿದರು, ಆ ದಿನ ಪೂರ್ತಿಯಾಗಿ ಇಡೀ ಮಾರುಕಟ್ಟೆ ಸಂಭ್ರಮದಿಂದ ತುಂಬಿತ್ತು, ಅವರು ಕೊಟ್ಟ ಹಣವನ್ನು ಅಲ್ಲಿನ ವ್ಯಾಪಾರಸ್ಥರು ನಿರಾಕರಿಸಿದರು,

ಇನ್ನು ಮಾರುಕಟ್ಟೆಯಲ್ಲಿ ಅವರ ಕಾಲಿಗೆ ನಮಸ್ಕರಿಸಿ ಜನರು ಎಷ್ಟೋ, ಇನ್ನು ಮಕ್ಕಳ ಮನೆಗೆ ಸಾಕ್ಷಾತ್ ತಂದೆಯೇ ಬಂದಹಾಗಿತ್ತು ಅಲ್ಲಿನ ಜನಕ್ಕೆ.. ನೂರಾರು ವರ್ಷಗಳು ಕಳೆದು ಹೋದವು, ಸ್ವಾತಂತ್ರ್ಯ ಬಂದು ಏಳು ದಶಕವಾದರು ಕರ್ನಾಟಕ ಬಹುತೇಕ ಹಳ್ಳಿಯ ಜನರು ಮೈಸೂರಿನ ಮಹಾರಾಜರು ಹಾಗು ಅರಮನೆಯು ಮೇಲೆ ಇರುವ ಭಕ್ತಿ ಗೌರವ ಸಾಸಿವೆಯಷ್ಟು ಕಡಿಮೆಯಾಗಿಲ್ಲ.. ಇಂದಿಗೂ ಕೂಡ ನಮ್ಮ ಕರ್ನಾಟಕದ ಸಾಕಷ್ಟು ಜನರ ಮನೆಯಲ್ಲಿ ಮೈಸೂರಿನ ಮಹಾರಾಜರ ಫೋಟೋಗಳನ್ನು ಇಟ್ಟು ಪೂಜೆ ಮಾಡುತ್ತಿದ್ದಾರೆ.. ಸ್ನೇಹಿತರೆ ಮೈಸೂರಿನ ಮಹಾರಾಜರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..