ಸ್ನೇಹಿತರೆ ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ರೀತಿ ಕಷ್ಟ ಪಡುತ್ತಿರುತ್ತಾರೆ ಆದರೆ ತಮ್ಮ ಕಷ್ಟ ನಿವಾರಣೆ ಮಾಡಿಕೊಳ್ಳಲು ದೇವಸ್ಥಾನಗಳಿಗೆ ಚರ್ಚ್ಗಳಿಗೆ ಹೋಗಿ ಈ ದೇವರ ಬಳಿ ತಮ್ಮ ಕಷ್ಟಗಳನ್ನು ನಿವಾರಣೆ ಮಾಡುವಂತೆ ಹರಕೆ ಮಾಡಿರುತ್ತಾರೆ.. ನಂತರ ಅವರ ಜೀವನದಲ್ಲಿ ಏನಾದರೂ ಬದಲಾವಣೆ ಕಂಡರೆ ಹಾಗೂ ಅವರು ಮಾಡುವ ಕೆಲಸದಲ್ಲಿ ಉತ್ತಮ ಲಾಭ ಬಂದಾಗ ದೇವಸ್ಥಾನಕ್ಕೆ ಹೋಗಿ ತಮ್ಮ ಕೈಲಾದ ಸಹಾಯ ಮಾಡುತ್ತಾರೆ ಇನ್ನು ಕೆಲವರು ತಮ್ಮ ಕಷ್ಟ ನಿವಾರಣೆ ಆದರೂ ಕೂಡ ದೇವರನ್ನು ಮರೆತು ಬಿಡುತ್ತಾರೆ..

ಆದರೆ ಇಲ್ಲೊಬ್ಬ ವ್ಯಕ್ತಿ ಸುಮಾರು 500 ಕೋಟಿಯಷ್ಟು ಹಣವನ್ನು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿದ್ದಾರೆ.. ಹೌದು ಇವರು ತಿರುವನಂತಪುರಂನ ನಿವಾಸಿಯಾದ ಇವರು ಬೆಂಗಳೂರಿನಲ್ಲಿ ಒಬ್ಬ ಉದ್ಯಮಿ ಕೂಡ ಹೌದು ಇನ್ನು ಇವರು ಮಾಡುತ್ತಿದ್ದ ಕೆಲಸದಲ್ಲಿ ಬಂದ ಲಾಭದಿಂದ 500 ಕೋಟಿಯಷ್ಟು ಹಣವನ್ನು ಕೇರಳದ ದೇವಾಲಯದ ಜೀರ್ಣೋದ್ಧಾರಕ್ಕೆ ನೀಡಿದ್ದಾರೆ.. ಇನ್ನು ಈ ದೇವಾಲಯ ಕೊಚ್ಚಿ ನಗರದಿಂದ 15 ಕಿಲೋಮೀಟರ್ ದೂರವಿರುವ ಎರ್ನಾಕುಲಂ ಜಿಲ್ಲೆಯ ಚೊಟ್ಟಾನಿಕ್ಕರ ಭಗವತಿ ವಾಸಸ್ಥಳವಾದ ಈ ದೇವಾಲಯಕ್ಕೆ ಗಣ ಶ್ರವಣ್ ರವರು ದೇಣಿಗೆಯಾಗಿ ತಮ್ಮಲ್ಲಿದ್ದ ಸುಮಾರು 500 ಕೋಟಿ ಹಣವನ್ನು ನೀಡಿದ್ದಾರೆ…

ಹೌದು ಶ್ರವಣ್ ರವರು ಕೇರಳದ ಈ ದೇವಾಲಯಕ್ಕೆ ತಮ್ಮ ಕುಟುಂಬ ಸಮೇತವಾಗಿ ದೇವಸ್ಥಾನಕ್ಕೆ ಬೇಟಿಯಾದ ಬಳಿಕ ಜೀವನದಲ್ಲಿ ಸೋಲನ್ನು ಕಂಡಿದ್ದ ಇವರು ಈ ದೇವಿಯ ಅನುಗ್ರಹದಿಂದ ಅದೃಷ್ಟ ಅನ್ನೋದು ಹೆಚ್ಚಾಯಿತು.. ಹೀಗಾಗಿ ತಮ್ಮ ಜೀವನ ಹಾಗು ವ್ಯವಹಾರದಲ್ಲಿ ಹೆಚ್ಚು ಲಾಭ ಪಡೆಯುತ್ತಿದ್ದರು ಹೀಗಾಗಿ ಶ್ರವಣ್ ರವರು ಲಕ್ಷಾಂತರ ರೂಪಾಯಿ ಹಣವನ್ನು ದೇವಾಲಯಕ್ಕೆ ಕಾಣಿಕೆ ರೂಪದಲ್ಲಿ ನೀಡಿದ್ದಾರೆ.. ಸ್ನೇಹಿತರೆ ಜೀವನದಲ್ಲಿ ನಾವು ಮಾಡುವ ಕೆಲಸಗಳಿಗೆ ಹಾಗು ದೇವರಿಗೆ ಗೌರವ ನೀಡಿದ್ದೆ ಆದಲ್ಲಿ ಒಂದಲ್ಲ ಒಂದು ದಿನ ಆ ಕೆಲಸವೇ ಬಹು ಎತ್ತರಕ್ಕೆ ಬೆಳೆಸುತ್ತದೆ..