Advertisements

ಮದುವೆಯಾದ ಮೊದಲ ದಿನವೇ ಬಡ ಕುಟುಂಬಕ್ಕೆ ಬೆಳಕಾಗಿದೆ ಈ ನವ ಜೋಡಿ!

Inspire

ನಮಸ್ತೆ ಸ್ನೇಹಿತರೆ, ಮದುವೆಯಾದ ಮೊದಲ ದಿನವೇ ಒಂದು ಬಡ ಕುಟುಂಬಕ್ಕೆ ಬೆಳಕು ನೀಡಿದ ಈ ನವ ಜೋಡಿ.. ಉಡುಪಿ ಜಿಲ್ಲೆಯ ಕನ್ನರ್ಪಾಡಿ‌ ನಿವಾಸಿಯಾದ ಶರಣ್ ಶೆಟ್ಟಿ, ನವ್ಯ ಶೆಟ್ಟಿ ತಮ್ಮ ಮದುವೆಯಾದ ಜ್ಞಾಪಕಾರ್ಥವಾಗಿ ಒಂದು ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ನೀಡುವ ಮೂಲಕ ತಮ್ಮ ಸಂತೋಷ ಮತ್ತು ಮಾನವೀಯತೆಯನ್ನು ವ್ಯೆಕ್ತ ಪಡಿಸಿದ್ದಾರೆ, ಸುಮಾರು 30 ವರ್ಷಗಳಿಂದ ಈ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಇಲ್ಲದೆ ತುಂಬಾ ಕಷ್ಟ ಪಟ್ಟಿದ್ದರು ಅಲ್ಲದೆ ಈ ಬುಡಕಟ್ಟು ಕುಟುಂಬಕ್ಕೆ ಯಾರು ಸಹಾ‌ ವಿದ್ಯುತ್ ಸೌಲಭ್ಯವನ್ನು ನೀಡಲು ಮುಂದಾಗಲಿಲ್ಲ ಇದರಿಂದ ಈ ಕುಟುಂಬ ತುಂಬಾನೇ ತೊಂದರೆ ಅನುಭವಿಸಿದರು..

Advertisements
Advertisements

ಇನ್ನು ಈ ಕುಟುಂಬದ ಸಹಾಯಕ್ಕಾಗಿ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಇನ್ನು ಈ ಕುಟುಂಬಕ್ಕೆ ವಿದ್ಯುತ್ ಸಂಪರ್ಕದ ಸಂಪೂರ್ಣ ವೆಚ್ಚವನ್ನು ಈ ನವದಂಪತಿಗಳೆ ವಹಿಸಿಕೊಂಡಿದ್ದಾರೆ, ಈ ನವ ಜೊಡಿ ಉಡುಪಿ ಭಾಷೆಲ್ ಮಿಷನರಿಯಲ್ಲಿ ತಮ್ಮ ಮದುವೆಯನ್ನು ಸಂಪ್ರದಾಯಿಕವಾಗಿ ನೆರವೇರಿಸಿದ್ದಾರೆ ಅಲ್ಲದೆ ಮದುವೆಯಾದರು ಮರು ಕ್ಷಣ ಪೆರಂಪಳ್ಳಿಗೆ ಬಂದು ಲೀಲಾ ಅವರ ಮನೆಗೆ ಬೆಳಕು ನೀಡುವ ಮೂಲಕ ತಮ್ಮ ಮಾನವೀಯತೆ ತೋರಿಸಿದ್ದಾರೆ.. ಈ ನವ ಜೋಡಿ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..