Advertisements

ಟಾ’ಯ್ಲೆಟ್ ನಲ್ಲಿ ಇದ್ದ ಈ ವ್ಯಕ್ತಿಗೆ ಓರ್ವ ಮಹಿಳೆ ಮಾಡಿದ ಕೆಲಸ ನೋಡಿದ್ರೇ ನೀವು ಕೂಡ ಶಭಾಷ್ ಅಂತಿರಾ ಅದೇನು ಗೊತ್ತಾ? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಮಾನವೀಯತೆ ಅನ್ನೊದು ಈಗಿನ ಕಾಲದಲ್ಲಿ ಕಡಿಮೆ ಆಗುತ್ತಿದೆ. ಯಾಕೆಂದರೆ ರಸ್ತೆಯಲ್ಲಿ ಯಾರಾದರೂ ಕಷ್ಟದಲ್ಲಿ ಇದ್ದವರನ್ನು ನೋಡಿ ಅವರಿಗೆ ತಮ್ಮ ಕೈಲಾದ ಸಹಾಯ ಮಾಡದೆ ಇದೆಲ್ಲ ನಮಗ್ಯಾಕೆ ಎಂದು ಹೇಳುವವರೆ ಜಾಸ್ತಿಯಾಗಿದ್ದಾರೆ.. ಇನ್ನೂ ಈ ರೀತಿಯಾಗಿ ತುಂಬಾ ಜನರು ಇದ್ದರೂ ಕೂಡ ಅದರಲ್ಲಿ ಒಬ್ಬರು ಅಥವಾ ಇಬ್ಬರು ಮಾನವೀಯತೆ ಗುಣವನ್ನು ಹೊಂದಿರುತ್ತಾರೆ.. ಅದರೆ ಟಾ’ಯ್ಲೆಟ್ ನಲ್ಲಿ ಇದ್ದ ಈ ವ್ಯಕ್ತಿಗೆ ಓರ್ವ ಮಹಿಳೆ ಮಾಡಿದ ಕೆಲಸ ನೋಡಿ ಪ್ರತಿಯೊಬ್ಬರು ಕೂಡ ಶಭಾಷ್ ಎಂದಿದ್ದಾರೆ.. ಅಷ್ಟಕ್ಕೂ ಈ ಮಹಿಳೆ ಟಾ’ಯ್ಲೆಟ್ ನಲ್ಲಿ ಮಾಡಿದ್ದೇನು ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ರಾಜ ಸುಂದರಂ ಎನ್ನುವ ವ್ಯಕ್ತಿ ಸೇಲಂನಲ್ಲಿ ವಾಸಿಸುತ್ತಿದ್ದರು..

[widget id=”custom_html-2″]

Advertisements
Advertisements

ಈ ವ್ಯಕ್ತಿಗೆ 52 ವರ್ಷ ವಯಸ್ಸಾಗಿತ್ತು. ಆದರೆ ಆರು ತಿಂಗಳ ಹಿಂದೆಯಷ್ಟೇ ರಾಜ ಸುಂದರಂ ಅವರ ಪತ್ನಿ ಮರಣ ಹೊಂದಿದರು.. ಇವರಿಗೆ ಇಬ್ಬರೂ ಗಂಡು ಮಕ್ಕಳಿದ್ದರೂ. ಇಬ್ಬರಿಗೂ ಕೂಡ ಮದುವೆ ಮಾಡಿ ಸಂತೋಷದಿಂದ ಜೀವನ ಮಾಡುತ್ತಿದ್ದಾರೆ.. ಇನ್ನೂ  ಪತ್ನಿ ವಿಧಿವಶರಾದ ಮೇಲೆ ರಾಜ ಸುಂದರಂ ಅವರಿಗೆ ಒಂಟಿತನ ಹೆಚ್ಚಾಯಿತು.. ಇದರ ಮಧ್ಯೆ ತಿರುಚಂದೂರ್ ನಲ್ಲಿ ದೇವಸ್ಥಾನಕ್ಕೆ ಹೋಗಲು ಒಂದು ಬಸ್ ನಲ್ಲಿ‌ ಪ್ರಾಯಣ ಮಾಡುತ್ತಿದ್ದರು.. ನಂತರ ತಮ್ಮ ಪ್ರಯಾಣದ ಮದ್ಯದಲ್ಲಿ ಬಸ್ ನವರು ಮಧ್ಯಾಹ್ನದ ಊಟಕ್ಕಾಗಿ ಬಸ್ ಅನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದರು.. ಈ ಸಂದರ್ಭದಲ್ಲಿ ರಾಜ ಸುಂದರಂ ಅವರು ನಿತ್ಯ ಕರ್ಮಕ್ಕೆ ಎಂದು ಹೋಟೆಲ್ ಪಕ್ಕದಲ್ಲಿ ಇದ್ದ ಒಂದು ಟಾಯ್ಲೆಟ್ ಗೆ ಹೋದರು ಆಗ ಅವರಿಗೆ ತಲೆಸುತ್ತು ಬಂದು ಜ್ಞಾನ ತಪ್ಪಿ ಕೆಳಗೆ ಬಿದ್ದಿದ್ದರು..

[widget id=”custom_html-2″]

ಆಗ ಟಾಯ್ಲೆಟ್ ನಲ್ಲಿ ಜೋರಾಗಿ ಒಂದು ಶಬ್ದ ಕೇಳಿಸಿತ್ತು.. ಇನ್ನೂ ಲೇಡೀಸ್ ಟಾಯ್ಲೆಟ್ ಗೆ ಹೋಗಿದ್ದ ರಮಾದೇವಿ ಎನ್ನುವ ಮಹಿಳೆ ಏನೋ ಶಬ್ದ ಬಂತಲ್ಲ ಎಂದು ಜೆಂಟ್ಸ್ ಟಾಯ್ಲೆಟ್ ಒಳಗೆ ಬಗ್ಗಿ ನೋಡಿದಾಗ ಯಾರೋ ಒಬ್ಬ ವ್ಯಕ್ತಿ ಟಾಯ್ಲೆಟ್ ನಲ್ಲಿ ಬಿದ್ದು ಹೋಗಿದ್ದರು.. ಆಗ ರಮಾದೇವಿ ಅಲ್ಲಿಯೇ ಹೋಟೆಲ್ ನಲ್ಲಿ ಇದ್ದ ಇಬ್ಬರು ವ್ಯಕ್ತಿಗಳ ಸಹಾಯ ಪಡೆದು ಟಾಯ್ಲೆಟ್ ನಲ್ಲಿ ತಲೆಸುತ್ತಿ ಕೆಳಗೆ ಬಿದ್ದಿದ ರಾಜಸುಂದರಂ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.. ನಂತರ ಅಲ್ಲಿ ತಿಳಿದು ಬಂದ ವಿಷಯ ಏನೆಂದರೆ ರಾಜಸುಂದರಂ ಅವರಿಗೆ ಲೋ ಬಿಪಿ ಆಗಿತ್ತು.. ಮತ್ತು ಇವರು ಊಟ ಮಾಡಿ ಮಾತ್ರೆಗಳನ್ನು ತೆಗೆದುಕೊಳ್ಳ ಬೇಕಿತ್ತು ಆದರೆ ಮಾತ್ರೆ ತೆಗೆದುಕೊಳ್ಳುವುದು ತಡವಾಗಿದ್ದರಿಂದ ಈ ರೀತಿ ಆಯಿತು ಎಂದು ಅಲ್ಲಿನ ವೈದ್ಯರು ತಿಳಿಸಿದ್ದರು.. ನಂತರ ಅವರ ಮಗ ರಾಜಶೇಖರ್‌ನನ್ನು ಆಸ್ಪತ್ರೆಗೆ ಕರೆಸಿಕೊಂಡರು ಆಗ ರಾಜಸುಂದರಂ ಅವರ ಬಗ್ಗೆ ಎಲ್ಲಾ ವಿಷಯವನ್ನು ತಿಳಿಸಿದ್ದರು..

[widget id=”custom_html-2″]

ರಮಾದೇವಿ ಅವರು ಟಾಯ್ಲೆಟ್ ನಲ್ಲಿ ಬಿದ್ದಿದ ರಾಜಸುಂದರಂ ಅವರಿಗೆ ಸಹಾಯ ಮಾಡದಿದ್ದರೆ ಅವರ ಪ್ರಾಣಕ್ಕೆ ಅಪಾಯವಾಗುತ್ತಿತ್ತು.. ಮಹಿಳೆ ಮಾಡಿದ ಸಹಾಯದ ಬಗ್ಗೆ ಮತ್ತು ಅಲ್ಲಿ ನಡೆದ ಘ’ಟನೆಯನ್ನು ರಾಜಸುಂದರಂ ಅವರ ಮಗ‌ ರಾಜಶೇಖರ ತನ್ನ ಪೇಸ್ ಬುಕ್ ಖಾತೆಯಲ್ಲಿ ಬರೆದು ಹಂಚಿಕೊಂಡು ತನ್ನ ತಂದೆಯನ್ನು ಕಾಪಾಡಿದ ರಮಾದೇವಿ ಅವರಿಗೆ ಧನ್ಯವಾದವನ್ನು ತಿಳಿಸಿದ್ದರು.. ಯಾವಾಗಲೂ ಅಷ್ಟೇ ಕೇವಲ ನಮ್ಮ ಸ್ವಾರ್ಥಕ್ಕಾಗಿ ಬದುಕುವುದಕ್ಕಿಂತ‌‌ ಕಷ್ಟದಲ್ಲಿ ಇರುವ ವ್ಯಕ್ತಿಗಳ ಸ್ಪಂಧಿಸಿದರೆ ಅದಕ್ಕಿಂತ ದೊಡ್ಡತನ ಮತ್ತೊಂದಿಲ್ಲ ಅಂತ ಹೇಳಬಹುದು.. ಸ್ನೇಹಿತರೆ ಈ ಮಹಿಳೆ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..