Advertisements

ಸ್ಯಾಂಡಲ್ವುಡ್ ನಟಿ ಅಮೂಲ್ಯ ತಮ್ಮ ಹುಟ್ಟು ಹಬ್ಬಕ್ಕೆ ಖರ್ಚು ಮಾಡುವಂತಹ ಹಣವನ್ನು ರಾಮ ಮಂದಿರ ನಿರ್ಮಾಣ ದೇಣಿಗೆಯಾಗಿ ನೀಡಿದ್ದಾರೆ! ಅಮೂಲ್ಯ ಕೊಟ್ಟ ದೇಣಿಗೆ ಮೊತ್ತ ಎಷ್ಟು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ಕನ್ನಡ ಚಿತ್ರರಂಗ‌ ಕಂಡ ಅದ್ಬುತ ನಟಿ ಎಂದರೆ ಅದು ಅಮೂಲ್ಯರವರು ಇವರು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು.. ನಂತರ ನಟ ಗೋಲ್ಡನ್ ಸ್ಟಾರ್ ಗಣೇಶ್ ರವರ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ.. ಇದೇ ರೀತಿ ಕನ್ನಡದ ಹಲವಾರು ಸಿನಿಮಾಗಳಲ್ಲಿ ಅಮೂಲ್ಯ ರವರು ನಟಿಸಿದ್ದಾರೆ.. ಅಲ್ಲದೆ ಅಮೂಲ್ಯ ರವರು ಜಗದೀಶ್ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು‌.. ನಂತರ ಜೀವನದಲ್ಲಿ ಸಂತೋಷವಾಗಿದ ನಟಿ ಅಮೂಲ್ಯ ರವರು ಒಂದು ಮಹತ್ವದ ಕೆಲಸ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ..‌ ನಟಿ ಅಮೂಲ್ಯ ಮಾಡಿದ ಸಹಾಯ ಧನವಾದರು ಏನು ಎಂಬುದನ್ನು ಇಲ್ಲಿ ಪೂರ್ತಿಯಾಗಿ ತಿಳಿಯೋಣ..

[widget id=”custom_html-2″]

Advertisements
Advertisements

ಹೌದು ಆಯೋದ್ಯಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರ ಭವ್ಯ ನಿರ್ಮಾಣಕ್ಕಾಗಿ, ದೇಣಿಗೆಯ ಸಂಗ್ರಹಕ್ಕೆ ಸಮರ್ಪಣಾ ಅಭಿಯಾನಕ್ಕೆ ದೇಶದ ಹಲವಾರು ಜನರಿಂದ ಹಾಗು ಸಂಘ ಸಂಸ್ಥೆಗಳಿಂದ ಸಾಕಷ್ಟು ಸಹಕಾರ ಪ್ರೋತ್ಸಾಹ ದೊರೆತಿದೆ.. ಇನ್ನು ಜನವರಿ15 ರಂದು ಆರಂಭವಾದ ಸಮರ್ಪಣಾ ಅಭಿಯಾನಕ್ಕೆ ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರು, ರಾಜಕಾರಣಿಗಳು, ಕ್ರೀಡಾಪಟುಗಳು, ದೊಡ್ಡ ಪ್ರಮಾಣದ ದೇಣಿಗೆ ನೀಡುವುದರ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಕೈಜೋಡಿಸಿದಾರೆ..‌ ಇನ್ನು ಸ್ಯಾಂಡಲ್ವುಡ್ ನಟಿ ಅಮೂಲ್ಯ ಜಗದೀಶ್ ರವರು ಕೂಡ ರಾಮ ಮಂದಿರ ನಿರ್ಮಾಣಕ್ಕೆ 1.5 ಲಕ್ಷವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.. ಅಲ್ಲದೆ ಅಮೂಲ್ಯ ಅವರ ಮಾವ ರಾಮಚಂದ್ರರವರು ಕೂಡ 1ಲಕ್ಷವನ್ನು‌ ದೇಣಿಗೆ‌ ನೀಡಿದ್ದಾರೆ..

ಇನ್ನು ಇದರ ಬಗ್ಗೆ ಅಮೂಲ್ಯ ದಂಪತಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಸಮರ್ಪಣಾ ಅಭಿಯಾನ ನಡೆಯುತ್ತಿದ್ದು.. ಪ್ರತಿಯೊಬ್ಬರೂ ಕೂಡ ಅದರಲ್ಲಿ ಭಾಗವಹಿಸುತ್ತಿದ್ದಾರೆ.. ನಟಿ‌ ಅಮೂಲ್ಯ ರವರು ನಮ್ಮ ಮನೆಗೆ ಆಗಮಿಸಿದ ಬಿಜೆಪಿ ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ಕುಮಾರ್ ರವರಿಗೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆಯ ಮೊತ್ತವನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.. ಅಲ್ಲದೆ ಪ್ರತಿ ವರ್ಷ ನಮ್ಮ ಹುಟ್ಟು ಹಬ್ಬಕ್ಕೆ ಖರ್ಚು ಮಾಡುತ್ತಿದ್ದ ಈ ಹಣವನ್ನು ಇಂತಹ ಮಹತ್ವ ಕಾರ್ಯಕ್ಕೆ ಬಳಸುತ್ತಿರುವ ಸಾರ್ಥಕ ಎಂದು‌ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.. ಇನ್ನು ನಟಿ ಅಮೂಲ್ಯ ಮಾಡಿದ ಈ ಕಾರ್ಯದ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ..