Advertisements

ಶ್ರೀ ಮಂಜುನಾಥ್ ಸಿನಿಮಾದಲ್ಲಿ ನಟಿಸಿದ್ದ ಈ ಬಾಲ ಯಾರು, ಈಗ ಹೇಗಿದ್ದಾರೆ ಗೊತ್ತಾ.!

Cinema

ನಮಸ್ತೆ ಸ್ನೇಹಿತರೆ, 90ರ‌‌ ದಶಕದ ‌ಕನ್ನಡ‌‌ ಚಿತ್ರ ರಂಗದಲ್ಲಿ ಬಾಲ ನಟ ನಟಿಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು, ಅವರನ್ನೇ ಪ್ರಧಾನ ಪಾತ್ರಗಳಲ್ಲಿ ಸ್ಪೂರ್ತಿಯಾಗಿ ಮಾಡಿಕೊಂಡು‌ ಅವರಿಂದ ತುಂಟಾಟ ಹಾಗು ಜನರು ಹೃದಯ ಸ್ಪರ್ಶಿಸುವ ಚಿತ್ರಗಳನ್ನು ಮಾಡುತ್ತಿದ್ದರು, ಅಲ್ಲದೇ ಅಂತಹ ಸಿನಿಮಾಗಳನ್ನು ಕುಟುಂಬದವರು ಒಟ್ಟಿಗೆ ಕುಳಿತು ಸಿನಿಮಾ ನೋಡಿ ಖುಷಿ ಪಡುತ್ತಿದ್ದರು.. ಇನ್ನು ಆ ಸಮಯದಲ್ಲಿ ಬೇಬು ಶಾಮಿಲಿ, ಮಾಸ್ಟರ್ ಮಂಜುನಾಥ್, ಮಾಸ್ಟರ್ ಆನಂದ್ ರಾವ್, ಇಂತಹ ಅದ್ಭುತವಾದ ಬಾಲ ಕಲಾವಿದರು ಬೆಳ್ಳಿ ತೆರೆಯ ಮೇಲೆ ಮಿಂಚಿದ್ದರು.. ಅನಂತರ ಕಲೆಗಿಂತ ಬಂಡವಾಳದ ಕಡೆ ವಾಲಿದ ಚಿತ್ರರಂಗದಲ್ಲಿ ಆಸಕ್ತಿದಾಯಕ ಸಿನಿಮಾಗಳು ಚಿತ್ರೀಕರಣ ವಾಗುವುದು ಕಡಿಮೆಯಾಯಿತು..

Advertisements
Advertisements

ಒಂದು ಕಾಲದಲ್ಲಿ ಈ ಬಾಲ ನಟ ಕೂಡ ತುಂಬಾನೇ ಫೇಮಸ್ ಆಗಿದ್ದ, ಪ್ರತಿಯೊಬ್ಬರ ಮನಸಿನ ನೆಲೆಸಿದ, ‌ಅಷ್ಟಕ್ಕೂ ಆ ಬಾಲ ನಟ ಯಾರು ಗೊತ್ತಾ.? ನೋಡೋಣ ಬನ್ನಿ.. ಈ ಬಾಲ ನಟನ ಹೆಸರು ಆನಂದ್ ವರ್ಧನ್ ಕನ್ನಡದ‌ ಭಕ್ತಿ ಸಿನಿಮಾವಾದ ಶ್ರೀ ಮಂಜುನಾಥ ಚಿತ್ರದಲ್ಲಿ ಅರ್ಜುನ್ ಸರ್ಜಾ ಹಾಗು ನಟಿ‌ ಸೌಂದರ್ಯ ಅವರ ಮಗನಾಗಿ ನಟಿಸಿದ್ದರು, ಮಗನ ಪಾತ್ರವನ್ನು ಮಾಡುವ ಮೂಲಕ ತನ್ನ ಮುದ್ದಾದ ಮಾತುಗಳಿಂದ ಪ್ರತಿಯೊಬ್ಬರ ಮನೆ ಮಾತಾದರು.. ಇನ್ನು ತೆಲುಗು ಸಿನಿಮಾದಲ್ಲಿ ತುಂಬಾ ಫೇಮಸ್ ಆಗಿದ ಈ ಬಾಲ ನಟ, ತೆಲುಗು ಮತ್ತು ಹಿಂದಿ ಭಾಷೆಯ ಸೂರ್ಯವಂಶ ಸಿನಿಮಾದಲ್ಲಿ ನಟಿಸಿ‌ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ಬಾಲ ನಟನಾಗಿದ್ದ, ಇನ್ನು ಬಾಲ್ಯದಲ್ಲೇ 25 ಸಿನಿಮಾಗಳಲ್ಲಿ ನಟಿಸಿದ್ದ ಈ ನಟ ಪ್ರಿಯಾ ರಾಗಾಲು ಸಿನಿಮಾದಿಂದ ಸ್ಟೇಟ್ ಅವಾರ್ಡ್ ಕೂಡ ಪಡೆದಿದ್ದರು..

ನಂತರ ತನ್ನ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿದ ಆನಂದ್ ವರ್ಧನ್, ಈಗ ಎಲ್ಲಿದ್ದಾರೆ ಮತ್ತು ಹೇಗಿದ್ದಾರೆ ಗೊತ್ತಾ? ತನ್ನ ವಿದ್ಯಾಭ್ಯಾಸ ಪೂರ್ತಿಯಾಗಿ ಮುಗಿಸಿ ಹೈದರಾಬಾದ್ ನಲ್ಲಿ ವಾಸಿಸುತ್ತಿದ್ದು.. ಈಗಾಗಲೇ,‌ ನಟನೆ,‌ ಡ್ಯಾನ್ಸ್‌ ಇಂಗ್ ಮಾರ್ಷಲ್‌ ಆರ್ಟ್ಸ್ ಕಲಿತ್ತಿರುವ ಆನಂತರ ವರ್ಧನ್ ಅವರು ಈಗ ಹೀರೋ ಹಾಗಿ ಸಿನಿಮಾ ಪರದೆಯ ಮೇಲೆ ಪಯಣ ಪ್ರಾರಂಭಿಸಲು ಶುರು ಮಾಡಿದ್ದಾರೆ.. ವಿಭಿನ್ನ ಕಥೆಗಳಿಗಾಗಿ ಕಾಯುತ್ತಿರುವ ಈ ನಟ, ಮತ್ತೆ ತೆರೆಯ ಮೇಲೆ ತನ್ನ ನಟನೆಯಿಂದ ಜನಮನ ಸೆಳೆಯಲು ಮುಂದ್ದಾಗಿದ್ದಾರೆ.. ಶ್ರೀ ಮಂಜುನಾಥ್ ಸಿನಿಮಾದಲ್ಲಿ ಬಾಲ ನಟನಾಗಿ ಮಿಂಚಿದ ಈ ನಟನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..