Advertisements

ವೈರಲ್ ಆಯ್ತು ನಟ ಅನಿರುದ್ಧ್ ಅವರ ಫ್ಯಾಮಿಲಿ ಫೋಟೋಗಳು! ಕುಟುಂಬದ ಜೊತೆ ಸಮಯ ಕಳೆಯಲು ಅನಿರುದ್ಧ್ ರವರು ಹೋಗಿದ್ದು ಎಲ್ಲಿಗೆ ಗೊತ್ತಾ.!

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನ ಯುವ ನಟ ಎಂದು ಕರೆಸಿಕೊಳ್ಳುವ ನಟ ಅನಿರುದ್ಧ್ ರವರು ಸ್ವಲ್ಪ ದಿನಗಳ ಕಾಲ ನಟನೆಗೆ ಬ್ರೇಕ್ ನೀಡಿ ನಟ ಅನಿರುದ್ಧ ರವರು ಮಾಲ್ಡೀವ್ಸ್ ಪ್ರವಾಸದಲ್ಲಿ ತಮ್ಮ ಕುಟುಂಬ ಸಮೇತವಾಗಿ ಎಂಜಾಯ್ ಮಾಡುತ್ತಿದ್ದರು.‌. ಅಲ್ಲದೆ ತಮ್ಮ ಕುಟುಂಬದ ಜೊತೆ ಮಾಲ್ಡೀವ್ಸ್ ಪ್ರವಾಸದಲ್ಲಿ ಕಳೆದ ಫೋಟೋಗಳನ್ನು ಅನಿರುದ್ಧ್ ರವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.. ಹೌದು ಜೊತೆ ಜೊತೆಯಲಿ ಧಾರವಾಹಿಯ ಸೆನ್ಸೇಷನಲ್ ಹೀರೋ ಎಂದೆನಿಸಿಕೊಂಡ ನಟ ಅನಿರುದ್ದ್ ಅವರು ಚಿತ್ರೀಕರಣದಿಂದ ಬ್ರೇಕ್ ಪಡೆದು ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ..

Advertisements
Advertisements

ಇನ್ನು ‘ಧಾರಾವಾಹಿ ಚಿತ್ರೀಕರಣದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕುಟುಂಬಕ್ಕೆ ಸ್ವಲ್ಪ ಸಮಯ ನೀಡದಿದ್ದರೆ ನಾವು ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರು ಕೂಡ ಅದಕ್ಕೆ ಬೆಲೆ ಇಲ್ಲ’ ಈ ರೀತಿ ಕುಟುಂಬಕ್ಕೆ ತನ್ನದೇ ಆದ ಪ್ರಾಮುಖ್ಯತೆಯನ್ನು ನೀಡಬೇಕು ಎನ್ನುವ ನಟ ಅನಿರುದ್ದ್ ರವರು ಆಗಾಗ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಕುಟುಂಬದವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿರುತ್ತಾರೆ.. ಇನ್ನು ಕಳೆದವಾರ ಪತ್ನಿ ಕೀರ್ತಿ ವಿಷ್ಣುವರ್ಧನ್ ಮಕ್ಕಳಾದ ಜೇಷ್ಠ ವರ್ಧನ್ ಶ್ಲೋಕ ಹಾಗೂ ಭಾರತಿ ವಿಷ್ಣುವರ್ಧನ್ ರವರ ಜೊತೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದು ಅದರ ಕೆಲವು ಫೋಟೋಗಳನ್ನು ನಟ ಅನಿರುದ್ಧ್ ಅವರು ಹಂಚಿಕೊಂಡಿದ್ದಾರೆ..

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದ ನಟ ಅನಿರುದ್ಧ ರವರು ಕೇವಲ ಅಭಿಮಾನಿಗಳೊಂದಿಗೆ ಮಾತನಾಡಲು ಅಷ್ಟೇ ಅಲ್ಲದೆ, ಫೇಸ್ಬುಕ್ ಖಾತೆಯಲ್ಲಿ ಸ್ವಚ್ಛತೆಗೆ ಸಂಬಂಧಪಟ್ಟಂತೆ ಯಾರಾದರೂ ಫೋಟೋಗಳನ್ನು ಅವರಿಗೆ ಕಳುಹಿಸಿದರೆ ತಮ್ಮ ಖಾತೆಯ ಮೂಲಕ ಜನತೆಗೆ ತಿಳಿಸುತ್ತಿದ್ದರು.. ಸದ್ಯ ಅವರೆ ಹೋಗಿ ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು, ಅಷ್ಟೇ ಅಲ್ಲದೆ ಸ್ವಚ್ಛತೆಗೆ ಸಂಬಂಧಪಟ್ಟಂತೆ ಆಯಾ ಸ್ಥಳಗಳಲ್ಲಿ ಆ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಸ್ಯೆ ಸರಿಪಡಿಸುವಂತೆ ಅವರೊಂದಿಗೆ ಮಾತನಾಡುತ್ತಿದ್ದರು. ಎಲ್ಲಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದ ಅನಿರುದ್ದ್ ರವರು ಕುಟುಂಬಕ್ಕೆ ಸ್ವಲ್ಪ ಸಮಯ ಕೊಟ್ಟು ನಂದಿ ಬೆಟ್ಟ, ಚಿಕ್ಕಮಂಗಳೂರು ಧರ್ಮಸ್ಥಳ ಶೃಂಗೇರಿ ಹೀಗೆ ರಾಜ್ಯದ ಅನೇಕ ಪ್ರವಾಸಿ ತಾಣಗಳಿಗೆ ತಮ್ಮ ಕುಟುಂಬದ ಜೊತೆ ಪ್ರವಾಸ ಹೋಗುತ್ತಿದ್ದರು ಅಲ್ಲದೆ ಪ್ರವಾಸದ ಕೆಲವು ಫೋಟೋಗಳನ್ನು ಕೂಡ ನಟ ಅನಿರುದ್ಧ ರವರು ಹಂಚಿಕೊಳ್ಳುತ್ತಿದ್ದರು…