Advertisements

ಜೀವನದಲ್ಲಿ ನಿರೂಪಕಿಯಾಗಬೇಕು ಎಂದು ಕನಸು ಕಂಡಿದ್ದ ನಟಿ ಅನ್ವಿತಾ ಸಾಗರ್ ಈಗ ಮಿಂಚುತ್ತಿರುವುದು ನಟಿಯಾಗಿ!

Cinema

ನಮಸ್ತೆ ಸ್ನೇಹಿತರೆ, ಈಗಿನ ಧಾರಾವಾಹಿಗಳು ಸಿನಿಮಾವನ್ನು ಹಿಂದೇಟು ಹಾಕುವಂತೆ ಮೂಡಿಬರುತ್ತಿವೆ ಅಲ್ಲದೆ ಧಾರಾವಾಹಿಯಲ್ಲಿ ನಟಿಸುವ ನಟ ನಟಿಯರು ಕೂಡ ಸಿನಿಮಾ ಹೀರೋ ಹೀರೋಯಿನ್ ಗಿಂತ ಹೆಚ್ಚು ಫೇಮಸ್ ಹಾಗಲ್ಲಿದ್ದಾರೆ.. ಅಲ್ಲದೆ ಧಾರಾವಾಹಿಯಲ್ಲಿ ನಟಿಸುವ ನಟ ನಟಿಯರನ್ನು ನೋಡಲು ಹೆಚ್ಚು ಹೆಚ್ಚಿನ ಜನಸಾಗರವೇ ತುಂಬಿರುತ್ತದೆ ಇದರಿಂದ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.. ಅದರಲ್ಲಿ ಗಟ್ಟಿಮೇಳ ಧಾರಾವಾಹಿಯ ಆದ್ಯ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ.. ಇವರು ತಮ್ಮ ಜೀವನದಲ್ಲಿ ನಿರೂಪಕಿಯಾಗಬೇಕು‌ ಎನ್ನುವ ಕನಸು ಕಂಡಿದ್ದರು ಆದರೆ ಇವರ‌ ಅದೃಷ್ಟವೋ ನಿರೂಪಕಿ ಇವರ ಕನಸು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ನೀಡಿತು..

Advertisements
Advertisements

ಆದರೆ ನಟಿ‌ ಆದ್ಯರವರ ಕನಸು ಮುಂದೇನಾಯಿತು ಪೂರ್ತಿಯಾಗಿ ತಿಳಿಯೋಣ ಬನ್ನಿ.. ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಆದ್ಯ ಹೆಸರಿನ ಅನ್ವಿತಾ ಸಾಗರ್ ಅವರಿಗೆ ಧಾರಾವಾಹಿಯಲ್ಲಿ ಅಭಿನಯಿಸಬೇಕು, ಹಾಗೇಯೇ ಬಣ್ಣದ ಲೋಕದಲ್ಲಿ‌ ತನನ್ನು ಗುರುತಿಸಿಕೊಳ್ಳಬೇಕು ಎಂಬ ಯಾವುದೊಂದೇ ಮಹಾದಾಸೆ ಅಥವಾ ಕನಸು ಇರಲಿಲ್ಲವೆಂದು ಹೇಳಿದ್ದಾರೆ.. ಆದರೆ ಇದು ನನ್ನ ಅದೃಷ್ಟವೇನ್ನೊ ಬಯಸದೇ ಬಂದ ಅವಕಾಶ! ಆಕಸ್ಮಿಕವಾಗಿ ನಾನು ನಟನಾ ಕ್ಷೇತ್ರಕ್ಕೆ ಬಂದ ಅನ್ವಿತಾ ಹೆಸರಿನಿಂದ ಕಿರುತೆರೆಯ ವೀಕ್ಷಕರ ಪಾಲಿನ ಇಂದು ನಾನು ಪ್ರೀತಿಯ ಆದ್ಯಾ ಹೌದು.. ಇಂದಿನವರೆಗೂ ನನ್ನನ್ನು ಅನ್ವಿತಾ ಸಾಗರ್ ಎನ್ನುವ ಬದಲು ಗಟ್ಟಮೇಳ ಧಾರಾವಾಹಿಯ ಆದ್ಯ ಎಂದೆ ಜನ ಗುರುತಿಸುತ್ತಾರೆ ಎಂದು ಹೇಳಿದ್ದಾರೆ..

ನಟಿ ಅನ್ವಿತಾ ಸಾಗರ್ ರವರು ಮಂಗಳೂರಿನಲ್ಲಿ ಎಂಬಿಎ ವಿದ್ಯಾಭ್ಯಾಸ ಪಡೆಯುತ್ತಿರುವಾಗ ಸ್ಥಳಿಯ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸಕ್ಕೆ ಸೇರಿದರು. ಅಲ್ಲ ಸ್ಥಳೀಯ ಟಿವಿಯಲ್ಲಿ ನಿರೂಪಕಿಯಾಗಿ ಆಂಕರ್ ವೃತ್ತಿಯನ್ನು ಆರಂಭಿಸಿದ ಅನ್ವಿತಾ ರವರು ಇನ್ನು ಮುಂದೆ ಕೇವಲ ವಾಹಿನಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವುದು ಅಲ್ಲದೆ ಒಂದಷ್ಟು ಕಾರ್ಯಕ್ರಮಗಳ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದರು, ಎಂದು ತಿಳಿದು ಬಂದಿದೆ.. ಕೇವಲ ನಿರೂಪಕಿ ಅಲ್ಲದೆ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.. ಹೌದು ಇವರು ತುಳು ಸಿನಿಮಾದ ದಂಡ್ ಎಂಬ ಸಿನಿಮಾ ಮೂಲಕ ನಟನ ಲೋಕಕ್ಕೆ ಪ್ರಯಾಣ ಮಾಡಿದರು.. ಅದಲ್ಲದೇ ಅನ್ವಿತಾ ಮೊದಲ ಸಿನಿಮಾದ ಮೂಲಕ ಕೋಸ್ಟಲ್ ವುಡ್ ನಲ್ಲೂ ಕೂಡ ಒಂದು ಹೊಸ ಹವಾ ಸೃಷ್ಟಿ ಮಾಡಿದ್ದರು.. ನಂತರ ಬಲೆ ಪುದರ್ ದೀಕ, ಪೆಟ್ ಕಮ್ಮಿ ಎಂಬ ತುಳು ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದ ಅನ್ವಿತಾ ಸಾಗರ್ ರವರು ಮತ್ತೆ ಕಾಲಿಟ್ಟಿದ್ದು ಕಿರುತೆರೆ ಧಾರಾವಾಹಿಯಲ್ಲಿ ಮಾತ್ರ..

ಇನ್ನು ತಮ್ಮ ಬಣ್ಣದ ಲೋಕದ ಬಗ್ಗೆ ಮಾತನಾಡಿದ ನಟಿ ಅನ್ವಿತಾ ಸಾಗರ್ ರವರು ‘ ಜೀವನದಲ್ಲಿ ನಟನೆ ಎಂಬುದು ಮಾತಿನಲ್ಲಿ ಹೇಳುವ ಮಾತಲ್ಲ’ ಬಣ್ಣದ ಲೋಕದ ಕನಸು ಕಾಣುವುದು ತುಂಬಾ ಸುಲಭ ಆದರೆ, ಅದನ್ನು ಸಾಧಿಸಲು ಜೀವನದಲ್ಲಿ ತುಂಬಾ ಕಷ್ಟ ನೋವುಗಳನ್ನು ಅನುಭವಿಸಬೇಕು ಅಲ್ಲದೆ ಕನಸನ್ನು ನನಸು ಮಾಡಿಕೊಳ್ಳುವ ದೃಢನಿರ್ಧಾರ ಇರಬೇಕು.. ಇನ್ನು‌ ನಾವು ಮಾಡುವ ಕೆಲಸದ ಮೇಲೆ ಸತತ ಪ್ರಯತ್ನ ಇರಬೇಕು ಎಂದು ಹೇಳಿದ್ದಾರೆ.. ನಟಿ ಅನ್ವಿತಾ ಸಾಗರ್ ರವರ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ..