Advertisements

10 ನೇ ತರಗತಿಯಲ್ಲಿ ಪಡೆದಿದ್ದ ಅಂಕದಿಂದ ತಂದೆಯ ಬಳಿ ಬೂ’ಟಿನ‌ ಹೊಡೆಸಿಕೊಂಡ ನಟ ಜಗ್ಗೇಶ್! SSLC ಯಲ್ಲಿ ಜಗ್ಗೇಶ್ ಪಡೆದಿದ್ದ ಅಂಕ ಎಷ್ಟು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸೋಶಿಯಲ್ ಮೀಡಿಯಾದಲ್ಲಿ‌ ಹೆಚ್ಚು ಆ’ಕ್ಟಿವ್ ಆಗಿರುವ ಸೆಲೆಬ್ರಿಟಿಗಳಲ್ಲಿ ನಟ ಜಗ್ಗೇಶ್ ಕೂಡ ಒಬ್ಬರು ಸಿನಿಮಾ‌‌ ಮಾತ್ರವಲ್ಲದೆ ಹಲವಾರು ವಿಚಾರಗಳನ್ನು ಹಚ್ಚಿಕೊಳ್ಳುವ ನಟ ಜಗ್ಗೇಶ್ ಅವರು ಸದಾಕಾಲ ಅಭಿಮಾನಿಗಳ ಜೊತೆ ಹೆಚ್ಚಾಗಿ ಸಂಪರ್ಕದಲ್ಲಿ ಇರುತ್ತಾರೆ.. ಇನ್ನೂ ಕೋ’ರೋನ ಎರಡನೇ ಅಲೆ ಅವಳಿ ಬಳಿಕ ಒಂದಷ್ಟು ದಿನಗಳ ಕಾಲ ಟ್ವಿಟರ್ ನಿಂದ ದೂರ ಉಳಿದಿದ್ದ ನಟ ಜಗ್ಗೇಶ್ ಅವರು ಈ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ‌ ಸಕ್ರಿಯರಾಗಿದ್ದಾರೆ.. ವಿಶೇಷ ಏನೆಂದರೆ ಜಗ್ಗೇಶ್ ಅವರು ಈ‌ ಬಾರಿ ತಮ್ಮ ಎಸ್,ಎಸ್,ಎಲ್,ಸಿ ಅಂಕ ಪಟ್ಟಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ವಿದ್ಯಾಭ್ಯಾಸ ಏನೆ ಇರಲಿ ಚಿತ್ರರಂಗದಲ್ಲಿ ಉನ್ನತ ಮಟ್ಟದ ಬೆಳೆದ ನಟ ಅಂದ್ರೆ ಅದು ಜಗ್ಗೇಶ್.. ಇನ್ನೂ ನಟ ಜಗ್ಗೇಶ್ ಅವರು ಶಾಲೆಯಲ್ಲಿ ಅಷ್ಟೇನೂ ಚುರುಕಿನ ವಿದ್ಯಾರ್ಥಿ ಆಗಿರಲಿಲ್ಲ ಜೀವನದಲ್ಲಿ ಬಡತನದ ಕುಟುಂಬದಲ್ಲಿ ಬೆಳೆದಿದ್ದ ಇವರು ಹತ್ತನೇ

Advertisements
Advertisements

ತರಗತಿಯ ಪರೀಕ್ಷೆಯಲ್ಲಿ 600 ಅಂಕಗಳಿಗೆ 342 ಅಂಕವನ್ನು ಪಡೆದಿದ್ದರು. ಕನ್ನಡದಲ್ಲಿ 150ಕ್ಕೆ 101 ಅಂಕ, ಇಂಗ್ಲಿಷ್ ನಲ್ಲಿ 100ಕ್ಕೆ 54ಅಂಕ, ಹಿಂದಿಯಲ್ಲಿ 50ಕ್ಕೆ 20ಅಂಕ, ಗಣಿತದಲ್ಲಿ 100ಕ್ಕೆ 57 ಅಂಕ, ವಿಜ್ಞಾನದಲ್ಲಿ 100ಕ್ಕೆ 52 ಅಂಕ, ಹಾಗು ಸಮಾಜ‌ ವಿಜ್ಞಾನದಲ್ಲಿ 100ಕ್ಕೆ 58 ಅಂಕಗಳನ್ನು ಪಡೆದು ಎಸ್,ಎಸ್,ಎಲ್,ಸಿ ಪರೀಕ್ಷೆಯಲ್ಲಿ ಜಗ್ಗೇಶ್ ಪಾಸ್ ಆಗಿದ್ದರು.. ಇನ್ನೂ ತಾನು ಶಾಲೆಯಲ್ಲಿ ಕಳೆದ ದಿನಗಳನ್ನು ನೆನೆದು‌ ಟ್ವಿಟರ್ ಮೂಲಕ ನಟ ಜಗ್ಗೇಶ್ ಅವರು ತಮ್ಮ‌ ಅಂಕ ಪಟ್ಟಿಯನ್ನು ಶೇರ್ ಮಾಡಿಕೊಂಡಿದ್ದಾರೆ.. ವಿದ್ಯಾಭ್ಯಾಸದಲ್ಲಿ ಕಡಿಮೆ ಅಂಕ ಪಡೆದ ಜಗ್ಗೇಶ್ ಅವರಿಗೆ ಅಂದು ಅವಮಾನ ಆಗಿತ್ತು ಅದರಿಂದ ಜಗ್ಗೇಶ್ ಅವರು ಆ’ತ್ಮಹ’ತ್ಯೆ ಮಾಡಿಕೊಳ್ಳುವ ಆಲೋಚನೆ ಕೂಡ ಮಾಡಿದರಂತೆ‌ ಈ‌ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ‌ ಟ್ವೀಟ್ ಮಾಡಿದ್ದಾರೆ ಅದೇನೆಂದರೆ.. ‘ಅಂದು ಈ ಜಗ್ಗೇಶ ಶಾಲೆಯಲ್ಲಿ ಈಶ್ವರ. ತಾತ ರಾಜಣ್ಣನಂತೆ ನಟನಾಗು ಎಂದು ತಲೆಯಲ್ಲಿ ಹುಳಬಿಟ್ಟ..ಅದು ನನ್ನ ಚಿಂತನೆಯ ಚಿತೆಯಾಯಿತು. ಪರೀಕ್ಷೆ ಅರ್ಧಮನಸ್ಸಲ್ಲಿ ಓದಿಬರೆದೆ ಯಾಕೋ ಕನ್ನಡಮಾತ್ರ ನನ್ನ ಅಚ್ಚುಮೆಚ್ಚಿನ ವಿಷಯವಾಯಿತು‌..

ಕನ್ನಡ ವ್ಯಾಕರಣ ಸಿಹಿ ತಿನಿಸಂತೆ ಪ್ರೀತಿ, ಬಾಲ್ಯದಿಂದ ಕನ್ನಡಭಾಷ ಪ್ರೀತಿ ಹುಟ್ಟಿದರೆ ಸಾಯುವವರೆಗು ಅದು ಅವನ ಹೃದಯದ ನಾಡಿಬಡಿತದಂತೆ ಜೊತೆ ಉಳಿಯುತ್ತದೆ.. ಸ್ವಾರ್ಥಕ್ಕೆ ಬಳಕೆಯಾದರೆ ಆ’ತ್ಮದ್ರೋಹವಾಗುತ್ತದೆ. ಈ ಅಂಕ ನೋಡಿದ ಅಪ್ಪ ನಡುರೋಡಲ್ಲಿ ಜನನೋಡುವಂತೆ ಬೂಟಿನಲ್ಲಿ ಹೊಡೆದುಬಿಟ್ಟರು.. ಅಪಮಾನ ಸಹಿಸಲಾಗದೆ ಆ’ತ್ಮಹ’ತ್ಯೆಗೆ ಯತ್ನಿಸಿದ್ದೆ. ಆಗ ದಿವಂಗತ ಶ್ರೀರಾಮಪುರದ ಕಿಟ್ಟಿ ಆ ದಿನಗಳು ಕುಖ್ಯಾತಿ ನನ್ನ ಬಾಚಿ ಎಳೆದು ರೈಲಿನ ಅನಾಹುತ ತಪ್ಪಿಸಿದ. ಆ ವಿಷಯ ತಿಳಿದು ಅಪ್ಪನಿಗೆ ದುಃಖವಾಗಿ ಮನನೊಂದು ಬಂಧುಮಿತ್ರರ ಮುಂದೆ ಕಣ್ಣೀರು ಇಟ್ಟು ಪ’ಶ್ಚಾತಾಪಪಟ್ಟರು ಅಂದು ಅ’ನಾಹುತ ಸಂಭವಿಸಿದ್ದರೆ ಇಂದು ಈಶ್ವರ ಜಗ್ಗೇಶನಾಗಿ ಇರುತ್ತಿರಲಿಲ್ಲಾ.. ಬದಲಾಗಿ ಸತ್ತ ಕೋಟಿ ಜನರಲ್ಲಿ ಒಬ್ಬನಾಗುತ್ತಿದ್ದೆ. ತಂದೆತಾಯಿ ಮಕ್ಕಳನ್ನ ಬರಿ ಓದಿನ ಯಂತ್ರವಾಗಿ ಬೆಳಸದೆ ಜಗದಪಾಠ ಕಲಿಸುವ ಯತ್ನಮಾಡಿ ಓದಿದ ಮಕ್ಕಳು ಸರ್ಕಸ್ ಸಿಂಹದಂತೆ ಓದಿನ ಜೊತೆಗೆ ಜಗದಪಾಠ ಕಲಿತವರು ಬೇಟೆಯಾಡುವ ಕಾಡಿನಸಿಂಹದಂತೆ.

ಇಂದಿನ ಜಗತ್ತಿಗೆ ಮಕ್ಕಳು ಬೇಟೆಯಾಡುವ ಸಿಂಹದಂತೆ ಬಾಳಬೇಕು ಕಾರಣ ಜಗ ಕಾಡಿನಂತೆ ಆಗಿದೆ , ಮನುಷ್ಯ ಬೇಟೆಯಾಡುವ ಪ್ರಾಣಿಯಂತೆ. ಇಂಥ ಸಮಯದಲ್ಲಿ ಮಕ್ಕಳು ಕಾಡು ಸಿಂಹವಾದರೆ.. ಕೆಣಕುವವರು ದೂರ ಉಳಿಯುತ್ತಾರೆ. SSLC ಫಲಿತಾಂಶ ಏನೆ ಬರಲಿ ನಿಮ್ಮ ಮಕ್ಕಳ ಸಿಂಹದಂತೆ ಸಾಕಿ. ಮಿಕ್ಕಂತೆ ಜಗತ್ತೆ ಮನುಜನಿಗೆ ಜೀವನಪಾಠ ಕಲಿಸುತ್ತದೆತಂದೆ ತಾಯಿ ನಿಮ್ಮ‌ ಮಕ್ಕಳನ್ನು ಹುರಿದುಂಬಿಸಿ ಒಬ್ಬ ಸಾಧಕ ಹುಟ್ಟುತಾನೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.. ಸದ್ಯಕ್ಕೆ ನಟ ಜಗ್ಗೇಶ್ ಅವರ‌ ಈ ಅಂಕ ಪಟ್ಟಿಯ ಪೋಟೋ ಈಗ‌ ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈ’ರಲ್ ಆಗಿದೆ.. ಜೀವನ ನಡೆಸಲು ಅಂಕ ಇದ್ದರೆ ಸಾಲದು ಒಳ್ಳೆಯ ಬುದ್ದಿ‌ ಮತ್ತು ಗುರಿ ಇರಬೇಕು ಎಂದು ತೋರಿಸಿಕೊಟ್ಟರು ಜಗ್ಗೇಶ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..