Advertisements

ನಟ ರಾಮ್ ಕುಮಾರ್‌ ಅವರ ಮನೆ ಹೇಗಿದೆ.! ರಾಮ್ ಕುಮಾರ್ ಸಿನಿಮಾದಲ್ಲಿ ಯಾಕೆ ನಟಿಸುತ್ತಿಲ್ಲ ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟ ರಾಮ್ ಕುಮಾರ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ.. ನಟ‌ ರಾಮ್ ಕುಮಾರ್ ಅಂದ್ರೆ ತಕ್ಷಣವೇ ನೆನಪಾಗುವುದು ಅವರ ಸುಂದರ ಮುಖ, ಅವರ ಪ್ರೀತಿದಾಯಕ ನೋಟ, ಇವರು ನಟ ಮಾತ್ರ ಆಗಿರಲಿಲ್ಲ.. ಅದೆಷ್ಟೋ ಹುಡುಗಿಯರ, ಕನಸಿನ ಹುಡುಗ‌ ಕೂಡ ಹಾಗಿದ್ದರೂ. ಇನ್ನು ರಾಮ್ ಕುಮಾರ್ ನಟಿಸಿದ ಗೆಜ್ಜೆ ನಾದ, ತವರಿನ ತೊಟ್ಟಿಲು, ಸಿನಿಮಾಗಳನ್ನು ಈಗಲು ಕೂಡ ನೋಡಬೇಕು ಎನಿಸುತ್ತದೆ.. ಇನ್ನು ರಾಮ್ ಕುಮಾರ್ ಅವರು ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಆಗಿರುವ ಸುಂದರ್ ರಾಜ್ ಮಗ ಕೂಡ ಹೌದು.. ರಾಮ್ ಕುಮಾರ್ ಅವರು ಚಿಕ್ಕ ವಯಸ್ಸಿನಿಂದಲೇ ಸಿನಿಮಾದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದರು..

[widget id=”custom_html-2″]

Advertisements
Advertisements

‘ಆವೇಶ’ ಸಿನಿಮಾ ಮೂಲಕ ರಾಮ್ ಕುಮಾರ್ ಅವರು ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು , ನಂತರ ಕನ್ನಡ ಚಿತ್ರರಂಗದಲ್ಲಿ ಹಲವಾರು ಸುಪರ್ ಹಿಟ್ ಸಿನಿಮಾಗಳನ್ನು ಮಾಡಿರುವ ರಾಮ್ ಕುಮಾರ್, ಟಾಪ್ ನಟರಾಗಿ ಬೆಳೆದರು.. ಇನ್ನು‌ ಅದ್ದೆ‌ ಸಮಯದಲ್ಲಿ‌ ಕನ್ನಡ ಪದ್ಮ ವಿಭೂಷಣ ಡಾ ರಾಜ್‍ಕುಮಾರ್ ಅವರ ಮಗಳು ಪೂರ್ಣಿಮಾ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ರಾಮ್ ಕುಮಾರ್ ಅವರಿಗೆ ಒಬ್ಬ ಮಗ ಹಾಗು ಮಗಳು ಇದ್ದಾರೆ, ಇನ್ನು ಇದರಲ್ಲಿ ವಿಶೇಷ ಏನು ಎಂದರೆ ರಾಮ್ ಕುಮಾರ್ ಅವರ ಮಗ ಹಾಗು ಮಗಳು ಕೂಡ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ, ಇದಲ್ಲದೆ ರಾಮ್ ಕುಮಾರ್ ಅವರ ತಮ್ಮ ಮನೆಯನ್ನು ನೋಡುಗರ ಕಣ್ಮನ ಸೆಳೆಯುತ್ತವೆ ಕಟ್ಟಿಸಿದ್ದಾರೆ,

[widget id=”custom_html-2″]

ಇದರಲ್ಲಿ ಬೇಸರವಾಗುವ‌ ವಿಷಯ‌ ಏನು ಎಂದರೆ, 2010 ರ ನಂತರ ನಟ ರಾಮ್ ಕುಮಾರ್ ಅವರ ಸಿನಿಮಾಗಳು ಅಷ್ಟಾಗಿ ಫೇಮಸ್ ಆಗಲಿಲ್ಲ,‌ 2013 ರಲ್ಲಿ ಬಿಡುಗಡೆಯಾದ ಶ್ರೀ ಕ್ಷೇತ್ರ‌ ಆದಿಚುಂಚನಗಿರ ಸಿನಿಮಾದ ನಂತರ ಯಾವುದೇ ಚಿತ್ರಗಳಲ್ಲಿ ನಟಿಸಲಿಲ್ಲ ರಾಮ್ ಕುಮಾರ್ ಅವರು.. ಈಗ ಒಳ್ಳೆಯ ಮ್ಯಾನರಸಂ ಹಾಗು ಅದ್ಭುತ ಕಲೆ ಮತ್ತು ನಟನೆ ಇರುವ ರಾಮ್ ಕುಮಾರ್ರಂತಹ ನಟರು ಕನ್ನಡ ಚಿತ್ರರಂಗಕ್ಕೆ ಬೇಕಾಗಿದೆ.. ವಿಭಿನ್ನ ಶೈಲಿ ಹಾಗು ಒಳ್ಳೆಯ ಕಥೆ ಇರುವ ಸಿನಿಮಾಗಳ ಮೂಲಕ ರಾಮ್ ಕುಮಾರ್ ಅವರು ಮತ್ತೆ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂದು ಅವರ ಅಭಿಮಾನಿಗಳ ಆಸೆ ಕೂಡ ಹೌದು.. ಸ್ನೇಹಿತರೆ ನಟ ರಾಮ್ ಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..