Advertisements

ಕನ್ನಡದ ಹಿರಿಯ ನಟಿ ಜಯಂತಿ ಅವರ ಮೊಮ್ಮಗ ಕೂಡ ಟಾಪ್ ನಟ ಎಂದು ನಿಮಗೆ ಗೊತ್ತಾ? ಇವರು ಕೂಡ ಅಭಿನಿಗಳ ನೆಚ್ಚಿನ ನಟ‌ ಕೂಡ ಹೌದು.

Cinema

ನಮಸ್ತೆ ಸ್ನೇಹಿತರೆ, ನಟಿ ಜಯಂತಿ ಕನ್ನಡ ಚಿತ್ರರಂಗದ ಪ್ರಮುಖ ನಾಯಕಿಯರಲ್ಲಿ ಒಬ್ಬರು.. ಚಿತ್ರದ ಮೂಲಕ ಮೂಲಕ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು ಕಮಲ ಕುಮಾರಿ. ಅದಕ್ಕಿಂತ ಮುನ್ನ ಜಗದೇಕ ವೀರನ ಕಥೆ ಚಿತ್ರದಲ್ಲಿ ಸಣ್ಣ ಪಾತ್ರ ವೊಂದರಲ್ಲಿ ಅಭಿನಯಿಸಿದ್ದಾರೆ. ಅಷ್ಟೆ ಅಲ್ಲದೆ ಅಭಿನಯ ಶಾರದೆ ಎಂದ ತಕ್ಷಣವೇ ನಮ್ಮ ಕಣ್ಮುಂದೆ ಬರೋದು ಅವರ ಹಲವಾರು ಪಾತ್ರಗಳು ಪಕ್ಕ ಗೃಹಿಣಿಯಾಗಿ ಸೊಕ್ಕಿನ ಹೆಣ್ಣಾಗಿ ಬೋಲ್ಡ್ ಹುಡುಗಿಯಾಗಿ ಈಗೆ‌ ಯಾವುದೇ ಪಾತ್ರವಾದರು ತಮ್ಮ‌ ಭಾವ ಅಭಿನಯದಿಂದ ಕನ್ನಡ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ.. ಸತತ 50 ವರ್ಷಗಳ ಕಾಲ ಕನ್ನಡ ತೆಲುಗು ತಮಿಳು ಮಲೆಯಾಳಂ ಹಿಂದಿ ಚಿತ್ರರಂಗದಲ್ಲಿ ಮಿಂಚಿದ್ದಾರೆ‌ 1945 ರಲ್ಲಿ ಬಳ್ಳಾರಿಲ್ಲಿ ಜನಿಸಿದ ಇವರು ‌1950 ರಲ್ಲಿ ತಮಿಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು

Advertisements
Advertisements

ಇನ್ನೂ ಕನ್ನಡದಲ್ಲಿ 1963 ರಲ್ಲಿ ಜೇನು ಗುಡು ಚಿತ್ರದ ನಟನೆ ಮಾಡುವ ಮೂಲಕ ಕನ್ನಡದ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು.. ಕನ್ನಡದಲ್ಲಿ ಬಹುತೇಕ‌ ಅಂದಿನ ಕಾಲದ ಎಲ್ಲಾ ನಾಯಕ ನಟರ ಜೊತೆಗೆ ನಟನೆ ಮಾಡಿರುವ ಇವರು ಡಾ ರಾಜ್ ಕುಮಾರ್ ಅವರ ಜೊತೆ ಹೆಚ್ಚಿನ ಸಿನಿಮಾಗಳಲ್ಲಿ ನಾಯಕಿಯಾಗಿ ನಟನೆ ಮಾಡಿದ್ದಾರೆ.. ಇನ್ನೂ ಅಂದಿನ ಖ್ಯಾತ ನಟ ನಿರ್ದೇಶಕ ಪೇಕೆಟಿ ಶಿವರಾಂ ಅವರನ್ನು ನಟಿ ಜಯಂತಿ ಅವರು ಮದುವೆ ಆದರು ಇನ್ನೂ‌ ಮದುವೆಯಾಗಿ 8 ಮಕ್ಕಳನ್ನು ಹೊಂದಿದ್ದ ಪೇಕೆಟಿ ಶಿವರಾಂ ಅವರಿಗೆ ಜಯಂತಿ ಅವರ ಜೊತೆಗೆ ಇದು ಎರಡನೇ ಮದುವೆ ಆಗಿತ್ತು.. ಇನ್ನೂ ಪೇಕೆಟಿ ಶಿವರಾಂ ಅವರ ಮಕ್ಕಳಲ್ಲಿ ಒಬ್ಬರಾದ ಹೆಣ್ಣು ಮಕ್ಕಳು ಶಾಂತಿ ಎಂಬುವವರ ಮಗ ತಮಿಳು ಚಿತ್ರದ ರಂಗದಲ್ಲಿ ಖ್ಯಾತ ನಟನಾಗಿ ಗುರುತಿಸಿಕೊಂಡಿದ್ದಾರೆ. ಹೌದು ಜೀನ್ಸ್ ಚಿತ್ರದ ಖ್ಯಾತ ನಟ ಪ್ರಶಾಂತ್ ಅವರು ಜಯಂತಿ ಅವರಿಗೆ ಮೊಮ್ಮಗನಾಗಬೇಕು ಇನ್ನೂ‌ ಜಯಂತಿ ಅವರ

ಮೊದಲನೆಯ ಪತಿ ಮಗ ಮೊಮ್ಮಗನಾಗಿರುವ ಪ್ರಶಾಂತ್ ಅವರು ಜಯಂತಿ ಅವರಿಗೂ ಕೂಡ ಮೊಮ್ಮಗನಾಗುತ್ತಾನೆ.‌ ಇನ್ನೂ ಜಯಂತಿ ಅವರಿಗೆ ನಿರ್ಮಾಪಕಿಯೂ ನಿರ್ದೇಶಕಿಯೂ ಆಗಿರುವ ಇವರು 1965ರಲ್ಲಿ ಮಿಸ್ ಲೀಲಾವತಿ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ಎರಡು ಮುಖ ೧೯೬೯ ಮನಸ್ಸಿನಂತೆ ಮಾಂಗಲ್ಯ ೧೯೭೬ ಧರ್ಮ ದಾರಿ ತಪ್ಪಿತು ೧೯೮೧ ಮಸಣದ ಹೂವು ೧೯೮೫ ಆನಂದ್ ೧೯೮೬ ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. ಜಯಂತಿ ಅವರು ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಕಾಮತೃಷೆಯಿಂದ ಬಳಲುವ ಹೆಣ್ಣಾಗಿ ಮೊದಲ ಭಾರಿಗೆ ವಿಶಿಷ್ಟ ಅಭಿನಯ ನೀಡಿದ್ದಾರೆ. ಸ್ನೇಹಿತರೆ ನಟಿ‌ ಜಯಂತಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..