Advertisements

ಅವಕಾಶ ಇಲ್ಲದಿದಾಗ ನಟಿ ಪವಿತ್ರ ಲೋಕೇಶ್ ಅವರು ಖಾಸಗಿ ಕಂಪನಿಯಲ್ಲಿ ಯಾವ ಕೆಲಸ ಮಾಡುತ್ತಿದ್ದರು ಗೊತ್ತಾ? ನಿಜಕ್ಕೂ ಈ ನಟಿ ಗ್ರೇಟ್‌..

Cinema

ನಮಸ್ತೆ ಸ್ನೇಹಿತರೆ, ಕ’ಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ನಟಿ ದೇವಯಾನಿ ಅವರ ಜೀವನದ ಕಥೆಯನ್ನ ನಾವು ನೋಡಿರುತ್ತೇವೆ.. ಇನ್ನೂ ಸಿನಿಮಾದಲ್ಲಿ ಅವಕಾಶಗಳು ಇಲ್ಲದಿದ್ದಾಗ ರಸ್ತೆ ಪಕ್ಕದಲ್ಲಿ ತಿಂಡಿ ಮಾರಟ ಮಾಡಿದ್ದ ನಟ ಶಂಕರ್ ನಾಗ್ ಅವರ ಜೀವನದ ಕಥೆಯನ್ನ ಕೇಳಿದ್ದೇವೆ.. ಅಂತಹುದೇ ಒಂದು ಪರಿಸ್ಥಿತಿಯನ್ನು ಎದುರಿಸಿ ಮುಂದೆ ಬಂದರು ನಟಿ‌ ಪವಿತ್ರ ಲೋಕೇಶ್ ಅವರು.. ಹಾಗಾದರೆ ಈ ಹೆಸರಾಂತ ನಟಿಯ ಜೀವನದಲ್ಲಿ ಆದಂತಹ ಸಂ’ಕಷ್ಟದ ಸ್ಥಿತಿ ಏನೆಂದರೆ ನೋಡೋಣ ಬನ್ನಿ.. ಕನ್ನಡ ಸಿನಿಮಾದಲ್ಲಿ ವಿಭಿನ್ನ ನಟನೆಯಿಂದ ಗುರುತಿಸಿಕೊಂಡ ನಟ ಮೈಸೂರು ಲೋಕೇಶ್ ಅವರ ಮುಂದಾದ ಮಗಳೆ ಪವಿತ್ರ ಲೋಕೇಶ್ ಅವರು.. ತಂದೆ ಸಡನ್ನಾಗಿ ಮನೆಯ ಸಂಪೂರ್ಣ ಜವಾಬ್ದಾರಿಯನ್ನ ತನ್ನ ಹೆಗಲ ಮೇಲೆ ಹೊತ್ತು ಕೇವಲ 16 ವರ್ಷ ವಯಸ್ಸಿಗೆ ಬಣ್ಣ ಹಚ್ಚಿದರು ಪವಿತ್ರ ಲೋಕೇಶ್ ಅವರು..

Advertisements
Advertisements

ತನ್ನ ತಂದೆಗೆ ಒಳ್ಳೆಯ ಹೆಸರು ಇರುವುದರಿಂದ ತನ್ನನ್ನ ಚಿತ್ರರಂಗದಲ್ಲಿ ಪ್ರೀತಿಯಿಂದ ಸ್ವಾಗತಿಸುತ್ತಾರೆ ಎಂದು ಅವಕಾಶಗಳು ತುಂಬಾ ಬರುತ್ತವೆ ಎಂದು ಭಾವಿಸಿದರು.. ಆದರೆ ಅವರು ಅಂದುಕೊಂಡ ಹಾಗೆ ಸುಖವಾಗಿ ಇರಲಿಲ್ಲ ಸಿನಿಮಾದಲ್ಲಿ ಅವಕಾಶ ಪಡೆಯುವುದು. ಕೊನೆಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಹಾಯದಿಂದ ಸಿನಿಮಾದಲ್ಲಿ ಅವಕಾಶ ಪಡೆದ ಪವಿತ್ರ ಲೋಕೇಶ್ ಅವರು ಸುಮಾರು ಆರರಿಂದ ಏಳು ಸಿನಿಮಾಗಳಲ್ಲಿ ನಟನೆ‌ ಮಾಡಿದ್ರು.. ಆದರೆ ಪವಿತ್ರ ಲೋಕೇಶ್ ಅವರು ನಟನೆ ಮಾಡಿದ ಯಾವುದೇ ಸಿನಿಮಾ‌ ಕೂಡ ಸೂಪರ್ ಹಿಟ್ ಆಗಲಿಲ್ಲ.. ಹಾಗಾಗಿ ಅವಕಾಶಗಳು ಕಡಿಮೆಯಾಗಿ ಕೊನೆಯ ಯಾವುದೇ ಅವಕಾಶಗಳು ಇಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಯಿತು ಆಗ ತಮ್ಮ ಮನೆಯ ಜವಬ್ದಾರಿ ತನ್ನ ಮೇಲೆ ಇದ್ದ ಕಾರಣ ಚಿತ್ರರಂಗದಿಂದ ದೂರ ಉಳಿದ ಪವಿತ್ರ ಅವರು

ಒಂದು ಖಾಸಗಿ ಕಂಪನಿಯಲ್ಲಿ HR ಅಸಿಸ್ಟೆಂಟ್ ಕೆಲಸಕ್ಕೆ ಸೇರಿಕೊಂಡರು.‌. ಒಂದು ವರ್ಷ ಸಾಮಾನ್ಯ ಹುಡುಗಿಯಂತೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಿ ಬೆಳಿಗ್ಗೆಯಿಂದ ಸಂಜೆಯ ವರೆಗೂ ದುಡಿದು ಮನೆಯ ಜವಾಬ್ದಾರಿಯನ್ನ ನಿಭಾಯಿಸಿದರು ಒಂದು ವರ್ಷ ಆದ ಮೇಲೆ ಮತ್ತೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಪವಿತ್ರ ಲೋಕೇಶ್ ಮತ್ತೆ ಯಾರನ್ನು ಕೈಚಾಚಿ ಅವಕಾಶ ಕೇಳದೆ ತಮ್ಮ ವಿಭಿನ್ನ ನಟನೆಯಿಂದ ಕನ್ನಡ ಅಲ್ಲದೆ ಬೇರೆ ಭಾಷೆಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡರು.. ಈಗ ಇವರು ಕನ್ನಡ‌ ಸಿನಿಮಾಗಳಲ್ಲಿ ನಟನೆ ಮಾಡುವುದು ಕಡಿಮೆಯಾದರೂ ತೆಲುಗು ಭಾಷೆಯ ಸಿನಿಮಾಗಳಲ್ಲಿ ಬಾರಿ ಬೇಡಿಕೆಯ ನಟಿಯಾಗಿ ಬೆಳೆಸಿದ್ದಾರೆ.. ನಟಿ ಪವಿತ್ರ ಲೋಕೇಶ್ ಅವರ‌ ಈ ಧೈರ್ಯವನ್ನ ಮೆಚ್ಚಲೇಬೇಕು. ಯಾಕೆಂದರೆ ಇಂದಿನ ಯುವ ನಟಿಯರಿಗೆ ಇವರು ಸ್ಪೂರ್ತಿಯಾಗಿ ನಿಂತಿದ್ದಾರೆ..