Advertisements

ಕನ್ನಡ ಚಿತ್ರರಂಗದ ಹಿರಿಯ ನಟಿ‌ ಸುಮಿತ್ರಾ ಅವರ ಇಬ್ಬರು ಮಕ್ಕಳು ಕೂಡ ಕನ್ನಡದ‌ ನಟಿಯರು ಅವರು ಯಾರು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ನಟಿ‌‌ ಸುಮಿತ್ರಾ ಅವರ ಬಗ್ಗೆ ಯಾರಿಗೆ ತಾನೇ‌ ತಿಳಿದಿಲ್ಲ ಹೇಳಿ, ಇವರು ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಅಲ್ಲದೆ ಇವರು ಮಾಡುವ ಅಭಿನಯ ಅಭಿಮಾನಿಗಳಿಗೆ ತುಂಬಾನೇ ಅಚ್ಚುಮೆಚ್ಚು, ಯಾಕೆಂದರೆ ಸುಮಿತ್ರಾ ಅವರು ಹೆಚ್ಚಾಗಿ ಕೌಟುಂಬಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ, ಅಲ್ಲದೆ ಇವರನ್ನು ದಕ್ಷಿಣ ಭಾರತದ ಜನಪ್ರಿಯ ನಟಿ ಎಂದು ಹೇಳಬಹುದು.. ಇನ್ನೂ 1972‌ ರಲ್ಲಿ ತೆರೆಕಂಡ ನರ್ತನ ಸಾಲ ಎಂಬ ಮಲೆಯಾಳಂ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.. ನಂತರ 1973 ರಲ್ಲಿ ನಿರ್ಮಾಲ್ಯಂ ಎಂಬ ಮಲೆಯಾಳಂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು, ಇವರು ಕೇವಲ ಮಲೆಯಾಳಂ ಸಿನಿಮಾಗಳಲ್ಲಿ ಮಾತ್ರವಲ್ಲದೆ ತಮಿಳು ಕನ್ನಡ ಮತ್ತು ತೆಲುಗು ಭಾಷೆಯ ಸುಮಾರು ೨೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸುಮಿತ್ರಾ ಅವರು ನಾಯಕಿಯಾಗಿ ನಟಿಸಿದ್ದರು..

[widget id=”custom_html-2″]

Advertisements
Advertisements

1976‌ರಲ್ಲಿ ತೆರೆಕಂಡ ಮುಗಿಯದ ಕಥೆ ಎನ್ನುವ ಕನ್ನಡ ಚಿತ್ರದ‌‌ ಮೂಲಕ ಕನ್ನಡ ಖ್ಯಾತ ನಟ ರಾಜೇಶ್ ಅವರ ಜೊತೆ ನಾಯಕಿಯಾಗಿ ನಟಿಸಿದ್ದರು, ಇನ್ನೂ 1980 ರಲ್ಲಿ ಮಕ್ಕಳ ಸೈನ್ಯ ಎಂಬ ಸಿನಿಮಾದಲ್ಲಿ ಡಾ ವಿಷ್ಣುವರ್ಧನ್ ಅವರ ಜೊತೆ ನಾಯಕಿಯಾಗಿ ನಟಿಸಿದ್ದಾರೆ.. ಜೈ ಜಗದೀಶ್ ಟೈಗರ್ ಪ್ರಭಾಕರ್ ಅಶೋಕ್ ಇನ್ನೂ ಮುಂತಾದ ನಾಯಕ ನಟರ‌ ಜೊತೆ ನಟಿ ಸುಮಿತ್ರಾ ನಟಿಸಿದ್ದಾರೆ.. ಇನ್ನೂ ತಮಿಳಿನಲ್ಲಿ ಶಿವಾಜಿ ಗಣೇಶನ್ ರಜಿನಿಕಾಂತ್ ಕಮಲ ಹಾಸನ್ ಈಗೆ ಹಲವಾರು ನಾಯಕ ನಟರ ಜೊತೆ‌ ಅಭಿನಯಿಸಿ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಮಿಂಚಿದ್ದಾರೆ.. ಕಾಲಾಂತರದಲ್ಲಿ ನಟಿ ಸುಮಿತ್ರಾ ಅವರು ಹೆಚ್ಚಾಗಿ ಪೋಷಕ ಪಾತ್ರದಲ್ಲಿ ಗುರುತಿಸಿಕೊಂಡರು ಕನ್ನಡ ತಮಿಳು ತೆಲುಗು ಮಲೆಯಾಳಂ ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ಪೋಷಕರು‌‌ ಪಾತ್ರದಲ್ಲಿ ನಟಿಸಿದ್ದರು..

[widget id=”custom_html-2″]

ಇನ್ನೂ ಡಾ ವಿಷ್ಣುವರ್ಧನ್ ಹಾಗು ಕಮಲ ಹಾಸನ್ ಅವರೊಂದಿಗೆ ನಾಯಕಿಯಾಗಿ ನಂತರ ತಾಯಿಯ ಪಾತ್ರದಲ್ಲಿ ಕೂಡ ಇವರ ಜೊತೆ ನಟಿಸಿದ್ದಾರೆ, ನಟ ರವಿಚಂದ್ರನ್ ಅಭಿನಯದ ರಾಮಾಚಾರಿ ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದರು. ಸುಮಿತ್ರಾ ಅವರು ಕನ್ನಡದ ಖ್ಯಾತ ನಿರ್ದೇಶಕ ಡಿ ರಾಜೇಂದ್ರಬಾಬು ಅವರ ಜೊತೆ 1980ರಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಇನ್ನು ರಾಜೇಂದ್ರ ಬಾಬು ಅವರು 2013 ರಲ್ಲಿ ನಿ’ಧನರಾದರು, ‌ಆದರೆ‌ ಡಿ ರಾಜೇಂದ್ರ ಬಾಬು ಅವರು ಯುಗಪುರುಷ ರಾಮಾಚಾರಿ ಇನ್ನೂ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕನ್ನಡಕ್ಕೆ ನೀಡಿದ್ದಾರೆ, ಇನ್ನೂ ಸುಮಿತ್ರಾ ಹಾಗು ರಾಜೇಂದ್ರ ದಂಪತಿಗಳಿಗೆ ಉಮಾಶಂಕರಿ ಹಾಗು ನಕ್ಷತ್ರ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ..

ಈ ಇಬ್ಬರು ಮಕ್ಕಳು ಕೂಡ ಕನ್ನಡ ತಮಿಳು ತೆಲುಗು ಸಿನಿಮಾಗಳಲ್ಲಿ ನಾಯಕಿ ಹಾಗು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಉಮಶಂಕರಿ ಅವರು ಕನ್ನಡದ ಉಪ್ಪಿದಾದಾ ಎಂಬಿಬಿಎಸ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಮುಖ್ಯ ಚಿತ್ರವಾಗಿದೆ, ಇನ್ನೂ ನಕ್ಷತ್ರ‌ ಅವರು ಗೋಕುಲ, ಹರೇ ರಾಮ ಹರೇ ಕೃಷ್ಣ, ಇನ್ನೂ‌ ಅನೇಕ‌ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಸ್ನೇಹಿತರೆ ನಿಮಗೂ ಕೂಡ ನಟಿ‌ ಸುಮಿತ್ರಾ ಅವರ ನಟನೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆಯನ್ನು ತಿಳಿಸಿ..