Advertisements

ಭಾರತದಲ್ಲಿ ಮೊದಲ ಬಾರಿಗೆ ಹುಟ್ಟಿದ ಎರಡು ಗಂಟೆಯಲ್ಲಿ ದಾಖಲೆ ಸೃಷ್ಟಿಸಿದ ಈ ಮಗು! ಈ ಮಗು ಮಾಡಿದ್ದಾದರೂ ಏನು ಗೊತ್ತಾ? ವಿಚಿತ್ರ ಮಗು..

Kannada Mahiti

ನಮಸ್ತೆ ಸ್ನೇಹಿತರೆ, ನಮಗೆ ತಿಳಿದಿರುವ ಹಾಗೆ ಒಬ್ಬಬ್ಬರು ಒಂದೊಂದು ರೀತಿಯಲ್ಲಿ ದಾಖಲೆಯನ್ನ ಸೃಷ್ಟಿ ಮಾಡ್ತಾರೆ.. ನಾವು ನೋಡಿರುವಂತೆ ಕ್ರೀಡಾ ಆಟಗಳನ್ನು ಹಾಡಿ ಅಥವಾ ಒಂದು ಪುಸ್ತಕಗಳ ಬರೆದು ಅಥವಾ ಬೇರೆ ಬೇರೆ ರೀತಿಯ ಕೆಲಸಗಳನ್ನ ಮಾಡಿ ಸಮಾಜದಲ್ಲಿ ತಮ್ಮನ್ನು ದೊಡ್ಡ ಪಟ್ಟದಲ್ಲಿ ಗುರುತಿಸಿಕೊಳ್ಳಲು ದಾಖಲೆಯನ್ನ ಸೃಷ್ಟಿ ಮಾಡಿರೋದನ್ನು ನಾವು ನೋಡಿದ್ದೇವೆ ಅಥವಾ ಅವರ ಬಗ್ಗೆ ಓದಿರುತ್ತೇವೆ .. ಆದರೆ ಈ ಮಗು ಮಾತ್ರ ಹುಟ್ಟಿದ ಕೇವಲ ಎರಡೇ ಗಂಟೆಯಲ್ಲಿ ಪ್ರತಿಯೊಬ್ಬರ ತನ್ನ ಬಗ್ಗೆ ಮಾತನಾಡುವಂತೆ ದಾಖಲೆ ಸೃಷ್ಟಿ ಮಾಡಿದೆ. ಅದು ಹೇಗೆ ಗೊತ್ತಾ? ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಮಗು ಹುಟ್ಟಿದ ಎರಡೇ ಗಂಟೆಯ ಅವಧಿಯಲ್ಲಿ ಗುಜರಾತಿಗೆ ಸೇರಿದ ಇಬ್ಬರು ದಂಪತಿಗಳು ತಮ್ಮ

Advertisements
Advertisements

ಮಗುವಿನ ಹೆಸರನ್ನು ಎಲ್ಲಾ ರೀತಿಯ ಅಧಿಕೃತ ದಾಖಲೆಯಲ್ಲಿ ನೊಂದಣಿ ಮಾಡಿಸಿ ಬೇಕಾಗುವಂತಹ ಎಲ್ಲಾ ದಾಖಲೆಯನ್ನು ತಯಾರು ಮಾಡಿಕೊಂಡಿದರು.. ಇನ್ನೂ ಮಗು ಜನಿಸಿದ ಕೇವಲ ಎರಡೇ ಗಂಟೆಯಲ್ಲಿ ಮಗುವಿಗೆ ಸಂಭಂದಿಸಿದ ಎಲ್ಲಾ ರೀತಿಯ ಅಧಿಕೃತ ದಾಖಲೆಯಲ್ಲಿ ನೊಂದಣಿ ಆಗಿರುವ ಭಾರತದ ಮೊಟ್ಟಮೊದಲ ಮಗು ಎನ್ನುವ ಹೆಗ್ಗಳಿಕೆಗೆ ಈ ಮಗು ಹೆಸರಾಗಿದೆ.. ಇನ್ನೂ ಮಗುವಿನ ತಂದೆಯ ಹೆಸರು ಅಂಕಿತ್ ನಾಗರಾಣಿ ಹಾಗು ತಾಯಿಯ ಹೆಸರು ಭೂಮಿ ನಾಗರಾಣಿ ಇವರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳಾಗಿದ್ದರು ಈಗಾಗಿ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ಈ ಮಗುವಿನ ಹೆಸರನ್ನ ನೋಂದಣಿ ಮಾಡಲು ಕಾತುರದಿಂದ ಕಾಯುತ್ತಿದ್ದರು ಅದಲ್ಲದೇ ಈ‌ ಮಗುವಿನ ತಂದೆ ತಾಯಿ

ಮಗು ಹುಟ್ಟಿದ ಸ್ಥಳದಲ್ಲಿ ಎಲ್ಲಾ ರೀತಿಯ ಅಧಿಕೃತ ದಾಖಲೆಗಳನ್ನ ಹೊಂದಿರುವ ಮೊದಲ ಮಗು ಎನ್ನುವಂತಹ ಹೆಗ್ಗಳಿಕೆಗೆ ಅವರು ಪಡೆಯಬೇಕು ಎನ್ನುವುದು ಮಗುವಿನ ತಂದೆಯಾದ ಅಂಕಿತ್ ಅವರ ಕನಸು ಕೂಡ ಆಗಿರುತ್ತದೆ.. ಅದರಿಂದ ಮಗು ಜನಿಸುವ ಮೊದಲೇ ದಾಖಲೆಗಳಿಗೆ ನೊಂದಣಿ ಆಗುವುದಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಫಾರ್ಮಾಗಳನ್ನ ಮೊದಲೇ ಭರ್ತಿ ಮಾಡಿ ತಮ್ಮ ಜೊತೆಯಲ್ಲಿ ಇಟ್ಟುಕೊಂಡಿದ್ದರಂತೆ.. ಇನ್ನೂ ಡಿಸೆಂಬರ್ 12ರಂದು ಮಗು ಜನನವಾದ ಕೇವಲ ಎರಡು ಗಂಟೆಯಲ್ಲಿ ಯಶಸ್ವಿಯಾಗಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪಾಸ್‌ಪೋರ್ಟ್ ಸೇರಿದಂತೆ ಎಲ್ಲಾ ದಾಖಲೆಗಳಿಗೆ ಮಗುವಿನ ಹೆಸರು ರಮ್ಯಾ ಎಂದು ನೋಂದಣಿ ಮಾಡಿ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದರು..

ಇನ್ನೂ ಇದಕ್ಕೂ ಮೊದಲು ಅಂದರೆ ಎಪ್ರಿಲ್ 2018 ರಲ್ಲಿ ಮಹಾರಾಷ್ಟ್ರದಲ್ಲಿ ಮಗು ಹುಟ್ಟಿದ ಕೇವಲ 1ಗಂಟೆ 48 ನಿಮಿಷಗಳಲ್ಲಿ ಹೆಣ್ಣು ಮಗುವಿನ ಹೆಸರನ್ನ ಮಗುವಿನ ಪೋಷಕರು ಆಧಾರ್ ಕಾರ್ಡ್ ಗೆ ಹೆಸರನ್ನು ನೊಂದಣಿ ಮಾಡಿ ದಾಖಲೆ ಸೃಷ್ಟಿ ಮಾಡಿದರು.. ಆದರೆ ಆ‌ ಒಂದು ದಾಖಲೆಯನ್ನ ಈಗ‌ ರಮ್ಯ ಎನ್ನುವ ಮಗು ಮುರಿದು ಒಂದು ಹೊಸ‌ ದಾಖಲೆಯನ್ನ ಸೃಷ್ಟಿ ಮಾಡಿದೆ.. ಸ್ನೇಹಿತರೆ ಈ ಮಗುವಿನ ಈ ದಾಖಲೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ…