Advertisements

ಕಲಬುರಗಿ ರೈತನ ಈ ಒಂದು ಐಡಿಯಾದಿಂದ ತಿಂಗಳಿಗೆ 3ಲಕ್ಷ ಲಾಭ! ಅಷ್ಟಕ್ಕೂ ಈ ರೈತ ಬಳಸಿದ ಐಡಿಯಾ ಏನು ಗೊತ್ತಾ? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಒಂದಷ್ಟು ಧೈರ್ಯ ವಿಭಿನ್ನ ರೀತಿಯಲ್ಲಿ ಆಲೋಚನೆ ಮಾಡುವ ಶಕ್ತಿ ಇದ್ದರೆ ಯಾವುದೇ ಕೆಲಸದಲ್ಲಿ ಹಾಗು ಯಾವುದೇ ಕ್ಷೇತ್ರದಲ್ಲಿ ಆದರೂ ಯಶಸ್ಸು ಸಾಧಿಸಬಹುದು ಅನ್ನೋದು ಅಷ್ಟೇ ಸತ್ಯ.. ಅದರಲ್ಲೂ ನಮ್ಮ ರೈತರಿಗೆ ಭೂಮಿಯಲ್ಲಿ ಬೆಳೆಯುವ ಬೆಳೆಯಲ್ಲಿ ಎಷ್ಟೇ ನಷ್ಟ ಅನುಭವಿಸಿದರು ಮತ್ತೆ ವಿಭಿನ್ನ ರೀತಿಯ ಪ್ರಯತ್ನಗಳ ಜೊತೆ ಬೆಳೆಯನ್ನು ಬೆಳೆಯಲು ಇಳಿಯುತ್ತಾರೆ.. ಇನ್ನೂ ಈ ರೈತ ಕೂಡ ಹಾಗೆಯೇ ಎಲ್ಲರ ಆಗೆ ಅಲ್ಲದೆ ತನ್ನ ವಿಭಿನ್ನ ಆಲೋಚನೆಯ ಮೂಲಕ ತಮ್ಮ‌ ಜಮೀನಿನಲ್ಲಿ ಹೊಸ ರೀತಿಯ ವ್ಯವಸಾಯ ಮಾಡಲು ಮುಂದಾಗಿ ಅದರಲ್ಲಿ ಈಗ ಯಶಸ್ಸುನ್ನ ಸಾಧಿಸಿದ್ದಾರೆ.. ಅಷ್ಟಕ್ಕೂ ಈ ರೈತ ತಮ್ಮ‌ ಜಮೀನಿನಲ್ಲಿ ಹೊಸ ಬೇಸಾಯದ ಮಾಡಲು ಬಳಸಿದ ಉಪಾಯವಾದರೂ ಏನು ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಕಲ್ಬುರ್ಗಿ ಜಿಲ್ಲೆಯ ಆನಂದ ತಾಲ್ಲೂಕಿನ ಕೊರಳ್ಳಿ ಗ್ರಾಮದ ನಿವಾಸಿಯಾಗಿದ್ದ ಬಸವರಾಜ್ ಪಾಟೀಲ್ ಅವರು ವಿದ್ಯಾಭ್ಯಾಸದಲ್ಲಿ ಪದವಿ ಪಡೆದಿದ್ದರು ಯಾವುದೇ ಉದ್ಯೋಗವನ್ನ ಹುಡುಕಿಕೊಂಡು ಹೋಗದೆ ವಿಭಿನ್ನ ಕೃಷಿ ಮಾಡಲು ಮುಂದಾಗಿದ್ದರು.. ಅದರಂತೆ ಇವರು ಸತತವಾಗಿ ಹತ್ತು ವರ್ಷಗಳಿಂದ ಕಲ್ಲಂಗಡಿ ಬೆಳೆಯನ್ನು ಬೆಳೆಯುತ್ತಿದ್ದ ಬಸವರಾಜ್ ಏನಾದರೂ ವಿಭಿನ್ನ ರೀತಿಯ ಬೆಳೆಯನ್ನು ಹಾಕಿ ಹೊಸ ವಿಧಾನದಲ್ಲಿ ಕೃಷಿ ಮಾಡಿ ಹೆಚ್ಚು ಲಾಭಗಳಿಸಬೇಕು ಎಂದು ಅಂದುಕೊಂಡಿದ್ದಾಗ ಒಮ್ಮೆಲೆ ಯೂಟ್ಯೂಬ್ ನಲ್ಲಿ ಹಳದಿ ಕಲ್ಲಂಗಡಿ ಹಣ್ಣಿನ ಬಗ್ಗೆ ವೀಡಿಯೋ ನೋಡುತ್ತಿದ್ದರು ಆಗ ಆ ಕಲ್ಲಂಗಡಿ ಹಣ್ಣಿನ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡ ಬಸವರಾಜ್ ಅವರು ಜರ್ಮನಿಯಿಂದ ಹಳದಿ ಕಲ್ಲಂಗಡಿ ಬೀಜವನ್ನು ತರಿಸಿ ವೈಜ್ಞಾನಿಕ ಬೆಳೆಯನ್ನು ಬೆಳೆಯುವ ವಿಧಾನವನ್ನು ತಿಳಿದುಕೊಂಡು ಪ್ರಾಯೋಗಿಕವಾಗಿ ತನ್ನ ಎರಡು ಎಕರೆ ಜಮೀನಿನಲ್ಲಿ ಬೆಳೆಯನ್ನು ಬೆಳೆದು ಹಳದಿ ಕಲ್ಲಂಗಡಿ ಬೆಳೆಯಲ್ಲಿ ಯಶಸ್ಸು ಸಾಧಿಸಿದರು..

[widget id=”custom_html-2″]

ಇನ್ನೂ ಕೆಂಪು ಕಲ್ಲಂಗಡಿಗಿಂತ ಈ ಹಳದಿ ಕಲ್ಲಂಗಡಿ ಹೆಚ್ಚು ರುಚಿಕರವಾಗಿದ್ದು ಇದರಿಂದ ಹೆಚ್ಚು ಲಾಭವನ್ನು ತಂದುಕೊಟ್ಟಿದೆ ಬಸವರಾಜ್ ಅವರಿಗೆ.. ಇನ್ನೂ‌ ಈ ಹಳದಿ ಕಲ್ಲಂಗಡಿ ಬೆಳೆಯನ್ನು ಬೆಳೆಯಲು ಎರಡು ಲಕ್ಷ ಖರ್ಚು ಮಾಡಿದ‌ ಬಸವರಾಜ್ ಅವರು ಅವುಗಳನ್ನ ನಗರದ ಮಾರ್ಟ್, ಬಿಗ್ ಬಜಾರ್ ಅವರಿಗೆ ಮಾರಾಟ ಮಾಡಿ ಇದರಿಂದ ಸುಮಾರು‌ 3 ಲಕ್ಷ ಲಾಭ ಪಡೆಯುತ್ತಿದ್ದಾರೆ.. ಇನ್ನೂ ಕೆಂಪು ಕಲ್ಲಂಗಡಿ ಒಂದು ಟನ್ ಗೆ 5 ರಿಂದ 7 ಸಾವಿರ ರೂಪಾಯಿಗೆ ಮಾರಾಟವಾದರೆ ಈ ಹಳದಿ ಕಲ್ಲಂಗಡಿ ಒಂದು ಟನ್ ಗೆ 15‌ ಸಾವಿರದಷ್ಟು ಮಾರಾಟ ವಾಗುತ್ತಿದೆ.. ಉಷ್ಣಾಂಶ ಹೆಚ್ಚಾಗಿರುವ ಪ್ರದೇಶಗಳಲ್ಲಿ ಈ ಹಳದಿ ಕಲ್ಲಂಗಡಿ ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಕೂಡುತ್ತದೆ.. ಎಲ್ಲರಂತೆ ಅಲ್ಲದೆ ವಿಭಿನ್ನ ಪ್ರಯತ್ನ ಹಾಗು ಧೈರ್ಯ ಮಾಡಿ ಕೃಷಿಯಲ್ಲಿ ಹೊಸ ದಾರಿ ಕಂಡುಕೊಂಡಿರುವ ಬಸವರಾಜ್ ಅವರ ಈ ಪ್ರಯತ್ನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..