Advertisements

ಆ್ಯಂಕರ್ ಅನುಶ್ರೀ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದಂತಹ ಕೆಲವು ಸತ್ಯ ಘ’ಟನೆಗಳು ಏನು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಅನುಶ್ರೀ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಮೈಕ್ ಹಿಡಿದು ಸ್ಟೇಜ್ ಮೇಲೆ ಬಂದರೆ ಸಾಕು ಕಾರ್ಯಕ್ರಮ ಅದ್ಭುತವಾಗಿ ಮುಡಿಬರುತ್ತಿತ್ತು.. ಇಂದಿಗೂ ಕೂಡ ರಾಜ್ಯದ ನಂಬರ್‌ ಒನ್ ನಿರೂಪಕಿ ಎಂದು ಹೆಸರುಗಳಿಸಿದ್ದಾರೆ, ಇನ್ನು ಇಂತಹ ದೊಡ್ಡ ಸಾಧನೆಯನ್ನು ಮಾಡಲು ಅನುಶ್ರೀ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಚಿಕ್ಕ ವಯಸ್ಸಿನಲ್ಲಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಬೇಕು ಎನ್ನುವುದು ಅನುಶ್ರೀ ಅವರ ಕನಸಾಗಿತ್ತು.. ಆದರೆ ಅನುಶ್ರೀ ಚಿಕ್ಕ ವಯಸ್ಸಿನಲ್ಲಿಯೇ ಅವರ ತಂದೆ ತಾಯಿ ಬೇರೆಯಾದರು.. ಆದರೂ ಎದೆಗುಂದದೆ ‌ಅನುಶ್ರೀ ಅವರ ತಾಯಿ ತನ್ನ ಇಬ್ಬರು ಮಕ್ಕಳನ್ನು ತುಂಬಾನೇ ಕಷ್ಟಪಟ್ಟು ಓದಿಸಿದರು, ಇನ್ನೂ ಅನುಶ್ರೀ ಪಿಯುಸಿ ವಿದ್ಯಾಭ್ಯಾಸ ಪಡೆಯುತ್ತಿದ್ದಾಗ, ಅವರ ತಾಯಿ ಪಡುವ ಕಷ್ಟ ನೋಡಲಾಗಿದೆ, ತಾನು ದುಡಿಯಬೇಕು ಮನೆ ಹಾಗು ತಾಯಿ ತಮ್ಮನ ಜವಬ್ದಾರಿ ತಾನು ಹೋರಬೇಕು ಎಂಬ ಒಳ್ಳೆಯ ಮನಸ್ಸು ಧೈರ್ಯ ಅನುಶ್ರೀಗೆ ಬಂದಿತು..

[widget id=”custom_html-2″]

Advertisements
Advertisements

ಆಗ ನಾನು ಏನು ಮಾಡಬೇಕು ಎಂದು ಅನುಶ್ರೀಗೆ ಗೊತ್ತಾಗಲಿಲ್ಲ, ತನ್ನ ಮಾತಿನ‌ ಶೈಲಿಯನ್ನು ತಮ್ಮ ಬಂಡವಾಳವಾಗಿ ಮಾಡಿಕೊಂಡು, ಮಂಗಳೂರಿನಲ್ಲಿ ನಮ್ಮ ಟಿವಿ ಎನ್ನುವ ಚಾನಲ್ ನಲ್ಲಿ ಪಿಯುಸಿ ಓದುವಾಗ ಕೆಲಸಕ್ಕೆ ಸೇರಿದರು.. ಇನ್ನೂ ಆ ಕೆಲಸದಲ್ಲಿ ಅನುಶ್ರೀಗೆ ಕಡಿಮೆ ಸಂಬಳ ಸಿಗುತ್ತಿತ್ತು.. ಆದರೆ ಆ ಹಣ ಕುಟುಂಬ ನಡೆಸಲು ಸಾಕಾಗುತ್ತಿರಲಿಲ್ಲ.. ಆಗ ಯೋಚನೆ ಮಾಡಿದ ಅನುಶ್ರೀ ನಂತರ ಬೆಂಗಳೂರಿನಲ್ಲಿ ಬಸ್ ಹತ್ತಿ ಆತಂಕ ಮತ್ತು ಭಯದ ಜೊತೆ ಹತ್ತಾರು ಕನಸನ್ನು ಹೊತ್ತು ತನ್ನ ತಾಯಿಯನ್ನು ಜೀವನ ಪೂರ್ತಿ ಸಂತೋಷದಿಂದ ನೋಡಿಕೊಳ್ಳಬೇಕು ಎನ್ನುವ ಛಲ ಮತ್ತು ಧೈರ್ಯದಿಂದ ಬೆಂಗಳೂರಿಗೆ ಬರುತ್ತಾರೆ.. ನಂತರ ಬೆಂಗಳೂರಿನಲ್ಲಿ ‌ತಮ್ಮ‌ ಬುದ್ದಿ ಹಾಗು ಪ್ರತಿಭೆಯಿಂದ ETV ನ್ಯೂಸ್ ಚಾನಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡರು,

[widget id=”custom_html-2″]

ಆಗ ಅನುಶ್ರೀಗೆ ಒಂದು ಎಪಿಸೋಡ್ ಸಿಗುತ್ತಿದ್ದು ಕೇವಲ 250 ರೂಪಾಯಿ ಮಾತ್ರ, ಅಲ್ಲದೇ ನಿರೂಪಕಿಯಾಗಿ ಕೆಲಸ ಮಾಡುತ್ತಾ ಸಿನಿಮಾದಲ್ಲಿ ಡಬ್ಬಿಂಗ್ ಆರ್ಟಿಸ್ಟ್‌ ಆಗಿ ತುಂಬಾ ಕಷ್ಟ ಪಟ್ಟು ದುಡಿದ ಅನುಶ್ರೀ, ಕೊನೆಗೆ ಒಂದು ದಿನ ಕನ್ನಡಿಗರ ಮನೆಮಾತಾದರು, ನೂರಾರು ಪ್ರತಿಭಾವಂತ ವ್ಯಕ್ತಿಗಳ ಜೊತೆಗೆ ಸ್ಪರ್ಧೆಯಲ್ಲಿ ನಿಂತು ಕೊನೆಗೆ ನಂಬರ್‌ ಒನ್ ಆ್ಯಂಕರ್‌ ಆಗಿ ಹೊರ ಹೊಮ್ಮುತ್ತಾರೆ.. ಇದರ ಜೊತೆಯಲ್ಲಿ ತಮ್ಮನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುತ್ತಾರೆ, ತಮ್ಮ‌ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ, ಆದರೆ ಅನುಶ್ರೀ ಬಗ್ಗೆ ತುಂಬಾ ಜನಕ್ಕೆ ತಿಳಿಯದ ಮತ್ತೊಂದು ವಿಷಯ ಏನೆಂದರೆ, ನಟ ಯಶ್ ನಟಿಸಿದ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಅಭಿನಯಿಸಲು ನಿರ್ದೇಶಕ ಶಶಾಂಕ್ ಅವರು ಮೊದಲು ಕೇಳಿದ್ದು ಅನುಶ್ರೀ ಅವರನ್ನು,

ಆದರೆ ತುಂಬಾ ಸಂಕೋಚ ಮನೋಭಾವ ಹೊಂದಿದ್ದ ಅನುಶ್ರೀ ಸಿನಿಮಾದಲ್ಲಿ ನಟನೆ ಮಾಡಲು ಹಿಂಜರಿದರು.. ಇನ್ನೂಂದು ಖುಷಿಯ ವಿಚಾರ ಏನೆಂದರೆ ಡಬ್ಬಿಂಗ್ ಆರ್ಟಿಸ್ಟ್ ವಿಭಾಗದಲ್ಲಿ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಅನುಶ್ರೀ ಅವರು ಪಡೆದಿದ್ದಾರೆ.. ಇನ್ನೂ ತನ್ನ ಧೈರ್ಯ ಹಾಗು ಪ್ರತಿಭೆಯನ್ನು ನಂಬಿ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಅನುಶ್ರೀ, ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಅಂದರೆ ಅದಕ್ಕೆ ಅನುಶ್ರೀ ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಸ್ನೇಹಿತರೆ ಆ್ಯಂಕರ್ ಅನುಶ್ರೀ ಪಟ್ಟ ಕಷ್ಟ ಹಾಗು ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..