ನಮಸ್ತೆ ಸ್ನೇಹಿತರೆ, ನಮ್ಮ ಭಾರತದ ಖ್ಯಾತ ನಟರಲ್ಲಿ ಆಶಿಶ್. ಅದರೆ ಇವರ ಪೂರ್ತಿ ಹೆಸರು ಆಶಿಶ್ ವಿದ್ಯಾರ್ಥಿ ಅಂತ.. ಇವರು ಕೇರಳ ಕಣ್ಣೂರಿನಲ್ಲಿ 1965 ರಲ್ಲಿ ಇವರು ಜನಿಸಿದರು ಸಿನಿಮಾದಲ್ಲಿ ಇವರು ಆಶಿಶ್ ವಿದ್ಯಾರ್ಥಿ ಅವರು ಸುಮಾರು 12 ಭಾಷೆಯ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.. ಅಷ್ಟೇ ಅಲ್ಲದೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಅದ್ಭುತವಾಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ ಭಾರತ ಕಂಡ ಅತ್ಯಂತ ಫೇಮಸ್ ಮತ್ತು ಹೆಸರಾಂತ ನಟ ಆಶಿಶ್ ವಿದ್ಯಾರ್ಥಿ ಅವರು.. ಇನ್ನೂ ಇವರ ಸುಂದರವಾದ ಕುಟುಂಬ ಹೇಗಿದೆ ಇವರ ಪತ್ನಿ ಕೂಡ ದೊಡ್ಡ ಸ್ಟಾರ್ ನಟಿಯಾಗಿ ಮಿಂಚಿದ್ದಾರೆ ಅವರು ಯಾರು ಗೊತ್ತಾ? ಆಶಿಶ್ ವಿದ್ಯಾರ್ಥಿ ಅವರು ಕನ್ನಡ ತಮಿಳು ತೆಲುಗು ಮಲೆಯಾಳಂ ಬೆಂಗಾಲಿ ಹಿಂದಿ ಈಗೆ ನಾನಾ ರೀತಿಯ ಭಾಷೆಯ ಸಿನಿಮಾದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದಾರೆ..

ಚಿತ್ರಗಳು ಮಾತ್ರವಲ್ಲದೆ ಟಿವಿ ಸೀರಿಯಲ್ ಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರ. 1995 ರಲ್ಲಿ ಆಶಿಶ್ ವಿದ್ಯಾರ್ಥಿ ಅವರಿಗೆ ನ್ಯಾಷನಲ್ ಅವಾರ್ಡ್ ಕೂಡ ಸಿಕ್ಕಿತು. ದೆಹಲಿಯಲ್ಲಿ ತಮ್ಮ ಶಿಕ್ಷಣ ಮತ್ತು ಪದವಿಯನ್ನ ಪಡೆದಿದ್ದರು ಅನಂತರ ಇವರು ಒಂದು ರಂಗಭೂಮಿ ತಂಡಕ್ಕೆ ಸೇರಿಕೊಳ್ಳುತ್ತಾರೆ. ಹೌದು ಆಶಿಶ್ ವಿದ್ಯಾರ್ಥಿ ಅವರಿಗೆ ಕಾಲೇಜಿನ ದಿನಗಳಿಂದಲೂ ನಟನೆಯ ಮೇಲೆ ಹೆಚ್ಚಿನ ಆಸಕ್ತಿಯನ್ನ ಬೆಳೆಸಿಕೊಂಡಿದ್ದರು.. ಇವರು ಸಿನಿಮಾದಲ್ಲಿ ಮೊದಲು ನಟನೆಯನ್ನು ಪ್ರಾರಂಭ ಮಾಡಿದ್ದು ಕನ್ನಡ ಸಿನಿಮಾದಲ್ಲಿ 1986 ರಲ್ಲಿ ತೆರೆಕಂಡ ಆನಂದ್ ಸಿನಿಮಾದಲ್ಲಿ ಆಶಿಶ್ ವಿದ್ಯಾರ್ಥಿ ಅವರು ತಮ್ಮ ನಟನೆಯನ್ನು ಪ್ರಾರಂಭ ಮಾಡಿದ್ದರು ಆಗ ಅವರ ಸಿನಿಮಾ ಪಯಣ ಶುರುವಾಯಿತು ಅಂತಾನೇ ಹೇಳಬಹುದು

ನಂತರ ಇವರು ಮುಂಬೈಗೆ ಬಂದು 1992 ರಲ್ಲಿ ನಟನೆ ಮಾಡುತ್ತಾರೆ ಅವರ ನಟನೆಗೆ ಅವಾರ್ಡ್ ಕೂಡ ಸಿಕ್ಕಿತ್ತು .. ನಂತರ 1998 ರಲ್ಲಿ ನಟ ಶಿವರಾಜ್ ಕುಮಾರ್ ಅಭಿನಯಿಸಿದ AK47 ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇನ್ನೂ 2000 ಇಸವಿಯಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡು ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದ್ದರು ಅಂತಾನೇ ಹೇಳಬಹುದು.. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಅಪೋಸಿಟ್ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದರು ನಂತರ 2001 ರಲ್ಲಿ ತೆರೆಕಂಡ ಒಂದೇಮಾತರಂ ಸಿನಿಮಾದಲ್ಲಿ ಕೂಡ ಅಭಿನಯಿಸಿದರು ಅಷ್ಟೇ ಅಲ್ಲದೆ ಆ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿಬಂದಿತು. ತಮ್ಮ ವೃತ್ತಿ ಜೀವನದಲ್ಲಿ ಆಶಿಶ್ ವಿದ್ಯಾರ್ಥಿ ಅವರು

ಸುಮಾರು 200ರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ಬಣ್ಣವನ್ನ ಹಚ್ಚಿದ್ದಾರೆ .. ಇನ್ನೂ ಆಶಿಶ್ ವಿದ್ಯಾರ್ಥಿ ಅವರ ಪತ್ನಿ ಕೂಡ ಫೇಮಸ್ ನಟಿ ಕೂಡ ಹೌದು ಇವರು ಬೆಂಗಾಲಿಯಲ್ಲಿ ತುಂಬಾನೇ ಫೇಮಸ್ ನಟಿಯಾಗಿದ್ದಾರೆ ಇವರ ಪತ್ನಿಯ ಹೆಸರು ರಾಜೋಶಿ ವಿದ್ಯಾಾರ್ಥಿ ಅಂತ ಇನ್ನೂ ಆಶಿಶ್ ಅವರಿಗೆ ಈಗ 57 ವರ್ಷ ವಯಸ್ಸಾಗಿದೆ.. ಸದ್ಯಕ್ಕೆ ಆಶಿಶ್ ವಿದ್ಯಾರ್ಥಿ ಅವರು ಬೆಂಗಳೂರಿನ ಸೆಂಟ್ರಲ್ ಆಗಿದ್ದಾರೆ. ಇನ್ನೂ ಆಶಿಶ್ ವಿದ್ಯಾರ್ಥಿ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ ಮಗನ ಹೆಸರು ಆರ್ಥ ವಿದ್ಯಾರ್ಥಿ ಅಂತ.. ಸ್ನೇಹಿತರೆ ನಟ ಆಶಿಶ್ ವಿದ್ಯಾರ್ಥಿ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..