ನಮಸ್ತೆ ಸ್ನೇಹಿತರೆ, ಕನ್ನಡ ಬಿಗ್ ಬಾಸ್ ನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವಂತೆ ಕಳೆದ ವಾರ ಸಹಿತ ಎಪಿಸೋಡ್ ಗಳಗೆ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿರುವ ನಟ ಕಿಚ್ಚ ಸುದೀಪ್ ಅವರು ಭಾಗವಹಿಸಿರಲಿಲ್ಲ.. ಅವರು ತಮ್ಮ ಅನಾರೋಗ್ಯ ಕಾರಣದಿಂದ ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ವಾರಾಂತ್ಯದಲ್ಲಿ ಎಪಿಸೋಡ್ ಗಳು ಸುದೀಪ್ ಇಲ್ಲದೆ ನಡೆದಿದ್ದವು.. ಆದರೆ ಈ ವಾರ ಕೂಡ ಬಿಗ್ ಬಾಸ್ ವೇದಿಕೆಗಳ ಕಿಚ್ಚ ಸುದೀಪ್ ಅವರು ಬರುತ್ತಿಲ್ಲ.. ಹಾಗಾದರೆ ಸುದೀಪ್ ಅವರಿಗೆ ಏನಾಯಿತು ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ..
[widget id=”custom_html-2″]

ಕಳೆದ ವಾರ ಮುಗಿಯಿತು ಈ ವಾರ ಕಿಚ್ಚ ಸುದೀಪ್ ಅವರು ವಾರಾಂತ್ಯದ ಎಪಿಸೋಡ್ ಗಳಿಗೆ ಆಗಮಿಸಲಿದ್ದಾರೆ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳು ಹಾಗು ಬಿಗ್ ಬಸ್ ವೀಕ್ಷಕರಲ್ಲಿತ್ತು.. ಇನ್ನೂ ಮನೆಯ ಸದಸ್ಯರು ಸಹಾ ಈ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರುನ್ನು ನೋಡುವ ಹಾಗು ಅವರೊಂದಿಗೆ ಮಾತಾನಾಡುವ ಆಸೆಯನ್ನು ಹೊಂದಿದ್ದರು.. ಆದರೆ ಇದೀಗ ಎಲ್ಲರ ನಿರೀಕ್ಷೆಗಳು ಈಗ ಮತ್ತೊಮ್ಮೆ ಸುಳ್ಳಾಗುತ್ತಿದೆ.. ಕಾರಣ ಎನೆಂದರೆ ಒಂದು ಬ್ಯಾಂಡ್ ನ್ಯೂಸ್ ಹೊರ ಬಂದಿದೆ. ನಟ ಕಿಚ್ಚ ಸುದೀಪ್ ಅವರೆ ಸ್ವತಃ ಅಭಿಮಾನಿಗಳಿಗೆ ಹಾಗು ಬಿಗ್ ಬಾಸ್ ಗೆ ಟ್ವೀಟ್ ಮಾಡುವ ಮೂಲಕ ನಾನು ಈ ವಾರವೂ ಕೂಡ ವಾರಾಂತ್ಯದ ಎಪಿಸೋಡ್ ಗಳಲ್ಲಿ ಭಾಗವಹಿಸುತ್ತಿಲ್ಲ ಎನ್ನುವ ವಿಷಯವನ್ನು ಹಂಚಿಕೊಂಡಿದ್ದಾರೆ..
[widget id=”custom_html-2″]

ನಟ ಸುದೀಪ್ ಅವರು ತಮ್ಮ ಟ್ವೀಟ್ ನಲ್ಲಿ ಈ ವಾರಾಂತ್ಯದ ಎಪಿಸೋಡ್ ಗಳನ್ನ ಮಿಸ್ ಮಾಡಿಕೊಂಡಿದ್ದೇ ಗಂಟೆಗಟ್ಟಲೆ ಬಿಗ್ ಬಾಸ್ ನ್ನ ವೇದಿಕೆಯ ಮೇಲೆ ಶೂಟಿಂಗ್ ನಲ್ಲಿ ನಿಂತು ಮನೆಯ ಸದಸ್ಯರಿಗೆ ನ್ಯಾಯವನ್ನ ಒದಗಿಸುವುದಕ್ಕಿಂತ ಮೊದಲು ನನಗೆ ಮತ್ತಷ್ಟು ವಿಶ್ರಾಂತಿಯ ಅಗತ್ಯ ವಿದೆ.. ಇದು ನಿಜವಾಗಿಯೂ ಬಹಳ ಕಷ್ಟಕರವಾದ ನಿರ್ಧಾರವಾಗುತ್ತಿದೆ ಆದರೆ ವಾರಾಂತ್ಯದ ಎಪಿಸೋಡ್ ಗಳ ಚಿತ್ರೀಕರಣವನ್ನ ರದ್ದು ಮಾಡಿದ ವಾಹಿನಿಯು ನನ್ನ ಕಷ್ಟವನ್ನ ಸುಲಭವನ್ನಾಗಿ ಮಾಡಿದ್ದಕ್ಕೆ ಧನ್ಯವಾದಗಳನ್ನ ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ.. ಕಿಚ್ಚ ಸುದೀಪ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..