ನಮಸ್ತೆ ಸ್ನೇಹಿತರೆ, ಮಂಜು ಪಾವಗಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಹಾಸ್ಯ ನಟ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಮಜಾ ಭಾರತ ಕಾಮಿಡಿ ಶೋ ಕಾರ್ಯಕ್ರಮದಿಂದ ಪ್ರಸಿದ್ಧಿಯಾಗಿದ್ದಾರೆ.. ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.. ಹೌದು ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಇಡೀ ರಾಜ್ಯಾದ್ಯಂತ ಎಲ್ಲರೂ ಕೂಡ ಬಹಳ ಇಷ್ಟ ಪಡುವಂತಹ ಸ್ಪರ್ಧಿ ಅಂದ್ರೆ ಅದು ಮಂಜು ಪಾವಗಡ ಅವರು.. ಈ ಬಿಗ್ ಬಾಸ್ ಸೀಸನ್8 ರಲ್ಲಿ ಘ’ಟನಾ ಘ’ಟಿ ಸ್ಪರ್ಧಿಗಳ ನಡುವೆ ಗೆದ್ದು ಇಂದು ಬಿಗ್ ಬಾಸ್ ಟ್ರೋಫಿ ಹಿಡಿದ ಹಳ್ಳಿ ಹುಡುಗ ಮಂಜು ಅವರ ಜನರು ಜೀವನದ ಲೈಪ್ ಸ್ಟೈಲ್ ಬಗ್ಗೆ ನೋಡೋಣ ಬನ್ನಿ.. ಮಹಾಭಾರತದ ಮೂಲಕ ಸಕ್ಕತ್ ಫೇಮಸ್ ಆದ ಮಂಜುನಾಥ್ ಅಲಿಯಾಸ್ ಮಂಜು ಪಾವಗಡ ಅಂತ..

ಇವರ ನಿಕ್ ನೇಮ್ ಲ್ಯಾಗ್ ಮಂಜು ವೃತ್ತಿ ಜೀವನ ಹಾಸ್ಯ ಕಾಲವಿದ, ಇವರು ಹುಟ್ಟಿದ ದಿನಾಂಕ ನವೆಂಬರ್-11- 1987 ರಂದು. ಮಂಜು ಅವರು ಜನಿಸಿದ ಸ್ಥಳ ತುಮಕೂರಿನ ಪಾವಗಡದಲ್ಲಿ.. ಇವರಿಗೆ ಈಗ 34 ವರ್ಷ ವಯಸ್ಸಾಗಿದೆ. ಇವರು ತಮ್ಮ ವಿದ್ಯಬ್ಯಾಸವನ್ನ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದರೂ ಆದರೆ ಅದನ್ನ ಪುರ್ತಿಯಾಗಿ ಮುಗಿಸದೆ ಅರ್ಧಕ್ಕೆ ನಿಲ್ಲಿಸಿದರು.. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಅವರಿಗೆ ಒಂದು ವಾರಕ್ಕೆ ಸಿಕ್ಕ ಸಂಭಾವನೆ 65 ಸಾವಿರ ರೂಪಾಯಿ.. ಇವರು ಗಳಿಸಿದ ಒಟ್ಟು ಆಸ್ತಿಯ 10 ರಿಂದ 15ಲಕ್ಷ ಬೆಲೆ ಬಾಳುತ್ತದೆ ಅಂತ ಹೇಳಲಾಗಿದೆ.. ಇನ್ನೂ ಮಂಜು ಪಾವಗಡ ಅವರು ತಮ್ಮ ಆರಂಭದ ದಿನಗಳಲ್ಲಿ ಬಹಳಷ್ಟು ಕಷ್ಟಕರ ದಿನಗಳನ್ನ ಎದುರಿಸಿದ್ದಾರೆ..

ಬೆಂಗಳೂರಿನ ಬಂದ ಹೊಸದರಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಾ ಬಿಡುವಿನ ಸಮಯದಲ್ಲಿ ನಾಟಕಗಳಲ್ಲಿ ನಟನೆ ಮಾಡುತ್ತಿದ್ದರು ನಂತರ ಮಹಾಭಾರತದ ಆಡಿಶನ್ ನಲ್ಲಿ ಭಾಗವಹಿಸಿದ ಬಳಿಕ ಅದರಲ್ಲಿ ಆಯ್ಕೆಯಾದರು.. ಅಲ್ಲಿಂದ ಇಲ್ಲಿಯ ವರೆಗೂ ಮಂಜು ಪಾವಗಡ ಅವರು ತಮ್ಮ ಸ್ವಂತ ಪರಿಶ್ರಮ ಹಾಗು ಛಲದಿಂದ ಇಂದು ಕನ್ನಡದ ಜನಪ್ರಿಯ ಶೋ ಆಗಿರುವ ಬಿಗ್ ಬಾಸ್ ನಂತಹ ದೊಡ್ಡ ವೇದಿಕೆಯಲ್ಲಿ ಕೂಡ ಜಯಗಳಿಸಿ ಒಬ್ಬ ದೊಡ್ಡ ಸೆಲೆಬ್ರಿಟಿಯಾಗಿ ಬೆಳೆದು ನಿಂತಿದ್ದಾರೆ.. ಈಗಾಗಲೇ ಲವ್ ಯು ಟೂ, ಹಾಗು ಮೇಘ ಅಲಿಯಾಸ್ ಮ್ಯಾಗಿ ಸಿನಿಮಾದಲ್ಲಿ ನಟನೆ ಮಾಡಿರುವ ಇವರು ದಾಸಪ್ಪ ಎನ್ನುವ ಸಿನಿಮಾದಲ್ಲಿ ನಾಯಕರಾಗಿ ನಟನೆ ಮಾಡುತ್ತಿದ್ದಾರೆ.. ಸ್ನೇಹಿತರೆ ಮಂಜು ಪಾವಗಡ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..