Advertisements

ಕೃಷಿ ಬೆಳೆಯಲ್ಲಿ ತಿಂಗಳಿಗೆ 1 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ ಈ‌ ಮಹಿಳೆ.! ಕೃಷಿಗೆ ಈ ಮಹಿಳೆ ಬಳಸಿದ ಐಡಿಯಾ ಕೇಳಿದ್ರೇ ನೀವು ಕೂಡ ಕೃಷಿ ಮಾಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ದೇಶದಲ್ಲಿ ರೈತರ ಮಕ್ಕಳಿಗೆ ಯಾರು ಕೂಡ ಹೆಣ್ಣು ಕೊಡುವುದಿಲ್ಲ, ಅದೇ ಸಾಫ್ಟ್ವೇರ್ ಇಂಜಿನಿಯರ್ ಅಥವಾ ಗೌರ್ಮೆಂಟ್ ಕೆಲಸ ಇರುವವರೆಗೆ ಮಾತ್ರ ಅವರು ಕೇಳದಿದ್ದರೂ ಹುಡುಕಿಕೊಂಡು ಹೋಗಿ ಕೇಳಿ ಮದುವೆ ಮಾಡ್ತಾರೆ, ಅದರೆ ರೈತರ ಮಕ್ಕಳು ಅವರ ಬಳಿ ಹೋಗಿ ಕೇಳಿದರು ನಿರಾಕರಿಸುತ್ತಾರೆ, ಯಾಕೆಂದರೆ ರೈತ ಹಣ ಇಲ್ಲದವರು ಹಾಗೂ ಶ್ರೀಮಂತಿಕೆ ಕೂಡ ಇರೋದೆ ಇಲ್ಲ ಅದಕ್ಕೆ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಾರೆ.. ಅದರೆ ಇಲ್ಲಿ ನಾವು‌ ಒಬ್ಬ ರೈತ ಮಹಿಳೆ ವ್ಯವಸಾಯದಲ್ಲಿ 1 ಲಕ್ಷ ದಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ.. ಹೌದು ಸ್ನೇಹಿತರೆ ಆ ಮಹಿಳೆ ಯಾರು! ಅವರು ಬಳಸಿದ ಐಡಿಯಾ ಯಾವುದು ಅದರ ಬಗ್ಗೆ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಪ್ರತಿನಿತ್ಯ ಬೆಳಿಗ್ಗೆ ಎಂದು ಅಡುಗೆ ಮಾಡಿ ನಂತರ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಮಹಿಳೆಯರು ಹೊರಗೆ ಹೋಗಿ ದುಡಿಯುವ ಗಂಡಸರಿಗಿಂತ ಹೆಚ್ಚು ಸಂಪಾದನೆ ಮಾಡುತ್ತಾರೆ ಅನ್ನೋದಕ್ಕೆ ಇದೆ ಸಾಕ್ಷಿ.. ಈ ಮಹಿಳೆ ಕೂಡ ತನ್ನ ಮನೆಯಲ್ಲಿ ತುಂಬಾ ಬಡತನ ಹಾಗು ಕಷ್ಟದ ಪರಿಸ್ಥಿತಿ ತಲುಪಿದಾಗ ತನ್ನ ಒಂದು ಆಲೋಚನೆಯಿಂದ ತಿಂಗಳಿಗೆ ಒಂದು ಲಕ್ಷ ದುಡಿಯುವಂತೆ ಮಾಡಿದೆ.. ಇನ್ನು ಇವರ ಹೆಸರು ಬೀನಾದೇವಿ ಇವರು ಬಿಹಾರ್ ರಾಜ್ಯದಲ್ಲಿ ಎಲ್ಲರಂತೆ ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟರು, ತನ್ನ ಗಂಡನ ಕುಟುಂಬ ವ್ಯವಸಾಯ ಮಾಡಿ ಬದುಕುತ್ತಿದ್ದರು.. ಇನ್ನು ಇವರು ದುಡಿಯುವಂತಹ ಹಣ ಕೇವಲ ತಿನ್ನೋದಕ್ಕೆ ಮಾತ್ರ ಸಾಕಾಗುತ್ತಿತ್ತು..

[widget id=”custom_html-2″]

ಬೀನಾದೇವಿ ಅವರಿಗೆ ಮಕ್ಕಳಾದ ಮೇಲೆ, ತನ್ನ ಮಕ್ಕಳ ಜೀವನ ಕೂಡ ನನ್ನ ಹಾಗೆ ಆಗಬಾರದು ಎಂದು, ಅವರಿಗೆ ಉತ್ತಮ ಜೀವನ ರೂಪಿಸಬೇಕು ಎಂಬ ಆಲೋಚನೆ ಬೀನಾದೇವಿ ಮನದಲ್ಲಿ ಮೂಡಿತ್ತು.. ಇನ್ನು ಆದೆ ಸಮಯಕ್ಕೆ‌ ವ್ಯವಸಾಯ ಮಾಡುವ ದೆಸೆಯಲ್ಲಿ, ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಇದಕ್ಕೆ ತರಬೇತಿ ಕೊಡಲಾಗುತ್ತಿತ್ತು.. ಇನ್ನು ಈ ಕೃಷಿ ಬಗ್ಗೆ ಟ್ರೈನಿಂಗ್ ಪಡೆದ ಬೀನಾದೇವಿ ಅವರಿಗೆ ಅಣಬೆ ಹಾಗೂ ಸಹಜ ಪದ್ದತಿಯಲ್ಲಿ, ವ್ಯವಸಾಯ ಮಾಡುವುದಕ್ಕೆ ಆಸಕ್ತ ಬೆಳೆಯಿತು.. ಅದರ ಜೊತೆಗೆ ಕೃಷಿ ಟ್ರೈನಿಂಗ್ ನಲ್ಲಿ ಅಣಬೆಯನ್ನು ಯಾವ ರೀತಿ ಬೆಳೆಯಬೇಕು ಎಂದು ಹೇಳುತ್ತಿದ್ದರು.. ಕೊನೆಗೂ ಕುಟುಂಬದ ಪದ್ದತಿಯನ್ನು ದಾಟಿ, ಅಣಬೆ ಬೆಳೆಯಲು ಮುಂದಾದ ಬೀನಾದೇವಿ ಅವರು ತಮ್ಮ ಮನೆಯ ಪಕ್ಕದಲ್ಲಿದ ಗುಡಿಸಲಿನಲ್ಲಿ ಅಣಬೆ ಕೃಷಿ ಮಾಡಲು ಶುರುಮಾಡಿದರು..

[widget id=”custom_html-2″]

ನಂತರ ಆ ಗುಡಿಸಿಲಿನಲ್ಲಿ ಒಂದು ಕೆಜಿ ಅಣಬೆಯನ್ನು ಬೆಳೆದರು, ನಂತರ ಬಂದ ಬೆಳೆಯನ್ನು ನೋಡಿ ಬೀನಾದೇವಿ ಅವರಿಗೆ ಸಂತೋಷವಾಗಿ, ಮತ್ತೆ ದೊಡ್ಡ ಪ್ರಮಾಣದಲ್ಲಿ ಅದರೆ ನೂರಾರು ಕೆಜಿ ಅಣಬೆ ಬೆಳೆಯಲು ಪ್ರಾರಂಭಿಸಿದರು.. ನಂತರ ಬೆಳೆದ ಅಣಬೆಯನ್ನು ಹತ್ತಿರದ ಅಂಗಡಿ ಹಾಗು ತಮ್ಮ ಮನೆಯ ಮುಂದೆ ಅಣಬೆ ಮಾರಾಟ ಮಾಡಲು ಶುರುಮಾಡಿದರು, ಅದರೆ ತಮಗಿರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಸಹಜ ಪದ್ದತಿಯಲ್ಲಿ ವ್ಯವಸಾಯ ಮಾಡಲು ಶುರುಮಾಡಿದರು.. ನಂತರ ಸಹಜ ಸ್ಥಿತಿಯ ಬೆಳೆಯಲ್ಲಿ ಕೂಡ ಯಶಸ್ಸು ಸಾಧಿಸಿದರು..ಇನ್ನು ಬೀನಾದೇವಿ ಅವರ ಈ ವ್ಯವಸಾಯದಲ್ಲಿ ಅಣಬೆ ಹಾಗು ಸಹಜ ಕೃಷಿ ಪದ್ದತಿಯಲ್ಲಿ ತಿಂಗಳಿಗೆ ಒಂದು ಲಕ್ಷದವರೆಗೂ ಹಣ ಸಂಪಾದನೆ ಮಾಡುತ್ತಿದ್ದಾರೆ, ಇನ್ನು ಬೀನಾದೇವಿ ಅವರ ಈ ಯಶಸ್ಸು ಬೇರೆಯವರಿಗೂ ಕೂಡ ಸ್ಫೂರ್ತಿಯಾಗಿದ್ದಾರೆ.. ಸ್ನೇಹಿತರೆ ಕೃಷಿಯಲ್ಲಿ ಬೀನಾದೇವಿ ಅವರ ಈ ಆಲೋಚನೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..