ನಮಸ್ತೆ ಸ್ನೇಹಿತರೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಂಗಳ ಸೂತ್ರಕ್ಕೆ ಅದರದೇ ಆದ ಮಹತ್ವದ ಸ್ಥಾನ ಇದೆ.. ಪತ್ನಿಗೆ ತನ್ನ ಗಂಡನ ಅಭಿವೃದ್ಧಿಯಲ್ಲಿ ಈ ತಾಳಿ ಅತಿ ಮುಖ್ಯವಾಗಿ ಪಾತ್ರ ವಹಿಸುತ್ತದೆ.. ಆದರೆ ಈಗಿನ ಕಾಲದಲ್ಲಿ ಅಂತು ಮಂಗಳ ಸೂತ್ರದ ಮಹತ್ವ ಕೇವಲ ಮಾತಿಗಷ್ಟೇ ಹೆಸರಾಗಿದೆ.. ಯಾಕೆಂದರೆ ಯಾರೇ ಆಗಲಿ ಮದುವೆಯಾದ ಹಣ್ಣು ಮನೆಯಿಂದ ಹೊರಗೆ ಹೋಗಿ ದುಡಿಮೆ ಮಾಡುವ ಸಮಯದಲ್ಲಿ ಮದುವೆಯಲ್ಲಿ ಕಟ್ಟಿದ ಮಂಗಳ ಸೂತ್ರವನ್ನು ಮನೆಯಲ್ಲಿ ತೆಗೆದು ಹಿಟ್ಟು ಬೇರೆ ಮಂಗಳ ಸೂತ್ರ ಧರಿಸಿ ಹೊರಗೆ ಹೋಗುತ್ತಾರೆ.. ಇನ್ನೂ ಈಗಿನ ಕಾಲದಲ್ಲಿ ಮದುವೆಗಳಿಗೆ ತಾಳಿಯಲ್ಲಿ ಯಾವ ಡಿಸೈನ್ ಇದೆ ಯಾವ ಸೈಟ್ ಅದು ಎಷ್ಟು ಗ್ರಾಂ ತೂಕ ಬರುತ್ತದೆ ಎಂದು ತಾಳೆ ಹಾಕುತ್ತಾರೆ..

ಆದರೆ ಸ್ನೇಹಿತರು ನಮ್ಮ ಬಾಲಿವುಡ್ ಸ್ಟಾರ್ ನಟಿಯರು ತಮ್ಮ ಕೊರಳಲ್ಲಿ ಧರಿಸಿರುವ ಮಾಂಗಲ್ಯ ಸೂತ್ರದ ಬೆಲೆ ಎಷ್ಟು ಗೊತ್ತಾ? ಹೌದು ನಮ್ಮ ಬಾಲಿವುಡ್ ನಟಿಯರ ಕೊರಳಲ್ಲಿ ಇರುವಂತಹ ಮಂಗಳ ಸೂತ್ರ ಬೆಲೆ ಕೇಳಿದ ನಿಜಕ್ಕೂ ಆಶ್ಚರ್ಯ ಪಡ್ತೀರಾ.. ಅದರಲ್ಲೂ ಬಾಲಿವುಡ್ ನ ಬ್ಯೂಟಿ ಕ್ವೀನ್ ಐಶ್ವರ್ಯ ರೈ ಅವರ ಮಾಂಗಲ್ಯ ಸೂತ್ರದ ಬೆಲೆ ಸುಮಾರು 45ಲಕ್ಷ ರೂಪಾಯಿ ಇನ್ನೂ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರ ಮಂಗಳ ಸೂತ್ರದ ಸೂತ್ರದ ಬೆಲೆ 52 ಲಕ್ಷ ರೂಪಾಯಿ. ಇನ್ನೂ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರ ಮಂಗಳ ಸೂತ್ರದಲ್ಲಿ ಡೈಮಂಡ್ ಇರುವುದರಿಂದ ಇದರ ಮೌಲ್ಯ 20 ಲಕ್ಷ ರೂಪಾಯಿ ಹಾಗೆನೇ ಪಾಪ್ ಗಾಯಕ ನಿಕ್ ಜೋನಾಸ್ ನ್ನು ಪತ್ನಿ ಪ್ರಿಯಾಂಕಾ ಚೋಪ್ರಾ ಅವರು ಸಂಪ್ರದಾಯಿಕ ಮಂಗಳ ಸೂತ್ರವನ್ನು ಧಾರಣೆ ಮಾಡಿದ್ದು

ಇದರಲ್ಲಿ ಚಿನ್ನ ಕರಿಮಣಿಯ ಜೊತೆಗೆ ಒಂದು ವಜ್ರ ಕೂಡ ಇದೆ ಆದರೆ ಇದರ ನಡುವೆ ನಿಖರವಾದ ಬೆಲೆ ಇಲ್ಲಿಯವರೆಗೂ ತಿಳಿದು ಬಂದಿಲ್ಲ.. ಇನ್ನೂ ಬಳ್ಳಿಯಂತೆ ಬಳುಕುವ ಬೆಡಗಿ ಫಿಟ್ನೆಸ್ ತಾರೆ ಶಿಲ್ಪ ಶೆಟ್ಟಿ ಅವರು ಧರಿಸಿದ ತಾಳಿಯ ಬೆಲೆ 30 ಲಕ್ಷ ರೂಪಾಯಿ. ಇನ್ನೂ ಮಹಾರಾಷ್ಟ್ರ ಸಂಪ್ರದಾಯದಲ್ಲಿ ಅಜಯ್ ದೇವಗನ್ ಅವರನ್ನು ಮದುವೆ ಆಗಿರುವ ನಟಿ ಕಾಜಲ್ ಅವರ ಮಗಳ ಸೂತ್ರ 21ಲಕ್ಷ ಬೆಲೆ ಬೀಳುತ್ತದೆ. ಕರಿಷ್ಮಾ ಕಪೂರ್ ಅವರು ಕೂಡ 17ಲಕ್ಷ ರೂಪಾಯಿ ಬೆಲೆ ಬಾಳುವ ಮಂಗಳ ಸೂತ್ರ ಹೊಂದಿದ್ದಾರೆ.. ನೋಡಿದ್ರಲ್ಲ ಸ್ನೇಹಿತರೆ ಈಗ ಮಂಗಳ ಸೂತ್ರಗಳು ಕೂಡ ಬಹಳ ದುಬಾರಿ ಬೆಲೆ ಎನ್ನುವ ಹಾಗೆ ಕಾಣುತ್ತಿದೆ.. ಆದರೆ ನಮ್ಮ ಪೂರ್ವಜರ ಕಾಲದಲ್ಲಿ ಅರಿಶಿಣ ಕೊಂಬಿನಲ್ಲಿ ನಡೆಯುತ್ತಿದ್ದ ಮದುವೆಗಳು ಈಗ ಚಿನ್ನ ವಜಾ ಆಭರಣಗಳು ಇದ್ದರೆ ಮಾತ್ರ ಮದುವೆಗಳು ನಡೆಯುವಂತಹ ಹೊಸ ಪದ್ದತಿ ಆಗಿವೆ..