Advertisements

ನಿಮಗೆ ಗೊತ್ತಾ ಒಂದು ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳಿವೆ ಎಂಬುದು? ಇಲ್ಲೊಬ್ಬ ವ್ಯಕ್ತಿ 1 ಕೆಜಿ ರಾಗಿಯನ್ನು ಲೆಕ್ಕಹಾಕಿ ಕರ್ನಾಟಕದ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ

Kannada Mahiti

ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಭಿನ್ನವಾಗಿ ತಮ್ಮ ಬುದ್ಧಿವಂತಿಕೆಯಿಂದ ಬುಕ್ ಆಫ್ ರೆಕಾರ್ಡ್ ಮಾಡಿರುವ ಉದಾಹರಣೆ ನಮಲ್ಲಿದೆ..‌ ಹಾಗೆಯೇ ಅವರು ಮಾಡುವ ಸಾಧನೆ ಇಂದಿಗೂ ಕೂಡ ಚಿರಸ್ಮರಣೆ ಯಾಗಿದೆ, ಅದೇರೀತಿ ಇಲ್ಲೊಬ್ಬ ವ್ಯಕ್ತಿ ಒಂದು ಕೆಜಿ ರಾಗಿಯಲ್ಲಿ ಎಷ್ಟು ರಾಗಿ ಕಾಡುಗಳಿವೆ ಎಂದು ಲೆಕ್ಕಾಚಾರ ಮಾಡಿ ಅದರಿಂದ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ.. ಸಾಮಾನ್ಯವಾಗಿ ರೈತರ ಬೆಳೆಯುವ ಒಂದು ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳು ಇರುತ್ತವೆ ಎಂಬುದು ಅದೆಷ್ಟೋ ಜನರಿಗೆ ತಿಳಿದಿರುವುದಿಲ್ಲ.. ಅಲ್ಲದೆ ಇದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಇಲ್ಲಿಯ ವರೆಗೂ ಯಾರು ಸಹಾ ಮಾಡಿರಲಿಲ್ಲ ಇದೀಗ ಶ್ರೀನಿವಾಸ್ ರವರು ಈ ಕೆಲಸವನ್ನು ಮಾಡಿದ್ದು ಅಲ್ಲದೆ ಜನತೆಗೆ ತೋರಿಸಿದ್ದಾರೆ.

Advertisements
Advertisements

ಹೌದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಬ್ಬೂರು ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ದಿವಂಗತ ಮಂಚಶೆಟ್ಟಿ ಹಾಗೂ ದಿವಂಗತ ದೇವಮ್ಮ ಇವರಿಬ್ಬರ ಪುತ್ರ ಶ್ರೀನಿವಾಸ್ ದಿವಂಗತ ರವರು ಒಂದು ಕೆಜಿ ರಾಗಿಯನ್ನು ಲೆಕ್ಕಾಚಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ, ಶ್ರೀನಿವಾಸ್ ಅವರು ಹಲವಾರು ಸಾಹಿತಿಯಾಗಿ, ಸಾಂಸ್ಕೃತಿಕ ಸಂಘಟಕಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಅಲ್ಲದೆ ಇವರು ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆ.. ಶ್ರೀನಿವಾಸ್ ರವರು ರೈತರು ಕಷ್ಟಪಟ್ಟು ಬೆಳೆಯುವ ಬೆಳೆಯ ಶ್ರಮವನ್ನು ವಿಭಿನ್ನವಾಗಿ ಜನತೆಯ ಮುಂದಿಡಬೇಕು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿದ್ದಾರೆ..

ಹೌದು ಶ್ರೀನಿವಾಸ್ ರವರು ಒಂದು ಕೆಜಿ ರಾಗಿಯನ್ನು ತೂಕದಲ್ಲಿ ತೆಗೆದುಕೊಂಡು ಆ ರಾಗಿಯನ್ನ ಮೂರು ದಿನಗಳ ಕಾಲ ಅಂದರೆ 48 ಘಟಕಗಳ ಕಾಲ ರಾಗಿಯನ್ನು ಲೆಕ್ಕಾಚಾರ ಮಾಡಿದ್ದಾರೆ, ಅಲ್ಲದೆ ಲೆಕ್ಕಾ ಹಾಕುವಾಗ ಪ್ರತಿ ಪ್ಯಾಕೆಟ್​ನಲ್ಲಿ 500 ಕಾಳುಗಳನ್ನು ಬೇರ್ಪಡಿಸುತ್ತಿದ್ದರು ಅಲ್ಲದೆ, ಇದರಲ್ಲಿ ಅತಿ ಸಣ್ಣದಾದ ರಾಗಿಕಾಳುಗಳಲ್ಲಿ ಹೆಚ್ಚು ಕಡಿಮೆಯಾಗದಂತೆ ಎಣಿಸುತ್ತಿದ್ದರು.. ಹೇಗೆ ರಾಗಿ ಕಾಳುಗಳನ್ನು ಎಣಿಸಿದ ನಂತರ‌‌.. 685 ಪ್ಯಾಕೆಟ್​ಗಳಲ್ಲಿ 500 ರಾಗಿಕಾಳುಗಳನ್ನು ತುಂಬಿಸಿದ್ದಾರೆ. ಈ ರೀತಿ ಒಂದೊಂದು ಪ್ಯಾಕೆಟ್ ಗಳಲ್ಲಿ ರಾಗಿ ಕಾಳುಗಳನ್ನು ತುಂಬಿಸಿದ ಬಳಿಕ.. ಒಂದೊಂದು ರಾಗಿ ಕಾಳಿನ ಪ್ಯಾಕೆಟ್​ಗಳು 2.10ರಿಂದ 15 ಮಿಲಿ ಗ್ರಾಂ ನಷ್ಟು ತೂಕ ಇರುತ್ತಿದ್ದವು..

ಇದರಿಂದ ಇವರು ಎನಿಸಿರುವ ಒಂದು ಕೆಜಿ ರಾಗಿಯಲ್ಲಿ ಸುಮಾರು 3,42,249 ರಾಗಿ ಕಾಳುಗಳು ಬಂದಿದ್ದು, ಅತಿ ಕಷ್ಟಕರವಾಗಿ ತಮ್ಮ ವಿಭಿನ್ನ ಪ್ರಯತ್ನದಿಂದ ಇವರಿಗೆ ಯಶಸ್ವಿ ಸಿಕ್ಕಿತು.. ಅಲ್ಲದೆ ಇವರು ಮಾಡಿರುವ ಈ ಸಾಧನೆಯ ಹಲವಾರು ಪೋಟೋಗಳಿಂದ ಇವರಿಗೆ ಕರ್ನಾಟಕದಲ್ಲಿ ಬುಕ್ ಆಫ್ ರೆಕಾರ್ಡ್​ಗೆ ಕಳುಹಿಸಿಕೊಟ್ಟಿದ್ದಾರು ಇದರಿಂದ ಇವರಿಗೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಎಂಬ ಪ್ರಶಸ್ತಿ ಕೂಡ ಲಭಿಸಿದೆ.. ಇವರ ಈ ಸಾಧನೆ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..