ನಮಸ್ತೆ ಸ್ನೇಹಿತರೆ, ನಮ್ಮ ಭಾರತ ಸಂಸ್ಕೃತಿಯಲ್ಲಿ ಮದುವೆಗಳನ್ನು ಮಾಡೋದಕ್ಕೆ ಹಳೆಯ ಪದ್ದತಿಯ ರೀತಿಯಲ್ಲಿ ಶಾಸ್ತ್ರ ಸಂಪ್ರದಾಯಗಳನ್ನು ಇಂದಿಗೂ ಕೂಡ ಅನುಸರಿಸುವುದನ್ನ ನಾವು ನೋಡಿದ್ದೇವೆ.. ಇನ್ನು ಈ ಒಂದು ವಿಚಾರ ಕೇಳಿದರೆ ನಿಮಗೆ ಆಶ್ಚರ್ಯ ಅನಿಸಬಹುದು, ಯಾಕೆಂದರೆ ಒಂದೊಂದು ಜಾತಿಯ ವರ್ಗದ ಜನರು ವಿಚಿತ್ರವಾದ ಸಂಪ್ರದಾಯಗಳನ್ನು ಈಗಲೂ ಕೂಡ ಪಾಲಿಸುತ್ತಿದ್ದಾರೆ.. ಆದರೆ ಛತ್ತೀಸ್ ಗಡ ರಾಜ್ಯದಲ್ಲಿ ಜನರು ಈ ಎಲ್ಲಾ ಸಂಪ್ರದಾಯಕ್ಕೂ ಮೀರಿದ ವಿಚಿತ್ರವಾದ ಮತ್ತು ವಿಭಿನ್ನ ಶಾಸ್ತ್ರ ಸಂಪ್ರದಾಯಗಳನ್ನು ಇಂದಿಗೂ ಪಾಲಿಸುತ್ತಿದ್ದಾರೆ. ಅದೇನೆಂದರೆ ಅಲ್ಲಿನ ಜನರು ತಮ್ಮ ಹೆಣ್ಣು ಮಕ್ಕಳು ಅತ್ತೆಯ ಮನೆಗೆ ಹೋಗುವಾಗ ಹಾವುಗಳನ್ನು ಕೊಟ್ಟು ಕಳುಹಿಸುತ್ತಾರೆ..
[widget id=”custom_html-2″]

ಇನ್ನೂ ಛತ್ತೀಸ್ ಗಡದಲ್ಲಿ ಒಂದು ಗೋರಯ್ಯ ಎನ್ನುವ ಒಂದು ಸಂಘ ಸಂಸ್ಥೆ ಇದೇ ಈ ಒಂದು ಗೋರಯ್ಯ ಸಂಸ್ಥೆಗೆ ಸೇರಿದ ಜನರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಅತ್ತೆಯ ಮನೆಗೆ ಕಳುಹಿಸುವಾಗ ಬೆಳ್ಳಿ ಬಂಗಾರ ಬಟ್ಟೆಯ ಜೊತೆಯಲ್ಲಿ 21 ಜೀವಂತ ಹಾವುಗಳನ್ನು ಬುಟ್ಟಿಯಲ್ಲಿ ಇಟ್ಟು ಮಗಳಿಗೆ ನೀಡಿ ಅತ್ತೆಯ ಮನೆಗೆ ಕಳುಹಿಸುತ್ತಾರೆ.. ಈ ರೀತಿ ಹಾವುಗಳನ್ನು ಮದುವೆ ಸಮಯದಲ್ಲಿ ಹುಡುಗೊರೆಯಾಗಿ ನೀಡುವುದು ಅಲ್ಲಿನ ಜನರ ಸಂಪ್ರದಾಯವಂತೆ.. ಆದರೆ ನಿಖರವಾಗಿ ಒಂದಲ್ಲ ಎರಡಲ್ಲಾ ಸುಮಾರು 21 ಹಾವುಗಳನ್ನು ಬುಟ್ಟಿಯಲ್ಲಿ ಇಟ್ಟು ಮದುವೆ ಹೆಣ್ಣಿನ ಅಪ್ಪ ಅಮ್ಮ ತನ್ನ ಮಗಳಿಗೆ ಮದುವೆಯಾ ನಂತರ ಅತ್ತೆ ಮನೆಗೆ ಕೊಟ್ಟು ಕಳುಹಿಸುತ್ತಾರೆ..
[widget id=”custom_html-2″]

ಈ ಒಂದು ಕಮ್ಯುನಿಟಿಗೆ ಸೇರಿದ ಜನರು ಈ ಸಂಪ್ರದಾಯವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು.. ಒಂದು ವೇಳೆ ಹಾವುಗಳನ್ನು ಕೊಡದೇ ಮದುವೆ ಮಾಡಿದ್ದರೆ ಅಂತಹ ಮದುವೆಗಳು ಶಾಶ್ವತವಾಗಿ ಇರುವುದಿಲ್ಲ.. ಗಂಡ ಹೆಂಡತಿ ಬೇಗನೆ ದೂರವಾಗುತ್ತಾರೆ ಎಂಬ ನಂಬಿಕೆ ಈ ಬುಡಕಟ್ಟಿನ ಗೋರಯ್ಯ ಜನರಲ್ಲಿ ನಂಬಿದ್ದಾರೆ.. ಈ ಒಂದು ಮದುವೆ ಸಾಯುವವರೆಗೂ ಗಟ್ಟಿಯಾಗಿ ಇರಬೇಕು ಎಂದರೆ ಮದುವೆ ಹೆಣ್ಣಿನ ಜೊತೆಗೆ 21 ಹಾವುಗಳನ್ನು ಹುಡುಗೊರೆಯಾಗಿ ಕೊಟ್ಟು ಕಳುಹಿಸಬೇಕು.. ಇನ್ನೂ 21 ಹಾವುಗಳನ್ನು ತೆಗೆದುಕೊಂಡು ಒಬ್ಬ ಹೆಣ್ಣು ಮಕ್ಕಳು ಅತ್ತೆಯ ಮನೆಗೆ ಹೋದರೆ ಅವಳು ತನ್ನ ಅತ್ತೆಯ ಮನೆಯಲ್ಲಿ ಸಾಯುವ ವರೆಗೂ ಖುಷಿಯಿಂದ ಜೀವನ ಮಾಡುತ್ತಾಳೆ ಎಂಬುದು ಈ ಜನರ ನಂಬಿಕಯಾಗಿದೆ..

ಈ ರೀತಿಯ ವಿ’ಚಿತ್ರವಾದ ಸಂಪ್ರದಾಯ ಆಚರಣೆ ನಮ್ಮ ಪ್ರಪಂಚದಲ್ಲಿ ಎಲ್ಲಿಯೂ ಕೂಡಲೇ ಇಲ್ಲ.. ಆದರೆ ಛತ್ತೀಸ್ ಗಡದಲ್ಲಿ ಅಲ್ಲಲ್ಲಿ ಬುಡಕಟ್ಟು ಜನರು ವಾಸಿಸುವ ಪ್ರದೇಶದಲ್ಲಿ ಈಗಲೂ ಕೂಡ ಈ ಸಂಪ್ರದಾಯವನ್ನು ಪಾಲಿಸದೆ ಯಾರು ಕೂಡ ಮದುವೆ ಮಾಡಿ ಅತ್ತೆಯ ಮನೆಗೆ ಕಳುಹಿಸುವುದಿಲ್ಲ.. ಸ್ನೇಹಿತರೆ ಈ ರೀತಿಯ ಸಂಪ್ರದಾಯವನ್ನ ಎಲ್ಲಿಯಾದರೂ ನೋಡಿದ್ದೀರಾ ನಿಮ್ಮ ಅನಿಸಿಕೆಯನ್ನು ತಿಳಿಸಿ..