Advertisements

ಚಿರುಮೇಘನ ರಾಜ್ ಮಗನ ಅದ್ದೂರಿ ನಾಮಕರಣ ಸಂಭ್ರಮ ಹೇಗಿತ್ತು! ಹಾಗು ಈ ನಾಮಕರಣಕ್ಕೆ ಯಾರೆಲ್ಲ ಬಂದಿದ್ದರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಹಲವು ತಿಂಗಳುಗಳಿಂದ ಮೇಘನ ರಾಜ್ ಮತ್ತು ದಿ’ವಂಗತ ಚಿರಂಜೀವಿ ಸರ್ಜಾ ಅಭಿಮಾನಿಗಳಲ್ಲಿ ಜೂನಿಯರ್ ಚಿರುವಿನ ನಾಮಕರಣ ಯಾವಾಗ ಎಂದು ಮೂಡಿದ ಪ್ರಶ್ನೆಗೆ ಈಗ‌ ಉತ್ತರ‌ ಸಿಕ್ಕದೆ.. ಕೊನೆಗೂ ಜೂನಿಯರ್ ಚಿರುವಿಗೆ ನಾಮಕರಣ ಶಾಸ್ತ್ರವನ್ನ ಬಹಳ ಸಂಭ್ರಮದಿಂದ ಮಾಡಿ ಕೊನೆಗೂ ತನ್ನ‌ ಪ್ರೀತಿಯ ಮಗನಿಗೆ ಬಹಳ ಸುಂದರವಾದ‌ ಹೆಸರನ್ನ ಇಟ್ಟಿದ್ದಾರೆ. ಹಾಗಾದರೆ ಮೇಘನ ರಾಜ್ ಚಿರುಸರ್ಜಾ ಮಗನ ನಾಮಕರಣ ಶಾಸ್ತ್ರ ಹೇಗಿತ್ತು ಈ‌ ಒಂದು ನಾಮಕರಣ ಶಾಸ್ತ್ರಕ್ಕೆ ಯಾರೆಲ್ಲ ಭಾಗವಹಿಸಿದ್ದರು. ಮಗುವಿಗೆ ಇಟ್ಟಿರುವ ಹೆಸರನ್ನು ಅಂತ ನೋಡೋಣ ಬನ್ನಿ.. ಇಂದು‌ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಆಯೋಜನೆ ಮಾಡಿದ ನಾಮಕರಣ ಕಾರ್ಯಕ್ರಮದಲ್ಲಿ

Advertisements
Advertisements

ಮೇಘನ ರಾಜ್ ತಂದೆ ಸುಂದರ್ ರಾಜ್ ತಾಯಿ ಪ್ರಮೀಳಾ ಜೋಷಾಯ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಂಪತಿಗಳು ದಿವಂಗತ ಚಿರಂಜೀವಿ ಸರ್ಜಾ ಅವರ‌ ಸಹೋದರ ಸಹೋದರಿಯರು ಸೇರಿದಂತೆ ಸುಮಾರು 50‌ಕ್ಕೂ ಹೆಚ್ಚು ಬಂಧು ಮಿತ್ರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.. ಹಿಂದು ಸಂಪ್ರದಾಯ ಪ್ರಕಾರ ಜೂನಿಯರ್ ಚಿರುವಿನ ನಾಮಕರಣ ನಡೆದಿದ್ದು ಕುಟುಂಬದವರು ಸೇರಿ ಜೂನಿಯರ್ ಚಿರುವಿಗೆ ‘ರಾಯನ್ ರಾಜ್ ಸರ್ಜಾ’ ಅಂತ ಹೆಸರಿಟ್ಟಿದ್ದಾರೆ ಇನ್ನೂ ಜೂನಿಯರ್ ಚಿರುವಿನ ನಾಮಕರಣದ ಸುಂದರ ಕ್ಷಣಗಳು ಹೇಗಿತ್ತು ಅಂತ ಈ ಪೋಟೋದಲ್ಲಿ ನೋಡಬಹುದು.. ತಾತ ಸುಂದರ್ ರಾಜ್ ಅವರನ್ನ‌ ಬಹಳ ಇಷ್ಟಪಡುತ್ತಿದ್ದ ಜೂನಿಯರ್ ಚಿರು

ನಾಮಕರಣ ಸಮರದಲ್ಲಿ ಬಹಳ ಸಮಯ‌ ತಾತನ ಜೊತೆಗೆ ಕಳೆದಿದ್ದಾನೆ. ನಂತರ ಪುರೋಹಿತರು ವೇದಿಕೆ ಮೇಲೆ ಮೇಘನ ರಾಜ್ ಜೂನಿಯರ್ ಚಿರು ಹಾಗು ಸರ್ಜಾ ಅವರ ತಂದೆ ತಾಯಿ ಕರೆದಿದ್ದರು.‌ ನಂತರ ಹಿಂದು ಸಂಪ್ರದಾಯ ಪ್ರಕಾರ ಕಾರ್ಯಗಳನ್ನ ಮಾಡಿಸಿ ಮಗನ ಕೈಯಲ್ಲಿ ಅಕ್ಷರ ಬೆರೆಸಿ ಜೂನಿಯರ್ ಚಿರುವಿಗೆ ರಾಯನ್ ರಾಜ್ ಸರ್ಜಾ ಅಂತ ಹೆಸರಿಟ್ಟು ನಾಮಕರಣ ಮಾಡಿದ್ದಾರೆ.. ಈ‌ ಹೆಸರನ್ನ ಕೇಳಿ ಚಿರು ಸರ್ಜಾ ಹಾಗು ಮೇಘನ ರಾಜ್ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದು ಮಗುವಿಗೆ ಹೆಸರು ಬಹಳ ಹೊಸದಾಗಿದೆ ಅಂತ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ತಮ್ಮ‌ ಅನಿಸಿಕೆಯನ್ನ‌ ತಿಳಿಸಿದ್ದಾರೆ..