Advertisements

ತಿರುಪತಿ ಪೊಲೀಸ್ ಟ್ರೈನಿಂಗ್ ಸೆಂಟರ್ನಲ್ಲಿ ಮಗಳಿಗೆ ಸೆಲ್ಯೂಟ್ ಮಾಡಿದ ಸರ್ಕಲ್ ಇನ್ಸ್ಪೆಕ್ಟರ್!

Kannada Mahiti

ನಮಸ್ತೆ ಸ್ನೇಹಿತರೆ, ಮಗಳಿಗೆ ಸೆಲ್ಯೂಟ್ ಮಾಡಿದ ಸರ್ಕಲ್ ಇನ್ಸ್ ಪೆಕ್ಟರ್, ಹೌದು ತಿರುಪತಿಯ ಪೋಲಿಸ್ ಟ್ರೈನಿಂಗ್ ಸೆಂಟರ್ ನಲ್ಲಿ ತನ್ನ ಮಗಳ ಯಶಸ್ಸು ನೋಡಿ ಭಾವನಾತ್ಮಕವಾಗಿ ಮಗಳಿಗೆ ಸಂತೋಷದಿಂದ ಟ್ರೈನಿಂಗ್ ಸೆಂಟರ್ ನಲ್ಲಿ ಸೆಲ್ಯೂಟ್ ಮಾಡಿದ ತಂದೆ, ಆಂದ್ರಪ್ರದೇಶದ ಪೋಲಿಸ್ ಡ್ಯೂಟಿಯ ಪೂರ್ವ ಸಿದ್ದತೆಗಾಗಿ ತಿರುಪತಿಯ ಪೋಲಿಸ್ ಟ್ರೈನಿಂಗ್ ಸೆಂಟರ್ ನಲ್ಲಿ ಗುಂಟೂರು ನಗರದ ಡಿವೈಎಸ್ಪಿ ಜೆಸ್ಸಿ ಪ್ರಶಾಂತ್, ದಿಶಾ ಕಾಯಿದೆ ಅಡಿಯ ಕರ್ತವ್ಯ ಪಾಲನೆಯ ಪರಿವೀಕ್ಷಣೆ ನಡೆಯುತ್ತಿತ್ತು, ಅದೆ ಸಮಯದಲ್ಲಿ ಡ್ಯೂಟಿಯಲ್ಲಿದ ತಂದೆ ಶಾಂಸುಂದರ್ ರವರು ಎದುರಾದರು,

Advertisements
Advertisements

ಇನ್ನು ತನ್ನ ತಂದೆಗಿಂತ ಉನ್ನತ ಹುದ್ದೆಯಲ್ಲಿದ್ದು ರಾಂಕ್ ಅಫೀಸರ್ ಎಂದು ಕರೆಯುತ್ತಿದ್ದ ತನ್ನ ಮಗಳ ಧೈರ್ಯ ಸಾಹಸ ಹಾಗು ಕರ್ತವ್ಯದಲ್ಲಿ ಮಗಳ ಪ್ರಾಮಾಣಿಕತೆಯನ್ನು ನೋಡಿದ ತಂದೆಗೆ ತುಂಬಾ ಸಂತೋಷ ಹಾಗು ಹೆಮ್ಮೆಯೆನಿಸಿತು, ಮರುಕ್ಷಣ ಸರ್ಕಲ್ ಇನ್ಸ್ ಪೆಕ್ಟರ್ ಶಾಂ ಸುಂದರ್ ರವರು ಸಂತಸದಿಂದ ಮಗಳಿಗೆ ಸೆಲ್ಯೂಟ್ ಮಾಡಿದರು, ಪೋಲಿಸ್ ಹುದ್ದೆಯಲ್ಲಿ ಡಿವೈಎಸ್ಪಿ ಹಾಗಿ ಕಾರ್ಯ ನಿರ್ವಹಿಸುತ್ತಿರುವ ಜೆಸ್ಸಿ ಪ್ರಶಾಂತಿ ಕೂಡ ತನ್ನ ತಂದೆಗೆ ಮರುಸೆಲ್ಯೂಟ್ ಮಾಡಿದರು, ಅಲ್ಲದೆ ತನ್ನ ಮಗಳು ಪೋಲಿಸ್ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಳೆ ಎಂಬ ದೃಢ ವಿಶ್ವಾಸ ನನಗಿದೆ ಎಂದು ಶಾಂ ಸುಂದರ್ ಹೇಳಿದ್ದಾರೆ,

ಇನ್ನು ಇದನ್ನೆಲ್ಲಾ ನೋಡುತ್ತಿದ್ದ ಅಲ್ಲಿನ ಪೊಲೀಸ್ ಸಿಬ್ಬಂದಿ ವರ್ಗದವರು ಕೂಡ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ, ಅಲ್ಲದೆ ತಿರುಪತಿಯ ಟ್ರೈನಿಂಗ್ ಸೆಂಟರ್ ನಲ್ಲಿ ತಂದೆ ಮತ್ತು ಮಗಳನ್ನು ಕಂಡ ಎಸ್ಪಿ ರಮೇಶ್ ರೆಡ್ಡಿರವರು ಕೂಡ ತುಂಬಾ ಸಂತೋಷದಿಂದ ಪ್ರಶಂಸೆಯನ್ನು ಮಾಡಿದ್ದಾರೆ, ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ..