Advertisements

ಕೋರ್ಟ್‌ನಲ್ಲಿ ನ್ಯಾಯ ದೇವತೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿರೋದ್ಯಾಕೆ ಗೊತ್ತಾ.? ನೀವೇ ನೋಡಿ.

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ದೊಡ್ಡ ದೊಡ್ಡ ಸಮಸ್ಯೆ ಬಂದಾಗ ಕೋರ್ಟ್ ಗೆ ಹೋಗಿ ಸಮಸ್ಯೆಯನ್ನ ಬಗೆ ಹರಿಸಿಕೊಳ್ಳುತ್ತಾರೆ, ಆದರೆ ಕೋರ್ಟ್ ಗೆ ಹೋದಾಗ ನ್ಯಾಯಾಧೀಶರ ಮುಂದೆ ಇರುವ ನ್ಯಾಯ ದೇವತೆಯನ್ನು ಹೆಚ್ಚಾಗಿ ಯಾರು ಸಹ ಗಮನಿಸುವುದಿಲ್ಲ, ಯಾಕೆಂದರೆ ಕೋರ್ಟಿನಲ್ಲಿ ನ್ಯಾಯದೇವತೆ ಕಣ್ಣಿಗೆ ಬಟ್ಟೆ ಕಟ್ಟಿರುವುದನ್ನ ಸಿನಿಮಾಗಳಲ್ಲಿ ಅಥವಾ ಕೆಲವು ಬಾರಿ ಕೋರ್ಟಿನಲ್ಲಿ ನೋಡಿರುತ್ತೇವೆ.. ಆದರೆ ಯಾರಿಗೂ ಗೊತ್ತಿರೋದಿಲ್ಲ, ಯಾಕೆ ಕೋರ್ಟ್ ನಲ್ಲಿ ನ್ಯಾಯ ದೇವತೆ ಕಣ್ಣಿಗೆ ಕಪ್ಪು ಬಟ್ಟೆಯನ್ನ ಕಟ್ಟಿರುತ್ತಾರೆ ಎಂದು, ಇನ್ನೂ ನ್ಯಾಯ ದೇವತೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿರೋದು ಯಾಕೆ ಗೊತ್ತಾ? ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಸ್ನೇಹಿತರೆ ಈ ನ್ಯಾಯ ದೇವತೆ ಪ್ರತಿಮೆಯ ಮೂಲ ಯಾವುದೇ ಎಂದು ಹುಡುಕುತ್ತಾ ಹೋದರೆ. ಆಗ ನಮಗೆ ಸಿಗುವ ಉತ್ತರ ಇದು ಗ್ರೀಕ್ ಸಾಮ್ರಾಜ್ಯದ ತೇಮಿಸ್ ನ ಮೂರ್ತಿಯಾಗಿದೆ.. ಗ್ರೀಕ್ ಸಾಮ್ರಾಜ್ಯದಲ್ಲಿ ಈಕೆಯನ್ನು ಸತ್ಯ ಮತ್ತು ನ್ಯಾಯದ ಪ್ರತೀಕ ಎಂದು‌ ನಂಬಿದ್ದರು.. ಇನ್ನೂ ವರ್ಷಗಳು ಕಳೆದಂತೆ ಗ್ರೀಕ್ ಸಾಮ್ರಾಜ್ಯದಲ್ಲಿ ಇದ್ದ ಈ ತೇಮಿಸ್ ನ ಮೂರ್ತಿ‌ ಇಡೀ ಪ್ರಪಂಚದಾದ್ಯಂತ ನ್ಯಾಯದ‌ ಮೂರ್ತಿ ಯಾವುದು ಅಂದ್ರೆ ಅದು‌ ತೇಮಿಸ್ ಮೂರ್ತಿ ಅನ್ನುವ ಮಟ್ಟಕ್ಕೆ ಪ್ರಸಿದ್ಧಿ ಪಡೆದಿತ್ತು.. ‌ಆದರೆ ಗ್ರೀಕ್ ನ ತೇಮಿಸ್ ಮೂರ್ತಿಯಲ್ಲಿ ಅಂದರೆ ನ್ಯಾಯ ದೇವತೆ ಕಣ್ಣಿಗೆ ಬಟ್ಟೆಯನ್ನು ಕಟ್ಟಿರೋದಿಲ್ಲ, ಆದರೆ ನ್ಯಾಯ ದೇವತೆ ಕೈಯಲ್ಲಿ ಒಂದು‌ ಖಡ್ಗ ಮತ್ತು ತಕ್ಕಡಿ ಮಾತ್ರ ಇತ್ತು..

[widget id=”custom_html-2″]

ಸುಮಾರು‌ 16ನೇ ಶತಮಾನದಲ್ಲಿ ನ್ಯಾಯ ದೇವತೆಯ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಿರುವ ಮೂರ್ತಿಗಳು ಅಸ್ತಿತ್ವಕ್ಕೆ ಬಂದವು..ಆದರೆ ನ್ಯಾಯ ದೇವತೆ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಿರುವುದು ಯಾಕೆ ಎನ್ನುವ ಪ್ರಶ್ನೆ ನಿಮಗೆ ಬಂದಿರಬಹುದು.. ಯಾಕೆಂದರೆ ನ್ಯಾಯದೇವತೆ‌ ಕಣ್ಣಿಗೆ ಕಪ್ಪು ಬಟ್ಟೆಯಿಂದ ಕೊಟ್ಟಿರುವುದು ಏನನ್ನೂ ಸೂಚಿಸುತ್ತದೆ ಅಂದ್ರೆ, ಒಂದು ಪ್ರಕರಣದಲ್ಲಿ ಒಬ್ಬರಿಗೆ ನ್ಯಾಯವನ್ನು ಕೊಡಬೇಕು ಅಂದರೆ ತನ್ನ ಎದುರು ಕಡೆ ಇರುವ ವ್ಯಕ್ತಿ ಬಡವ, ಶ್ರೀಮಂತ, ಒಬ್ಬ ಪ್ರತಿಷ್ಠಿತ ವ್ಯಕ್ತಿಯೊ, ಅಥವಾ ಸಾಮಾನ್ಯ ಮನುಷ್ಯನೊ ಅವನ್ನ ಜಾತಿ, ಧರ್ಮ ಸ್ಥಾನಮಾನ ಯಾವುದನ್ನು ಈ ನ್ಯಾಯ ದೇವತೆ ನೋಡುವುದಿಲ್ಲ,

ಆ ವ್ಯಕ್ತಿಯ ಪ್ರಕರಣದಲ್ಲಿ ಸಿಕ್ಕಿರುವ ಸಾಕ್ಷಿಗಳು ಮತ್ತು ಸತ್ಯ ಸತ್ಯತೆಯನ್ನು ನೋಡಿ ಮಾತ್ರವೇ ಕೋರ್ಟ್ ವ್ಯಕ್ತಿಗೆ ನ್ಯಾಯವನ್ನ ಕೊಡುತ್ತದೆ ಎಂದು ಆ ಮೂರ್ತಿ ಸೂಚಿಸುತ್ತದೆ.. ಆದರೆ ನಾನು ಇದನ್ನೆಲ್ಲಾ ನೋಡದೆ ಸತ್ಯ ಯಾರ ಕಡೆ ಇರುತ್ತದೆಯೊ ಅವರ ಕಡೆ ನ್ಯಾಯ ನೀಡುತ್ತದೆ ಎಂದು ಈ ನ್ಯಾಯ ದೇವತೆ ಮೂರ್ತಿ ಸೂಚಿಸುತ್ತದೆ.. ನೋಡಿದ್ರಲ್ಲ ಯಾಕೆ ಕೋರ್ಟಿನಲ್ಲಿ ನ್ಯಾಯ ದೇವತೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿರುತ್ತಾರೆ ಎಂದು..‌ ಸ್ನೇಹಿತರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ..