ನಮಸ್ತೆ ಸ್ನೇಹಿತರೆ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಗೋವಿಂದೇ ಗೌಡ ಅವರು ಎಲ್ಲರಿಗೂ ತಿಳಿದೇ ಇದೆ.. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿದ್ದ ನಟ ಗೋವಿಂದೇ ಗೌಡ ಅವರಿಗೆ ಅ’ಪಘಾ’ತವಾಗಿದ್ದು ಸದ್ಯ ಇವರನ್ನ BGS ಆಸ್ಪತ್ರೆಯಲ್ಲಿ ದಾ’ಖಲು ಮಾಡಲಾಗಿದೆ.. ಕೆಜಿಎಫ್ ಸಿನಿಮಾದಲ್ಲಿಯೂ ಅಭಿನಯಿಸಿ ಹೆಸರು ಮಾಡಿದ ಗೋವಿಂದೇ ಗೌಡ ಅವರ ಪರಿಸ್ಥಿತಿ ಈಗ ಹೇಗಿದೆ.. ಇನ್ನೂ ಈ ವಿಚಾರ ತಿಳಿದ ಜಗ್ಗೇಶ್ ಯೋಗರಾಜ್ ಭಟ್ಟರು ಹಾಗೂ ಜೀ ಕನ್ನಡ ಸಿಬ್ಬಂಧಿ ಬೆಚ್ಚಿಬಿದ್ದು ಆಸ್ಪತ್ರೆಗೆ ಓಡಿ ಬಂದಿದ್ದಾರೆ.. ಹೌದು ಅದ್ಯಾಕೋ ಕಳೆದ ವರ್ಷದಿಂದ ಕಲಾವಿದರಿಗೆ ಅದೃಷ್ಟವೇ ಸರಿ ಇಲ್ಲದಂತೆ ಕಾಣುತ್ತಿದೆ..

ಹೌದು ಕಾಮಿಡಿ ಕಿಲಾಡಿಗಳು ಶೋನಲ್ಲಿ ಜಿಜಿ ಎಂದೆ ಪ್ರಸಿದ್ದಿ ಪಡೆದಿದ್ದ ಗೋವಿಂದೇ ಗೌಡ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ್ರು. ಗೋವಿಂದೇ ಗೌಡ ಅವರಿಗೆ ನೆನ್ನೆ ಸಂಜೆ ಅ’ಪಘಾ’ತವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಈ ವಿಷಯದ ಬಗ್ಗೆ ಟ್ವೀಟ್ ಮಾಡಿದ ನಟ ಜಗ್ಗೇಶ್ ಅವರು ‘ಕಾಮಿಡಿ ಕಿಲಾಡಿ ರಿಯಾಲಿಟಿ ಶೋನ ನಟ ಜಿಜಿ ಗೋವಿಂದೇಗೌಡ ಅವರಿಗೆ ಚಿತ್ರೀಕರಣ ಸಮಯದಲ್ಲಿ ಅ’ಪಘಾ’ತವಾಗಿ BGS ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಗೋವಿಂದಗೌಡ ಅವರಿಗೆ ಏನು ಆಗದಂತೆ ನೀವು ಪ್ರಾರ್ಥನೆ ಮಾಡಿ ನಾನು ಗಣಪತಿಗೆ ಪ್ರಾರ್ಥಿಸಿ ಆಸ್ಪತ್ರೆಗೆ ಹೋರಟೆ ಅಂತ ಹೇಳಿದ್ದಾರೆ’

ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡ ಗೋವಿಂದೇಗೌಡ ಅವರು ಕೆಜಿಎಫ್ ಸಿನಿಮಾ ಸೇರಿದಂತೆ ಕನ್ನಡ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಇತ್ತೀಚಿಗೆಷ್ಟೇ ರಾಷ್ಟ್ರ ಪ್ರಶಸ್ತಿ ವಿಜೇತ ಬಾಜನವಾದ ಅಕ್ಷಿ ಸಿನಿಮಾದಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು.. ಇನ್ನೂ ಗೋವಿಂದೇ ಗೌಡ ಅವರು ಕಲಾವಿದನಾಗಿ ನಿರ್ದೇಶಕನಾಗಿ ಗುರುತಿಸಿಕೊಳ್ಳಬೇಕೆಂದು ಊರು ಬಿಟ್ಟು ಬೆಂಗಳೂರಿಗೆ ಬಂದಾಗ ಜಗ್ಗೇಶ್ ಅವರೇ ತಮ್ಮ ಮನೆಯಲ್ಲಿ ಉಳಿದು ಕೊಳ್ಳಲು ಅವಕಾಶ ನೀಡಿ ಸಹಾಯ ಮಾಡಿದ್ದರು. ನಂತರ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಗೋವಿಂದೇ ಗೌಡ ನಂತರ ಅನೇಕ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಪಡೆದರು..

ಕೆಜಿಎಫ್ ಸಿನಿಮಾದಲ್ಲಿ ಅವರ ಅದ್ಭುತ ನಟನೆ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಇನ್ನೂ ಕೆಜಿಎಫ್ ಭಾಗ ಎರಡು ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಜೊತೆಗೆ ಕಳೆದ ಎರಡು ವರ್ಷದ ಹಿಂದೆ ಕಾಮಿಡಿ ಕಿಲಾಡಿಗಳು ಶೋನ ದಿವ್ಯಾ ಅವರನ್ನು ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದರು.. ಆದರೆ ಇಂತಹ ಸಮಯದಲ್ಲಿ ಜಿಜಿ ಗೆ ಈ ರೀತಿಯಾಗಿದ್ದು ದಿವ್ಯಾ ಹಾಗೂ ಕುಟುಂಬದಲ್ಲಿ ಆತಂಕವನ್ನುಂಟು ಮಾಡಿದೆ.. ಆದಷ್ಟು ಬೇಗ ಗೋವಿಂದೇ ಗೌಡ ಗುಣಮುಖರಾಗಿ ಮರಳುವಂತಾಗಲಿ ಎಂದು ಹಾರೈಸೋಣ..