Advertisements

ಕನ್ನಡದ ಖ್ಯಾತ ನಟಿ ಡೈಸಿ ಬೋಪಣ್ಣ ಅವರು ಈಗ ಹೇಗಿದ್ದಾರೆ.! ಸಿನಿಮಾ ಬಿಟ್ಟು ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಡೈಸಿ ಬೋಪಣ್ಣ ಕನ್ನಡ ಚಿತ್ರರಂಗ ಹಾಗೂ ಬಾಲಿವುಡ್ ಚಿತ್ರರಂಗ ಕಂಡ ಹೆಸರಾಂತ ನಟಿ ಹಾಗು ಗ್ಲಾಮರಸ್ ನಟಿಯರಲ್ಲಿ ಇವರು ಕೂಡ ಒಬ್ಬರು 1982ರಲ್ಲಿ ಕೊಡಗಿನಲ್ಲಿ ಹುಟ್ಟಿದ ಈ ನಟಿ ಪ್ರಾರಂಭದಿಂದಲೂ ಚಿತ್ರ ಕಲೆಯ ಬಗ್ಗೆ ಹೆಚ್ಚು ಆಸಕ್ತಿ ಬಂದಿದ್ದರಿಂದ ಬೆಂಗಳೂರಿನಲ್ಲಿ ಚಿತ್ರ ಕಲಾ ಪರಿಷತ್ತಿನಲ್ಲಿ ಬ್ಯಾಚುಲರ್ ಆಫ್ ಪೈನ್ ಆಡ್ಸ್ ಡಿಗ್ರಿ ಕೂಡ ಪಡೆದಿದ್ದರು.. ‌ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ಮೊದಲಿಗೆ ನಟ‌ ದರ್ಶನ್ ನಟಿಸಿದ ಭಗವಾನ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.. ಅನಂತರ ರಾಮಾ ಶಾಮಾ ಭಾಮಾ, ಚಾಕ್ ಪಾರ್ಟ್‌, ಗಾಳಿಪಟ ಈಗೆ ಕನ್ನಡದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಬಹು ಬೇಡಿಕೆಯ ನಟಿಯಾಗಿ ಬೆಳೆದರು.. ಆದರೆ ಯಾರಿಗೂ ತಿಳಿಯದ ಹಾಗೆ ಸಿನಿಮಾ ರಂಗದಿಂದ ದೂರ ಉಳಿದ ಡೈಸಿ ಬೋಪಣ್ಣ ಈಗ‌ ಎಲ್ಲಿದ್ದಾರೆ‌ ಅವರು ಮಾಡುತ್ತಿರುವ ಕೆಲಸವಾದ್ರೂ ಏನು ಗೊತ್ತಾ? ನೋಡೋಣ ಬನ್ನಿ..

Advertisements
Advertisements

ಹೌದು ಡೈಸಿ ಬೋಪಣ್ಣ ಅವರು 2011 ದೊಡ್ಡ ಬಿಸಿನೆಸ್ ಮ್ಯಾನ್ ಆಗಿರುವ ಪ್ರಕಾಶ್ ಜಾಜುರವರ ಪುತ್ರ ಅಮಿತ್ ಜಾಜುರವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇವರು ತಮ್ಮ ಗಂಡನ ಜೊತೆಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಆದರೆ ಆಗಲೇ ಚಿತ್ರ ರಂಗದಿಂದ ದೂರ ಉಳಿದ ಈ ನಟಿ ಮದುವೆ ಆದ ಮೇಲೆ ಬೇರೆ ರೀತಿಯ ಕೆಲಸದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡರು ಬಿಡುವಿನ ಸಮಯದಲ್ಲಿ ಮನೆಯಲ್ಲೇ ಇದ್ದುಕೊಂಡು ಅದ್ಭುತವಾಗಿ ಪೇಂಟಿಂಗ್ ಮಾಡುವ ಈ ನಟಿ ಬೇರೊಂದು ಕೆಲಸವನ್ನ ಶುರು ಮಾಡಿದ್ದಾರೆ ಹೌದು ಸ್ನೇಹಿತರೆ ನಟಿ‌ ಡೈಸಿ ಬೋಪಣ್ಣ ಅವರು ಫೋಟೋಗ್ರಫಿ ಆಗಿ ಸಕ್ಕತ್ ಫೇಮಸ್ ಆಗಿದ್ದಾರೆ..

ಮೊದಲು ಇವರು ಫ್ಯಾಮಿಲಿ ಪೋಟೋ ಶೂಟ್ ಮಾಡುತ್ತಿದ್ದ ಈ ನಟಿ ಈಗ ಮುಂಬೈನಲ್ಲಿ ಟಾಪ್‌ ಮೋಸ್ಟ್ ಮಾಡಲ್ ಫೋಟೋಗ್ರಾಫರ್ ಆಗಿ ದೊಡ್ಡ ಹೆಸರನ್ನ ಮಾಡಿದ್ದಾರೆ ತಾವೇ ಮೇಕಪ್ ಹಾಗು ಹೇರ್ ಸ್ಟೈಲ್ ಮಾಡಿ‌‌ ಪೋಟೋ ಶೂಟ್ ಮಾಡುತ್ತಿರುವ ಡೈಸಿ ಬೋಪಣ್ಣ ಅವರು ಮುಂಬೈನಲ್ಲಿ ಫೋಟೋಗ್ರಾಫರ್ ಆಗಿ ಬಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.. ನಾನು ಪ್ರಸಿದ್ಧ ನಟಿ ಈಗಾಗಿ ಸಿನಿಮಾ ಮಾಡಬೇಕು ಎನ್ನುವ ಆಲೋಚನೆ ಪಕ್ಕಕ್ಕೆ ಇಟ್ಟು ಈಗ‌ ಚಿತ್ರರಂಗ ಹೊರತಾಗಿ ಬೇರೆ ರಂಗದಲ್ಲಿ ಒಳ್ಳೆಯ ಹೆಸರು ಮಾಡುತ್ತಿರುವ ಕನ್ನಡದ ಖ್ಯಾತ ನಟಿ ಡೈಸಿ ಬೋಪಣ್ಣ ಅವರ ಆಲೋಚನೆ ಅವರ ಧೈರ್ಯ ಹಾಗು ಅವರ ಪರಿಶ್ರಮವನ್ನ ಮೆಚ್ಚಲೇಬೇಕು.. ಸ್ನೇಹಿತರೆ ನೀವು ಕೂಡ ನಟಿ ಡೈಸಿ ಬೋಪಣ್ಣ ಅವರ ಅಪ್ಪಟ ಅಭಿಮಾನಿ ಆಗಿದ್ದರೆ ಇವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..