ನಮಸ್ತೆ ಸ್ನೇಹಿತರೆ, ರಾಬರ್ಟ್ ಸಿನಿಮಾ ಭರ್ಜರಿಯಾಗಿ ಯಶಸ್ಸನ್ನ ಕಂಡಿದ್ದೆ, ಅಲ್ಲದೆ ಇದೇ ಖುಷಿಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಯರ ದರ್ಶನ ಪಡೆದಿದ್ದಾರೆ.. ಇನ್ನೂ ರಾಯರ ಮಠದಲ್ಲಿ ನಡೆದ ಗುರು ರಾಯರ ಉತ್ಸವ ಸಮಾರಂಭದಲ್ಲಿ ದರ್ಶನ್ ಭಾಗಿಯಾಗಿದ್ದರು.. ಅಲ್ಲದೆ ರಾಯರ ಮಠದಲ್ಲಿ ಗುರುಗಳ ಆಶೀರ್ವಾದವನ್ನ ಪಡೆದಿದ್ದಾರೆ ನಟ ದರ್ಶನ್ ಅವರು.. ಇನ್ನೂ ಶ್ರೀ ಗುರು ರಾಯರ ಬೃಂದಾವನದ ದರ್ಶನ ಪಡೆಯುವುದು ದೊಡ್ಡ ಪುಣ್ಯ ಎಂದು ದರ್ಶನ್ ಹೇಳಿದ್ದಾರೆ, ಇದರ ಮಧ್ಯೆ ರಾಬರ್ಟ್ ಸಿನಿಮಾ ಯಶಸ್ಸನ್ನು ಕಾಣುತ್ತಿದೆ. ರಾಬರ್ಟ್ ಸಿನಿಮಾ ಯಶಸ್ಸಿಗೆ ಕಾರಣರದ ಎಲ್ಲರಿಗೂ ಧನ್ಯವಾದಗಳನ್ನ ತಿಳಿಸಿದ್ದಾರೆ. ಈ ರೀತಿ ಹೇಳಿ ಗುರು ರಾಯರ ಸನ್ನಿಧಿಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ನಟ ದರ್ಶನ್ ಅವರು..
[widget id=”custom_html-2″]

ಇನ್ನೂ ದರ್ಶನ್ ಅವರು ಆಪ್ತ ಸ್ನೇಹಿತರ ಜೊತೆಗೆ ಮಂತ್ರಾಲಯಕ್ಕೆ ಭೇಟಿ ನೀಡಿದರು.. ನಂತರ ಅಲ್ಲಿರುವ ಗೋ ಶಾಲೆಗೆ ಕೂಡ ಭೇಟಿ ನೀಡಿ ಹಸುಗಳ ಯೋಗಕ್ಷೇಮವನ್ನ ವಿಚಾರಣೆ ಮಾಡಿದ್ದಾರೆ.. ಇನ್ನೂ ದರ್ಶನ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿರುವ ಪೋಟೋಗಳು ಇಲ್ಲಿ ನೋಡಬಹುದು.. ಸ್ವಾಮೀಜಿಗಳ ಆಶೀರ್ವಾದ ಪಡೆದು ಅವರ ಕಾಲಡಿಯಲ್ಲಿ ಕುಳಿತು ಅವರ ಯೋಗಕ್ಷೇಮವನ್ನು ಕೂಡ ವಿಚಾರಿಸಿದ್ದಾರೆ. ಎಂತಹ ದೊಡ್ಡ ಗುಣ ಅಲ್ವಾ ದರ್ಶನ್ ಅವರದ್ದು.. ಇನ್ನೂ ಮಂತ್ರಾಲಯಕ್ಕೆ ಬಂದಿದ್ದ ಅಭಿಮಾನಿಗಳ ಜೊತೆಗೆ ಪೋಟೋವನ್ನು ತೆಗೆಸಿಕೊಂಡಿದ್ದಾರೆ.. ಅಲ್ಲದೆ ದೇವಸ್ಥಾನ ಬಳಿ ಕೆಲಸ ಮಾಡುವ ಕಾರ್ಮಿಕ ಬಳಿ ಕೂಡ ಪೋಟೋವನ್ನು ತೆಗೆಸಿಕೊಂಡಿದ್ದಾರೆ..
[widget id=”custom_html-2″]

ಇನ್ನೂ ರಾಬರ್ಟ್ ಸಿನಿಮಾ ಬಿಡುಗಡೆಯಾಗಿ ಬಂದು ಒಂದುವಾರ ಆದರೂ ಅದ್ಭುತವಾಗಿ ಇಂದಿಗೂ ಪ್ರದರ್ಶನವಾಗುತ್ತಿರುವುದು ಖುಷಿಯ ವಿಚಾರ, ಈಗ ಎಲ್ಲಾ ಕಡೆ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ.. ರಾಬರ್ಟ್ ಸಿನಿಮಾವನ್ನು ಪ್ರತಿಯೊಬ್ಬರು ಕೂಡ ತುಂಬಾನೇ ಇಷ್ಟ ಪಟ್ಟಿದ್ದಾರೆ.. ಅಭಿಮಾನಿಗಳು ಈ ರಾಬರ್ಟ್ ಸಿನಿಮಾವನ್ನ ಎರಡರಿಂದ ಮೂರು ಬಾರಿ ಸಿನಿಮಾವನ್ನ ನೋಡುತ್ತಿದ್ದಾರೆ..ಇನ್ನೂ ಇದಕ್ಕಿಂತ ಖುಷಿಯ ವಿಚಾರ ಡಿ ಬಾಸ್ ಅಭಿಮಾನಿಗಳಿಗೆ ಇನ್ನೇನು ಬೇಕು ನೀವೇ ಹೇಳಿ.. ಕೋರೋನ ಲಾಕ್ ಡೌನ್ ಎಲ್ಲವೂ ಮುಗಿದ ಬಳಿಕ ದರ್ಶನ್ ನಟಿಸಿದ ರಾಬರ್ಟ್ ಸಿನಿಮಾ ಇಷ್ಟೊಂದು ಕಲೆಕ್ಷನ್ ಮಾಡುತ್ತದೆ ಎಂದು ಯಾರು ಕೂಡ ಆಲೋಚನೆ ಮಾಡಿರಲಿಲ್ಲ, ಈ ಸಿನಿಮಾದಲ್ಲಿ ಪ್ರತಿಯೊಬ್ಬರ ಪಾತ್ರಗಳನ್ನು ತುಂಬಾನೇ ಅದ್ಭುತವಾಗಿ ಮೂಡಿಬಂದಿದೆ.. ಸ್ನೇಹಿತರೆ ದರ್ಶನ್ ಅಭಿನಯ ರಾಬರ್ಟ್ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ…