Advertisements

ತಮ್ಮ ಪ್ರಾಣವನ್ನು ಲೆಕ್ಕಿಸದೆ ತಂದೆ ಮಗಳು ಸುಮಾರು 2 ಸಾವಿರ ಜನರ ಪ್ರಾಣವನ್ನ ಉಳಿಸಿದ್ದಾರೆ.! ಇವರು ಮಾಡಿದ ಸಾಧನೆ ನೋಡಿದ್ರೆ ಅಚ್ಚರಿ ಪಡ್ತೀರಾ..

Inspire

ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬರ ಜೀವನದಲ್ಲಿ ಈ ಸಾವು ಅನ್ನೊದು ನೀರಿನ ಮೇಲೆ ಬರುವ ಗುಳ್ಳೆಗಳ ಹಾಗೆ, ನೀರಿನಲ್ಲಿ ಇರೋ ಗುಳ್ಳೆಯನ್ನ ಮತ್ತೆ ಮತ್ತೆ ಬರುವಂತೆ ಮಾಡಬಹುದು, ಆದರೆ ಮನುಷ್ಯನಿಗೆ ಬರುವ ಸಾವಿನ ಆ ಒಂದು ಕ್ಷಣ ಮಾತ್ರ ಯಾರಿಂದಲೂ ಕೊಡಲು ಸಾದ್ಯವಿಲ್ಲ, ಆದರೆ ಯಾರಿಗೂ ತಿಳಿಯದಂತೆ ಈ ಸಾವು ಸಮೀಪದಲ್ಲಿ ಇದ್ದಾಗ ಎಚ್ಚರಿಕೆ ಕೊಡಲು ದೇವರ ರೂಪದಲ್ಲಿ ಯಾರಾದರೂ ಬರುತ್ತಾರೆ ಎಂದು ವಯಸ್ಸಿನಲ್ಲಿ ಹಿರಿಯರು ಕೇಳುತ್ತಿದ್ದರು, ಆದರೆ ಇಲ್ಲಿಯೂ ಕೂಡ ಅದೇರೀತಿ ಯಾಗಿದೆ, ಅಪ್ಪ ಮಗಳು ದೇವರ ರೂಪದಲ್ಲಿ ಬಂದು ಸಾವಿರಾರು ಜನರ ಪ್ರಾಣವನ್ನ ಉಳಿದಿದ್ದಾರೆ.. ಅಷ್ಟಕ್ಕೂ ಅಪ್ಪ ಮಗಳು ಹೇಗೆ ಈ‌‌ ಸಾವಿರಾರು ಜನರ ಪ್ರಾಣವನ್ನು ಕಾಪಾಡಿದರು ಅನ್ನೋದನ್ನ ಇಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ, ಮನುಷ್ಯ ತಾನು ಮಾಡುವ ಕೆಲಸಗಳಿಂದ ರಾಕ್ಷಸ ಹಾಗು ದೇವರು ರೂಪ ಪಡೆಯುತ್ತಾನೆ ಎಂದು ನಮ್ಮ ಪೂರ್ವಜರು ಹೇಳುತ್ತಿದ್ದರು,

[widget id=”custom_html-2″]

Advertisements
Advertisements

ಆದರೆ ಬುಡಕಟ್ಟು ಜನಾಂಗದ ಈ ವ್ಯಕ್ತಿ ತನ್ನ ಸೂಕ್ಷ್ಮ ಬುದ್ದಿ ಹಾಗು ತನ್ನ ಒಂದು ಆಲೋಚನೆಯಿಂದ, ಎರಡು ಸಾವಿರ ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ.. ಈ ವ್ಯಕ್ತಿಯ ಹೆಸರು ಸ್ವಪನ್ ತ್ರಿಪುರ ರಾಜ್ಯದ ದಂಚಾರ ಎನ್ನುವ ಅರಣ್ಯ ಪ್ರದೇಶದ ಬುಡಕಟ್ಟು ಜನಾಂಗದವರಾಗಿ ವಾಸಿಸುತ್ತಿದ್ದಾರೆ.. ಈ ವ್ಯಕ್ತಿ ಒಂದು ದಿನ ತನ್ನ ಮಗಳ ಜೊತೆಗೆ ಬೇರೊಂದು ಹಳ್ಳಿಗೆ ಹೋಗಬೇಕೆಂದು ಸುತ್ತಮುತ್ತಲೂ ಇರುವ ಬೆಟ್ಟ ಗುಡ್ಡ ಪ್ರದೇಶವನ್ನು ಹತ್ತಿ ಇಳಿಯುವ ಸಮಯದಲ್ಲಿ ರೈಲ್ವೆ ಟ್ರ್ಯಾಕ್ ದಾಟಿ ಮುಂದೆ ಹೋಗುತ್ತಿದ್ದರು.. ಆ ಸಮಯದಲ್ಲಿ ಬಲಗಡೆ ತಿರುಗಿ ನೋಡಿದ ಸ್ವಪನ್ ಗೆ ಒಂದು ಕ್ಷಣ ಬೆಚ್ಚಿ ಬಿದ್ದ.. ಕಾರಣ ಏನೆಂದರೆ ಮೂರು ದಿನಗಳ ಕಾಲ ಸತತವಾಗಿ ಬಿದ್ದ ಮಳೆಯಿಂದ ಸುಮಾರು ಒಂದು ಕಿಲೋಮೀಟರ್ ದೂರ ರೈಲ್ವೆ ಟ್ರ್ಯಾಕ್ ಮುರಿದು ಬಿದ್ದಿತು,

[widget id=”custom_html-2″]

ಇದನ್ನು ಗಮನಿಸಿದ ಸ್ವಪನ್ ಗೆ ಆ ಜಾಗದಲ್ಲಿ ಕೆಲವೇ ಗಂಟೆಯಲ್ಲಿ ಟ್ರೈನ್ ಬರುವ ಶಬ್ದ ಕೇಳಿಸಿತ್ತು, ಸ್ವಪನ್ ಗೆ ಆ ಕ್ಷಣದಲ್ಲಿ ಏನು ತೋಚದ ಕಾರಣ, ಹೇಗಾದರೂ ಮಾಡಿ ಜೋರಾಗಿ ಬರುವ ಟ್ರೈನ್ ಅನ್ನು ನಿಲ್ಲಿಸಬೇಕು, ಇಲ್ಲಿ ಆಗುವ ದೊಡ್ಡ ಅನಾಹುತವನ್ನು ತಡೆಯಬೇಕು ಎಂದು ಯೋಚಿಸುತ್ತಿದ್ದ ಸ್ವಪನ್ ತಕ್ಷಣವೇ ಒಂದು ಉಪಾಯ ಮಾಡಿ, ಸ್ವಪನ್ ತನ್ನ ಮೈಮೇಲೆ ಇದ್ದ ಬಟ್ಟೆಯನ್ನು ಬಿಚ್ಚಿ ತಂದೆಯ ಜೊತೆ ಮಗಳು ಕೂಡ ತಂದೆಯ ಬಟ್ಟೆಯನ್ನು ಕೈಯಲ್ಲಿ ಹಿಡಿದು ರೈಲ್ವೆ ಟ್ರ್ಯಾಕ್ ಮಧ್ಯೆ ಜೋರಾಗಿ ಬಟ್ಟೆಯನ್ನು ತೋರಿಸಿ ಶಬ್ದ ಮಾಡುತ್ತಾ ಟ್ರೈನಿಂಗ್ ಎದುರುಗಡೆ ಓಡುತ್ತಿದ್ದರು.. ಇನ್ನೂ ರೈಲ್ವೆ ಟ್ರ್ಯಾಕ್ ನಲ್ಲಿ ಬಟ್ಟೆ ತೋರಿಸಿ ಓಡಿ ಬರುತ್ತಿದ್ದ ಇಬ್ಬರನ್ನೂ ನೋಡಿದ ಟ್ರೈನ್ ಚಾಲಕ ಇಲ್ಲಿ ಏನೂ ಅನಾಹುತ ಆಗಿದೆ ಅದಕ್ಕೆ ಇವರು ತಮ್ಮ ಬೇಟೆಯನ್ನು ತೋರಿಸಿ ಟ್ರೈನ್ ನಿಲ್ಲಿಸುವಂತೆ ಸನ್ನೆ ಮಾಡುತ್ತಿದ್ದಾರೆ ಎಂದು ತಿಳಿದ..

ಟ್ರೈನ್ ಚಾಲಕ ರೈಲನ್ನು ಹಂತ ಹಂತವಾಗಿ ನಿಲ್ಲಿಸುತ್ತಾ ಬಂದ, ಟ್ರೈನ್ ನಿಲ್ಲಿಸಿ ಮುಂದೆ ಬಂದು ನೋಡಿದ ಚಾಲಕನಿಗೆ ಒಂದು ಕ್ಷಣ ಆಶ್ಚರ್ಯವಾಯಿತು‌, ಇನ್ನು ಆ ಟ್ರೈನ್ ನಲ್ಲಿ ಬರೋಬ್ಬರಿ ಎರಡು ಸಾವಿರ ಜನರು ಪ್ರಯಾಣ ಮಾಡುತ್ತಿದ್ದರು, ಸ್ವಪನ್ ಅವರ ಒಂದು ಐಡಿಯಾ ಸಾವಿರಾರು ಜನರ‌ ಪ್ರಾಣ ಉಳಿಸಿತು, ಇನ್ನು ತಂದೆ ಹಾಗು ಮಗಳ ಧೈರ್ಯವನ್ನು ನೋಡಿದ ತ್ರಿಪುರ ರಾಜ್ಯದ ಮಂತ್ರಿ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಅವರಿಗೆ ಊಟ ಹಾಕಿ ನಂತರ ಸ್ವಪನ್ ಅವರು ಜೀವನ ನಡೆಸಲು ಒಂದು ದಾರಿಯಾಗಿ ಮನೆ ಹಾಗು ನಗದು ಬಹುಮಾನ ನೀಡಿದರು.. ಅಲ್ಲದೇ ಅವರು ಮಾಡಿದ ಕೆಲಸಕ್ಕೆ ಗೌರವಾರ್ಥ ಪ್ರಶಸ್ತಿಯನ್ನು ನೀಡಲಾಯಿತು.. ಸ್ನೇಹಿತರೆ ತನ್ನ ಪ್ರಾಣವನ್ನು ಲೆಕ್ಕಿಸದೆ ಸಾವಿರಾರು ಜನರ ಪ್ರಾಣ ರಕ್ಷಣೆ ಮಾಡಿದ ತಂದೆ ಮಗಳ ಧೈರ್ಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..