ಕನ್ನಡದ ನಂಬರ್ ಒನ್ ನ್ಯೂಸ್ ಚಾನಲ್ ಆಗಿರುವ ಪಬ್ಲಿಕ್ ಟಿವಿ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರ ವಾಗುವ ಕಾರ್ಯಕ್ರಮ ತುಂಬಾನೇ ಫೇಮಸ್ ಆಗಿದೆ. ಪಬ್ಲಿಕ್ ಟಿವಿ ವಾಹಿನಿಯ ಮುಖ್ಯಸ್ಥರಾಗಿರುವ ರಂಗನಾಥ್ ಅವರು ಬಹಳ ಬಡ ಕುಟುಂಬದಿಂದ ಬಂದಿದ್ದು ತಮ್ಮ ಸ್ವಂತ ಪರಿಶ್ರಮದಿಂದ ಒಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಇಲ್ಲಿಯವರೆಗೂ ಬಂದು ನಿಂತಿದ್ದಾರೆ.. ಇನ್ನೂ ರಂಗಣ್ಣನವರ ನಿಜಜೀವನದಲ್ಲಿ ಇವರ ಹೆಂಡತಿ ಮತ್ತು ಮಗಳು ಹೇಗಿದ್ದಾರೆ ಎಂದು ನೋಡೋಣ ಬನ್ನಿ.. ರಂಗಣ್ಣ ಅವರ ಪೂರ್ತಿ ಹೆಸರು ಹೆಬ್ಬಾಳೆ ರಾಮಕೃಷ್ಣಯ್ಯ ರಂಗನಾಥ್ ಅಂತ. ಇನ್ನೂ ಇವರ ನಿಕ್ ನೇಮ್ ಕ್ಯಾಪ್ಟನ್. ರಂಗಣ್ಣನವರು ಮೇ 12/1966 ರಂದು ಮೈಸೂರಿನಲ್ಲಿ ಜನಿಸಿದರು

ತನ್ನ ವೃತ್ತಿ ಜೀವನವನ್ನ ಪತ್ರಕರ್ತನಾಗಿ ಆರಂಭಿಸಿದ ಇವರು ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ ಕನ್ನಡ ಪ್ರಭಾ ಪತ್ರಿಕೆಯಲ್ಲಿ ಮೊದಲಾದ ಬಾರಿಗೆ ವೃತ್ತಿ ಜೀವನವನ್ನು ಆರಂಭಿಸಿದ ರಂಗಣ್ಣನವರು ಇಡೀ ರಾಜ್ಯಾದ್ಯಂತ ಬಹು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.. ಇನ್ನೂ ರಂಗನಾಥ್ ನೇರ ನುಡಿ ಮಾತಾನಾಡುವ ಶೈಲಿ ಮತ್ತು ಸತ್ಯವನ್ನು ಇದ್ದಹಾಗೆ ಹೇಳುವ ಮಾತಿನ ಧಾಟಿಗೆ ಜೂನಿಯರ್ ಅರ್ನಬ್ ಗೋಸ್ವಾಮಿ ಎಂದೇ ಕರೆಯಲಾಗುತ್ತದೆ.. ಸರಳತೆಗೆ ಹೆಸರಾಗಿರುವ ಇವರಿಗೆ 2016 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ದಶಕದ ಜರ್ನಲಿಸ್ಟ್ ಎಂಬ ಪ್ರಶಸ್ತಿ ನೀಡಿ ಗೌರವ ನೀಡಿದ್ದಾರೆ..

ರಂಗನಾಥ್ ಅವರ ಕುಟುಂಬದ ವಿಚಾರಕ್ಕೆ ಬಂದರೆ, ತಂದೆ ರಾಮಕೃಷ್ಣಯ್ಯ ಮತ್ತು ತಾಯಿ ಲೀಲಾ. ಕಾತ್ಯಾಯಿನಿ, ಮಣಿಕರ್ಣಿಕಾ, ಸರ್ವಮಂಗಳ ಮತ್ತು ವೈದೇಹಿ ಹೆಸರಿನ ನಾಲ್ವರು ಸಹೋದರಿಯರು ಮತ್ತು ವೆಂಕಟೇಶ್, ಕೇಶವ ಎಂಬ ಹೆಸರಿನ ಇಬ್ಬರು ಸಹೋದರರಿದ್ದಾರೆ. ಪತ್ನಿ ಶಾರದಾ, ಮಗಳು ವೈಸ್ವಿನಿ. ಪ್ರಸ್ತುತ ಪಬ್ಲಿಕ್ ಟಿವಿ ಕರ್ನಾಟಕದಲ್ಲಿ ಹೆಚ್ಚು ಟಿಆರ್ ಪಿ ಪಡೆಯುತ್ತಿರುವ ಏಕೈಕ ಸುದ್ದಿ ಮಾಧ್ಯಮ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ. ಇನ್ನೂ ರಂಗಣ್ಣನವರ ಸಾಧನೆ ಅದೆಷ್ಟೋ ಯುವಕರಿಗೆ ಸ್ಫೂರ್ತಿ ಎಂದರೆ ತಪ್ಪಾಗಲಾರದು. ಸ್ನೇಹಿತರೆ ರಂಗನಾಥ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..