Advertisements

100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಈ ಖ್ಯಾತ ನಟಿ ಈಗ ಸ್ಕೂಲ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ? ಈ ನಟಿ ಯಾರು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಕಷ್ಟ ಸುಖ ಶ್ರೀಮಂತಿಕ್ಕೆ ಬಡತನ ಎಲ್ಲವನ್ನೂ ಸಮನಾಗಿ ಸ್ವೀಕರಿಸಬೇಕಾಗುತ್ತದೆ.. ಪರಿಸ್ಥಿತಿಗಳಿಗೆ ತಕ್ಕಂತೆ ನಾವು ಕೂಡ ಜೀವನದಲ್ಲಿ ಬದಲಾವಣೆ ಆಗಬೇಕಾಗುತ್ತದೆ.. ಅದೇರೀತಿ ದಕ್ಷಿಣ ಭಾರತದ ಈ ಖ್ಯಾತ ನಟಿಯ ಹೆಸರು ದೇವಯಾನಿ.. ಇವರು ಕನ್ನಡದಲ್ಲಿ ವಿಷ್ಣು ವರ್ಧನ್ ಸೇರಿದಂತೆ ದಕ್ಷಿಣ ಭಾರತದ ಹಲವಾರು ಸ್ಟಾರ್ ನಟರ ಜೊತೆ ನಟನೆ ಮಾಡಿದ್ದರೆ.‌. ಸುಮಾರು 100 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ನಟಿ ದೇವಯಾನಿ ಅವರು..‌ ಸಿನಿಮಾಗಳಲ್ಲಿ ನಾಯಕಿಯಾಗಿ ನಟನೆ ಮಾಡುತ್ತಿದ್ದಾಗಲ್ಲೇ ನಟಿ ದೇವಯಾನಿ ತಮಿಳು ನಿರ್ದೇಶಕ ರಾಜ್ ಕುಮಾರನ್ ಪ್ರೀತಿಸಿದರು ಆದರೆ ಇವರಿಬ್ಬರ ಗಾಢವಾದ ಪ್ರೀತಿಯನ್ನು ದೇವಯಾನಿ ಅವರ ಕುಟುಂಬದವರು ಒಪ್ಪಿಗೆ ನೀಡಲಿಲ್ಲ..

Advertisements
Advertisements

ನಂತರ ದೇವಯಾನಿ ತನ್ನ ಕುಟುಂಬದವರ ವಿರೋಧವನ್ನು ಕಟ್ಟಿಕೊಂಡು ನಿರ್ದೇಶಕ ರಾಜ್ ಕುಮಾರನ್ ಅವರನ್ನು ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ನಂತರ ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು..‌ ಗಂಡ ಮನೆ ಮಕ್ಕಳು ಎಂದು ತುಂಬಾ ಬ್ಯುಸಿಯಾಗಿರುವ ದೇವಯಾನಿ ಅವರಿಗೆ ನಂತರದ ದಿನಗಳಲ್ಲಿ ಸಿನಿಮಾಗಳಲ್ಲಿ ನಟನೆ ಮಾಡುವ ಅವಕಾಶ ಕಡಿಮೆಯಾಯಿತು.‌. ಇತ್ತ ತನ್ನ ಗಂಡ‌ ನಿರ್ದೇಶನ ಮಾಡಿದ ಸಿನಿಮಾಗಳು ಒಂದರ ನಂತರ ಒಂದು ಸೋಲನ್ನು ಕಂಡವು ಇದೇ ಸಮಯದಲ್ಲಿ ದೇವಯಾನಿ ಗಂಡನಿಗೆ ಧೈರ್ಯ ತುಂಬಿದರು ತನ್ನ ಪತಿಯನ್ನು ಯಾವುದೇ ರೀತಿಯಲ್ಲೂ ದೂಷಿಸಲಿಲ್ಲ.. ತನ್ನ ತಂದೆ ತಾಯಿಯ ಬಿಳಿ ಹೋಗಿ ಕ್ಷೇಮ ಕೇಳಲಿಲ್ಲ‌ ಅವರಿಂದ ಯಾವುದೇ ಸಹಾಯವನ್ನ ಕೂಡ‌ ಕೇಳಲಿಲ್ಲ‌

ತುಂಬಾ ಧೈರ್ಯವಂತೆ ಹಾಗು‌ ಸ್ವಾಭಿಮಾನಿ ಆಗಿರುವ ನಟಿ ದೇವಯಾನಿ ಟೀಚರ್ ಟ್ರೈನಿಂಗ್ ಮಾಡಿದ್ದರು ಚೆನ್ನೈನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಂಡರು ಇದರ ಜೊತೆಯಲ್ಲಿ ತಮಿಳಿನ ಕೇಲವು ಟಿವಿ ಶೋನಲ್ಲಿ ಜಡ್ಜ್ ಅಗಿ ಕೆಲಸ ಮಾಡುತ್ತಿದ್ದಾರೆ.. ತನ್ನ ಗಂಡ ರಾಜ್ ಕುಮಾರನ್ ಕೂಡ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟನೆ ಮಾಡುತ್ತಿದ್ದು ಪತ್ನಿಗೆ ಸಹಕಾರ ಮಾಡುತ್ತಿದ್ದಾರೆ ಇಂದಿನ ಕಾಲದಲ್ಲಿ ಅದೆಷ್ಟೋ ನಟ ನಟಿಯರು ಪ್ರೀತಿಸಿ ಮದುವೆ ಆದರೂ ಸಂಬಂಧದಲ್ಲಿ ಹಾಗು ಸಂಸಾರದಲ್ಲಿ ಸ್ಪಲ್ಪ ಹೆಚ್ಚು ಕಡಿಮೆ ಆದರೂ ಹಿಂದು ಮುಂದೆ ನೋಡದೆ ವಿವಾಹ ವಿಚ್ಛೇದನ ನೀಡುತ್ತಾರೆ.. ಆದರೆ ಈ ನಟಿ ತನ್ನ ಗಂಡ ಸಂಕಷ್ಟದಲ್ಲಿ‌ ಇದ್ದಾಗ ಕೈಹಿಡಿದು ಸಹಕಾರ ನೀಡಿದ್ದಾರೆ.. ಇಲ್ಲಿ ನಟಿ ದೇವಯಾನಿ ಅವರ ಪವಿತ್ರವಾದ ಪ್ರೀತಿ ಹಾಗು ಅವರ ಸ್ವಾಭಿಮಾನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..