Advertisements

ಕೃಷಿಯಲ್ಲಿ ಧಾರವಾಡ ರೈತನ ಈ ಸ್ಮಾರ್ಟ್ ಐಡಿಯಾ ನೋಡಿದ್ರೇ ಆಶ್ಚರ್ಯ ಪಡ್ತೀರಾ.! 3 ಲಕ್ಷ ಸಂಬಳ ಬಿಟ್ಟು ಕೃಷಿಯಲ್ಲಿ ಈ ರೈತ ಮಾಡಿದ್ದೇನು ಗೊತ್ತಾ?

Inspire

ನಮಸ್ತೆ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಕೃಷಿ ವ್ಯವಸಾಯದ ಕಡೆ ಹೆಚ್ಚು ಗಮನ ಹರಿಸುತ್ತಿದ್ದು.. ಬೇಸಾಯ ಪದ್ದತಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ದೃಢ ‌ನಿರ್ಧಾರ ಮಾಡಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ದುಬಾರಿ ಸಂಬಳವನ್ನು ಬಿಟ್ಟು ತಮ್ಮ‌ ಹಳ್ಳಿಗೆ ಮರಳಿ ಹೋಗುತ್ತಿದ್ದಾರೆ.. ಇನ್ನೂ ತಮ್ಮ ಸ್ವಂತ ಊರಿಗೆ ಬಂದು ಕೃಷಿಯಲ್ಲಿ ಯಶಸ್ವಿಯಾಗಿ ಅದರಿಂದ ಬದುಕು ಕಟ್ಟಿಕೊಂಡಿರುವ ಹಲವಾರು ಜನರನ್ನ ನೋಡಿದ್ದೇವೆ ಹಾಗು ಕೇಳಿದ್ದೇವೆ.. ಆದರೆ ಈ ವ್ಯಕ್ತಿ ತಮ್ಮ ಜಮೀನಿನಲ್ಲಿ ತಾವೇ ಬೆಳೆದ ಬೆಳೆಗೆ ಕುಳಿತ ಜಾಗದಲ್ಲೇ ಮಾರುಕಟ್ಟೆ ಮಾಡಿಕೊಂಡು ಡಿಜಿಟಲೀಕರಣದಿಂದ ತಾವು ಇರುವ ಜಾಗದಲ್ಲೇ ಅನೇಕ ಗ್ರಾಹಕರನ್ನ ಹೊಂದಿದ್ದಾರೆ.. ಅಷ್ಟಕ್ಕೂ ಆ ವ್ಯಕ್ತಿ ಯಾರು, ಕುಳಿತ ಜಾಗದಲ್ಲೇ ಮಾರುಕಟ್ಟೆ ಮಾಡಿಕೊಂಡಿದ್ದು ಏಕೆ ಎಂಬುದು ಇಲ್ಲಿ ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ನರಸನಗೌಡ ಎನ್ನುವ ಈ ವ್ಯಕ್ತಿ ದೊಡ್ಡ ಕಂಪನಿಯಲ್ಲಿ ಲಕ್ಷಗಟ್ಟಲೆ ಸಂಬಳ ಬರುತ್ತಿದ್ದರು ಕೆಲಸವನ್ನು ಬಿಟ್ಟು ಈಗ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.. ಹೌದು ಬಳ್ಳಾರಿ ಸಂಡೂರಿನ ನರಸನಗೌಡ ವೀರಪುರ ಅವರು ಧಾರವಾಡ ಕ್ಯಾರಕುಪ್ಪದಲ್ಲಿ 5 ಎಕರೆ ಭೂಮಿಯನ್ನು ಖರೀದಿ ಮಾಡಿ ಸಾವಯವ ಕೃಷಿ ಮಾಡುವುದರಲ್ಲಿ ಖುಷಿ ಕಾಣುತ್ತಿದ್ದಾರೆ.. ಇವರು ತಮ್ಮ‌ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರಿಂಗ್ ಆಗಿದ್ದು ಹೊರ ದೇಶದಲ್ಲಿ ಅಂದರೆ ಲಂಡನ್‌ನಲ್ಲಿ ಒಂದು ದೊಡ್ಡ ಕಂಪನಿಯಲ್ಲಿ 3.5 ಲಕ್ಷದಷ್ಟು ಸಂಬಳ ಪಡೆಯುತ್ತಿದ್ದರು.. ಆದರೆ ಇವರು ಕೃಷಿಯಲ್ಲಿ ಹೆಚ್ಚಾಗಿ ಆಸಕ್ತಿ ಬೆಳೆಸಿಕೊಂಡಿದ್ದರು ಅನಂತರ ತಮ್ಮ ಊರಿಗೆ ಮರಳಿ ಅಲ್ಲಿ ಒಂದಷ್ಟು ಜಮೀನನ್ನು ಖರೀದಿ ಮಾಡಿ ರಾಸಾಯನಿಕ ಗೊಬ್ಬರವನ್ನು ಬಳಸದೆ ಉತ್ತಮವಾದ ತರಕಾರಿಯನ್ನು ಬೆಳೆದಿದ್ದಾರೆ.. ಆದರೆ ವ್ಯವಸಾಯದಲ್ಲಿ ಇಳುವರಿ ಅವರು ಅಂದುಕೊಂಡ ಹಾಗೆ‌ ಆಗಲಿಲ್ಲ.. ಇದರಿಂದ ಸಾವಯವ ಕೃಷಿ ಬೆಳೆಯ ಕಡೆ ಗಮನ ಹರಿಸುತ್ತಾರೆ..

[widget id=”custom_html-2″]

ಅನಂತರ ಇವರು ತಮ್ಮ ಜಮೀನಿನಲ್ಲಿ 12 ರೀತಿಯ ಸೊಪ್ಪುಗಳು‌ ವಿಭಿನ್ನ ರೀತಿಯ ಹೂಗಳನ್ನು ಇತರೆ ಸಾವಯವ ತರಕಾರಿಗಳ ಜೊತೆಗೆ ಅಣಬೆಯನ್ನು ಕೂಡ ಬೆಳೆಯುತ್ತಿದ್ದರು.. ಇದರಲ್ಲಿ ವಿಶೇಷ ಏನೆಂದರೆ ಸ್ವತಃ ಇವರೆ ಒಂದು ಮೊಬೈಲ್ ಅಪ್ಲಿಕೇಶನ್ ಅನ್ನು ಆವಿಷ್ಕಾರ ಮಾಡಿದ್ದರು.. ಆ ಅಪ್ಲಿಕೇಶನ್ ಮೂಲಕ ತಮ್ಮ ಬೆಳೆಗಳನ್ನು ಮಾರಾಟ ಮಾಡುತ್ತಿದ್ದಾರೆ..  ಹೌದು ಸ್ನೇಹಿತರೆ ನರಸನಗೌಡ ಅವರು ವೀಕೆಎಪ್ ಅಗ್ರಿ ಫಾರ್ಮ್ ಎಂಬ ಒಂದು ಹೊಸ ಅಪ್ಲಿಕೇಶನ್ ಮೂಲಕ ಈಗಾಗಲೇ ಧಾರವಾಡದ ಸುತ್ತಮುತ್ತಲಿನ ಸುಮಾರು 350ಕ್ಕೂ‌ ಹೆಚ್ಚು ಗ್ರಾಹಕರನ್ನ ಈ ಅಪ್ಲಿಕೇಶನ್ ಮೂಲಕ ಬಂದಿದ್ದಾರೆ.. ಇವರು‌ ವ್ಯಾಟ್ಸನ್ ಮತ್ತು ವೀಕೆಎಪ್ ಅಗ್ರಿ ಫಾರ್ಮ್ ಅಪ್ಲಿಕೇಶನ್ ಮೂಲಕ ಪ್ರತಿ ಗುರುವಾರದಂದು ತನ್ನ ಗ್ರಾಹಕರಿಗೆ ಬೇಕಾದಂತಹ

ತರಕಾರಿ ಹೂ ಹಣ್ಣುಗಳನ್ನು ತಮ್ಮ ಸಿಬ್ಬಂದಿಗಳ ಮೂಲಕ ತಮ್ಮ‌ ಗ್ರಾಹಕರ ಮನೆಗೆ ನೇರವಾಗಿ ತಲುಪಿಸುತ್ತಾರೆ..‌ ಅಲ್ಲದೆ ಮೋರ್ ಗಳಿಗೂ ಕೂಡ ನರಸನಗೌಡ ಅವರು ತಮ್ಮ ಸಾವಯವ ತರಕಾರಿಯನ್ನ ಪೂರೈಕೆ ಮಾಡುತ್ತಿದ್ದಾರೆ.. ನೋಡಿದ್ರಲ್ಲ ಸ್ವಂತ ದುಡಿಮೆ ಕೆಲಸವನ್ನು ಬಿಟ್ಟು ವಿದೇಶದ ಕಡೆ ಕೆಲಸಕ್ಕೆ ಎಂದು ಪ್ರಯಾಣ ಬೆಳೆಸುವ ಅದೆಷ್ಟೋ ಜನರಿಗೆ ನರಸನಗೌಡ ಅವರು ಮಾದರಿಯಾಗಿದ್ದಾರೆ.. ಸ್ನೇಹಿತರೆ ವಿದೇಶದಲ್ಲಿ ಕೆಲಸ ಬಿಟ್ಟು ತಮ್ಮ ಊರಿನಲ್ಲಿ ಸಾವಯವ ಕೃಷಿ ಮಾಡಿ ಖುಷಿಯಿಂದ ಜೀವನ ಮಾಡುತ್ತಿರುವ ನರಸನಗೌಡ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..