Advertisements

ಕನ್ನಡ ಚಿತ್ರರಂಗದ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ‌ ಮನೆ ಹೇಗಿದೆ ಗೊತ್ತಾ.! ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಪುಟ್ಟಣ್ಣ ಕಣಗಾಲ್ ಹೆಸರು ಕೇಳಿದ ಸಾಕು, ಮೊದಲಿಗೆ ನೆನಪಾಗುವುದು, ಕನ್ನಡ ಚಿತ್ರ ರಂಗದಲ್ಲಿ ಪ್ರಸಿದ್ಧ ಹಾಗು ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು ಎಂದು, ಇವರನ್ನು ಕನ್ನಡ ಚಿತ್ರರಂಗದ ಅದ್ವಿತೀಯ ನಿರ್ದೇಶಕ, ನಿರ್ಮಾಪಕ, ಹಾಗು ಹಲವಾರು ಚಿತ್ರಕಥೆ ಸಂಭಾಷಣೆಕಾರ ಎಂದೆಲ್ಲಾ ಕರೆಯುತ್ತಾರೆ.. ಇವರು ಕನ್ನಡ ಅಲ್ಲದೇ ಹಿಂದಿ, ಮಲೆಯಾಳಂ, ಭಾಷೆಯಲ್ಲಿ ಕೆಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ, ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಸಿನಿಮಾಗಳಿಗೆ ಹೊಸ ರೂಪ ತಂದವರು ಅಲ್ಲದೇ ಸಿನಿಮಾವನ್ನು ಈ ರೀತಿ ಕೂಡ ಮಾಡಬಹುದು ಎಂದು ತೋರಿಸಿದ್ದಾರೆ.. ಇನ್ನು ಬೇರೆ ಭಾಷೆಯ ದೊಡ್ಡ ದೊಡ್ಡ ಸಿನಿಮಾದ ನಿರ್ದೇಶಕರು ಪುಟ್ಟಣ್ಣ ಕಣಗಾಲ್ ಅವರು ಮಾಡುವ ಸಿನಿಮಾಗಳನ್ನು ನೋಡಿ ಸಿನಿಮಾ ನಿರ್ದೇಶನ ಮಾಡುವುದನ್ನು ಅಳವಡಿಸಿಕೊಂಡರೆ..

[widget id=”custom_html-2″]

Advertisements
Advertisements

ಹೊಸ ಸಿನಿಮಾಗಳನ್ನು ನಿರ್ದೇಶನ ಮಾಡುವ ನಿರ್ದೇಶಕರಿಗೆ ಪುಟ್ಟಣ್ಣ ಕಣಗಾಲ್‌ ಅವರು ಮಾಡಿದ ಹಲವಾರು ಸಿನಿಮಾಗಳು ಒಂದು ದಾರಿ ದೀಪವಾಗಿದೆ, ಈ ಅದ್ಭುತ ನಿರ್ದೇಶಕ ಹುಟ್ಟಿ ಬೆಳೆದ ಮನೆ ಹೇಗಿದೆ ಗೊತ್ತಾ! ಪುಟ್ಟಣ್ಣ ಕಣಗಾಲ್ ಜೂನ್ ೫-೧೯೮೫ ರಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲು ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಹುಟ್ಟದ ಇವರು, ತನ್ನ ಜೀವನವನ್ನು ನಡೆಸಲು ಶಿಕ್ಷಕರಾಗಿ, ಸೇಲ್ಸ್ ಮನ್ ಆಗಿ, ಕೊನೆಗೆ ಕ್ಲೀನರ್ ಆಗಿ ಕೆಲಸ ಮಾಡಿದರು.. ನಂತರ ಅವರ ಆಲೋಚನೆ ರಂಗಭೂಮಿಯ ಕಡೆ ವಾಲಿತು.. ನಂತರ ಚಿತ್ರರಂಗದಲ್ಲಿ ಪುಟ್ಟಣ್ಣನವರು ಯಾರು ನೋಡಿರದ ಇತಿಹಾಸವನ್ನು ಸೃಷ್ಟಿಸಿದ್ದರು.. ಇವರು ಸಾಮಾಜಿಕ ಕಥೆಗಳನ್ನು ಆಧರಿಸಿ ಕಥೆಗಳು ನಮ್ಮ ಪಕ್ಕದಲ್ಲಿ ನಡೆಯುತ್ತಿದ್ದೆ ಎನ್ನುವ ಹಾಗೆ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದರು..

[widget id=”custom_html-2″]

ಇಂತಹ ಪ್ರತಿಭಾವಂತ ಅಪ್ರತಿಮ ನಿರ್ದೇಶಕನಿಗೆ, ಆಸ್ಕರ್ ಪ್ರಶಸ್ತಿ ಕೊಟ್ಟು ಗೌರವಿಸಿದರು ಕಡಿಮೆಯಾಗುತ್ತಿತ್ತು.. ನೀವು ಈ ಫೋಟೋಗಳನ್ನು ನೋಡುತ್ತಿರಬಹುದು ಪುಟ್ಟಣ್ಣ ಕಣಗಾಲ್ ಅವರು ವಾಸಿಸುತ್ತಿದ್ದ ಮನೆ, ಈ ಸಣ್ಣ ಮನೆಯಲ್ಲಿ ಕಣಗಾಲ್ ಅವರು ವಾಸಿಸುತ್ತಿದ್ದರು.. ಅಲ್ಲದೇ ಇದೇ ಜಾಗದಲ್ಲೇ ತಮ್ಮ ಕನಸಿನ ಕೋಟೆಯನ್ನ ಕಟ್ಟಿಕೊಂಡ ಸ್ಥಳವಾಗಿತ್ತು.. ಇನ್ನು ಈ ಮನೆಯ ಸುತ್ತಲೂ ಪುಟ್ಟಣ್ಣ ಅವರು ಭಾವನೆಗಳೆ ತುಂಬಿದೆ.. ಆದರೆ ತಾಯಿ ರೂಪದಲ್ಲಿರುವ ಕನ್ನಡ ಭಾಷೆಯನ್ನು ವೃದ್ಧಿಸಲು ತಮ್ಮ ಜೀವನ ಪೂರ್ತಿ ಶ್ರಮಿಸಿದ ಅನೇಕ ಹಿರಿಯ ಕಲಾವಿದರನ್ನು ಸರ್ಕಾರ ಹೆಚ್ಚಾಗಿ ಕಾಳಜಿ ವಹಿಸುವುದಿಲ್ಲ.. ಹಾಗೆಯೇ ಪುಟ್ಟಣ್ಣ ಅವರ ಭಾವನೆಯನ್ನು ತುಂಬಿಕೊಂಡಿರುವ ಅವರು ವಾಸಿಸುತ್ತಿದ್ದ ಮನೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ವ್ಯವಸ್ಥೆ ಯಾರು ಕೂಡ ಮಾಡಿಲ್ಲ..

ಇದಕ್ಕೂ ಮೊದಲು ಪುಟ್ಟಣ್ಣ ಅವರ ಮನೆಗೆ ಕನ್ನ ಹಾಕಿದ ಕೆಲವು ಕಳ್ಳರು ಪುಟ್ಟಣ್ಣ ಅವರಿಗೆ ಸಂಬಂಧಿಸಿದ ಕೆಲವು ಪುಸ್ತಕಗಳನ್ನ ಹಾಗು ಅವರಿಗೆ ಗೌರವಾರ್ಥವಾಗಿ ದೊರಕಿದ್ದ ಪ್ರಶಸ್ತಿ ಹಾಗು ಪದಕಗಳನ್ನು, ಕಳ್ಳತನ ಮಾಡಿದರು.. ಇನ್ನು ಮುಂದೆಯಾದರೂ ಪುಟ್ಟಣ್ಣ ಅವರ ಭಾವನೆಗಳು ತುಂಬಿರುವ ಈ ಮನೆಯನ್ನು ಸುರಕ್ಷಿತವಾಗಿ ಅದನ್ನು ಸಂರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ.. ಸ್ನೇಹಿತರೆ ಪುಟ್ಟಣ್ಣ ಕಣಗಾಲ್ ಅವರು ನೆನಪಿಗಾಗಿ ಅವರ ಮನೆಯನ್ನು ಸಂರಕ್ಷಣೆ ಮಾಡುವ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು, ಹಾಗೆಯೇ ಪುಟ್ಟಣ್ಣ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..