ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್8 ದಿನದಿಂದ ದಿನಕ್ಕೆ ತನ್ನ ರೋಚಕತೆಯನ್ನ ಹೆಚ್ಚಿಸಿಕೊಂಡು ಸಾಗಿದ್ದು. ಯಾರು ಮನೆಯಲ್ಲಿ ಇರುತ್ತಾರೆ ಇರಬೇಕಾಗಿತ್ತು ಅಂದುಕೊಳ್ಳುವಾಗ ಪ್ರೇಕ್ಷಕರ ಲೆಕ್ಕಾಚಾರ ಉಲ್ಟಾ ಅಗಿದೆ.. ಇನ್ನೂ ಬಿಗ್ ಬಾಸ್ ಸೀಸನ್8 ರ ಫಿನಾಲೆಗೆ ದಿನ ಗಣನೆ ಆರಂಭವಾಗಿದ್ದು ಮೇಟ್ ವೀಕ್ ಎಲಿಮಿನೇಷನ್ ನಡೆದು ನಟಿ ದಿವ್ಯ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಅಂತ ಹೇಳಲಾಗುತ್ತಿದ್ದು ಇಷ್ಟು ದಿನದ ಬಿಗ್ ಬಾಸ್ ಮನೆಯ ಜರ್ನಿಗೆ ಸಿಕ್ಕಿರುವ ಸಂಭಾವನೆ ಕೇಳಿದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತೀರಾ. ಆಗಿದ್ದೆ ದಿವ್ಯ ಸುರೇಶ್ ಅವರ ಎಲಿಮಿನೇಷನ್ ಗೆ ಕಾರಣವಾದರೂ ಏನು ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಎಂಬುದು ನೋಡೋಣ ಬನ್ನಿ..

ಹೌದು ಬಿಗ್ ಬಾಸ್ ಸೀಸನ್ 8 ರ ಗ್ರಾಂಡ್ ಎಂಟ್ರಿಯಲ್ಲಿ ತನ್ನಗೆ ಅವಕಾಶಗಳು ಸಿಗುತ್ತಿಲ್ಲ ತನ್ನ ಪ್ರತಿಭೆಯನ್ನ ಯಾರು ಕೂಡ ಗುರುತಿಸುತ್ತಿಲ್ಲ ತನ್ನಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಸಿಗುತ್ತಿಲ್ಲ ಅಂತ ಹೇಳಿಕೊಂಡಿದ್ದ ದಿವ್ಯ ಸುರೇಶ್ ಅವರ ಮಾತುಗಳು ಪ್ರಾರಂಭದಲ್ಲಿ ಸಿಂಪತಿಗಾಗಿ ಅನಿಸುತ್ತಿತ್ತು ನಂತರ ಮಂಜು ಪಾವಗಡ ಅವರ ಜೊತೆ ಹೆಚ್ಚಾಗಿ ಸಮಯವನ್ನ ಕಳೆಯುತ್ತಾ ಮನೆಯಲ್ಲಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ.. ಇದು ಬಿಗ್ ಬಾಸ್ ವೀಕ್ಷಕರಿಗೆ ಬೇಸರಕ್ಕೂ ಕಾರಣವಾಗಿತ್ತು ಆದರೆ ಟಾಸ್ಕ್ ವಿಚಾರದಲ್ಲಿ ದಿವ್ಯ ಸುರೇಶ್ ಎಲ್ಲರಿಗೂ ಒಳ್ಳೆಯ ಸ್ಪರ್ಧಿಯನ್ನ ಕೊಡುತ್ತಿದ್ದರು ಈಗಾಗಿ ವೀಕ್ಷಕರು ದಿವ್ಯ ಅವರನ್ನ ಉಳಿಸುತ್ತಾ ಬಂದಿದ್ದರು ಇನ್ನೂ ಇದು ಬಿಗ್ ಬಾಸ್ ಫಿನಾಲೆಯ

ಕೊನೆಯ ವಾರ ಆಗಿದ್ದರಿಂದ ಮನೆಯಲ್ಲಿ ಉಳಿದಿದ್ದ ಆರು ಜನರು ಕೂಡ ಸ್ಟಾಂಗ್ ಹಾಗು ಅತಿಹೆಚ್ಚು ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಈಗಾಗಿ ಈ ಬಾರಿಯ ವೋಟಿಂಗ್ ಲಿಸ್ಟ್ ನಲ್ಲಿ ಅತಿ ಕಡಿಮೆ ಓಟ್ ಮಡೆದಿದ್ದ ದಿವ್ಯ ಅವರನ್ನ ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಲಾಗಿದೆ ಇನ್ನೂ ಬಿಗ್ ಬಾಸ್ ಮನೆಯಲ್ಲಿ 17 ವಾರಗಳನ್ನ ಪೂರ್ಣ ಗೋಳಿಸಿರುವ ದಿವ್ಯ ಅವರಿಗೆ ವಾರಕ್ಕೆ 30 ಸಾವಿರದಂತೆ 17 ವಾರಕ್ಕೆ ಒಟ್ಟು ಐದು ಲಕ್ಷದ ಹತ್ತು ಸಾವಿರ ರೂಪಾಯಿ ಹಣವನ್ನ ಬಿಗ್ ಬಾಸ್ ಕಡೆಯಿಂದ ಸಂಭಾವನೆ ರೂಪದಲ್ಲಿ ನೀಡಲಾಗಿದೆ.. ಸ್ನೇಹಿತರೆ ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನರ್ ಯಾರಾಗಬೇಕು?