Advertisements

ಖಾಸಗಿ ಹೋಟೆಲ್ ನಲ್ಲಿ ಮಗಳ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಮಾಡಿದ ಡಿ.ಕೆ ಶಿವಕುಮಾರ್..

News

ನಮಸ್ತೆ ಸ್ನೇಹಿತರೆ ಚಿಕ್ಕ ವಯಸ್ಸಿನಲ್ಲೇ ನಾಯಕತ್ವದ ಗುಣ ಹೊಂದಿದ್ದ ಡಿ.ಕೆ. ಶಿವಕುಮಾರ್ ರವರು ಎನ್.ಎಸ್ ಯುಟಿ ಮೂಲಕ ರಾಜಕೀಯ ಕ್ಷೇತ್ರಕ್ಕೆ ಬರುತ್ತಾರೆ.. ಡಿ ಕೆ ಶಿವಕುಮಾರ್ ರವರು 1983 ರಲ್ಲಿ ಕಾಂಗ್ರೆಸ್ ಪರವಾಗಿ ಪ್ರಾಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.. ಸದ್ಯ ಡಿ ಕೆ ಶಿವಕುಮಾರ್ ತಮ್ಮ ಮಗಳ ವಿವಾಹ ನಿಶ್ಚಿತಾರ್ಥವನ್ನು ಎಸ್ ಎಂ ಕೃಷ್ಣ ರವರ ಅಳಿಯ ದಿವಂಗತ ಸಿದ್ದಾರ್ಥ ಹೆಗ್ಗಡೆ ರವರ ಜೊತೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥವನ್ನು ನಡೆಸಿದ್ದಾರೆ.. ಈ ನಿಶ್ಚಿತಾರ್ಥದಲ್ಲಿ ಡಿ.ಕೆ ಶಿವಕುಮಾರ್ ಕುಟುಂಬದವರು ಎಸ್.ಎಂ ಕೃಷ್ಣ ರವರ ಕುಟುಂಬಸ್ತರು ರಾಜಕೀಯದವರು ರಾಜ್ಯದ ಮುಖ್ಯಮಂತ್ರಿ ಕೂಡ ಡಿ.ಕೆ ಶಿವಕುಮಾರ್ ಮಗಳ ಈ ಸಮಾರಂಭದಲ್ಲಿ ಭಾಗವಹಿಸಿದ್ದರು…

Advertisements
Advertisements

ತಮ್ಮ ಮಗಳ ವಿವಾಹ ನಿಶ್ಚಿತಾರ್ಥವನ್ನು ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳಿ ಇರುವ ದೊಡ್ಡ ಖಾಸಗಿ ಹೋಟೆಲ್ ನಲ್ಲಿ ನಡೆಸಿದ್ದಾರೆ.. ಜುಲೈ 12 ರಲ್ಲಿ ಎಸ್,ಎಂ ಕೃಷ್ಣ ರವರು ಸದಾಶಿವ ನಗರದಲ್ಲಿ ನಿವಾಸಕ್ಕೆ ಬಂದಾಗ ಡಿ.ಕೆ ಶಿವಕುಮಾರ್ ತಾಂಬೂಲ ಶಾಸ್ತ್ರವನ್ನು ನಡೆಸಿದ್ದರು.. ಇನ್ನು ಅಮರ್ತ್ಯ ಮತ್ತು ಐಶ್ವರ್ಯ ರವರ ಮದುವೆಯನ್ನು ಮುಂದಿನ ವರ್ಷದಲ್ಲಿ ನಡೆಸಿ ಕೊಡಲಿದ್ದಾರೆ ಎಂದು ಸದ್ಯ ತಿಳಿದು ಬಂದಿದೆ.. 26 ವರ್ಷದ ಅಮರ್ತ್ಯ ತನ್ನ ತಾಯಿ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ.. ಹಾಗೆಯೇ 22 ವರ್ಷದ ಡಿ.ಕೆ ಶಿವಕುಮಾರ್ ಮಗಳು ಐಶ್ವರ್ಯ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ ಬಳಿಕ, ಗ್ಲೋಬಲ್ ಆಕಾಡೆಮಿ ಟೆಕ್ನಾಲಜಿ ಸಂಸ್ಥೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ..