Advertisements

ಮೈಸೂರಿನಲ್ಲಿ ನೂತನ ಜಿಲ್ಲಾಧಿಕಾರಿಯಾದ ಡಾ‌. ಗೌತಮ್! ಇವರು ನಿಜಕ್ಕೂ ಯಾರು ಗೊತ್ತಾ? ಇವರ ಪತ್ನಿ ಕೂಡ ಸಿಕ್ಕಪಟ್ಟೆ ಫೇಮಸ್..

News

ನಮಸ್ತೆ ಸ್ನೇಹಿತರೆ, ನಮಗೆಲ್ಲ ತಿಳಿದಿರುವಂತೆ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಆಗಿರುವ ಡಿ‌ಸಿ ರೋಹಿಣಿ ಸಿಂಧೂರಿ ಅವರು ಬಹಳ ದಕ್ಷ ಹಾಗು ಪ್ರಾಮಾಣಿಕ ಅಧಿಕಾರಿ ಅನ್ನೊದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಷಯ.. ಈಗಾಗಲೇ ಇವರು ಹಾಸನ ಮತ್ತು ಮಂಡ್ಯದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು ಅಲ್ಲಿಯೂ ಕೂಡ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ತಮ್ಮ ಕೆಲಸವನ್ನ ನಿಷ್ಠೆಯಿಂದ ಹಾಗು ತುಂಬಾನೇ ಅಚ್ಚುಕಟ್ಟಾಗಿ ಇಲ್ಲಿಯವರೆಗೂ ಮಾಡಿಕೊಂಡು ಬಂದಿದ್ದಾರೆ..‌ ಅದರೆ ರೋಹಿಣಿ ಸಿಂಧೂರಿ ಅವರು ಇದಕ್ಕೂ ಮೊದಲು ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ‌ ಹೆಚ್.ಡಿ ರೇವಣ್ಣ ಮತ್ತು ರೋಹಿಣಿ ಅವರ ನಡುವೆ ಜ’ಟಾಪಟಿ ನಡೆದಿತ್ತು‌

Advertisements
Advertisements

ಇನ್ನೂ ಮೈಸೂರಿನಲ್ಲಿ ಕೂಡ ಮೇಲ್ನೋಟಕ್ಕೆ ನೋಡುವುದಾದರೆ ಜಿಲ್ಲಾಧಿಕಾರಿಗಳ‌ ಅಫಿಶಿಯಲ್ ಅಥಿತಿ ಗೃಹದಲ್ಲಿ ಸ್ವಮ್ಮಿಂಗ್ ಪುಲ್ ನಿರ್ಮಾಣ ಮಾಡಿದ್ದನ್ನ ಕಾರಣ ಕೊಟ್ಟು ರೋಹಿಣಿ ಸಿಂಧೂರಿ ಅವರನ್ನ ಈಗ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಅದರೆ ಒಳಗೊಳಗೆ ರಾಜಕಾರಣಿಗಳು ಹಾಡಿರುವ ಆಟವೇ ಬೇರೆ ಮೈಸೂರಿನಲ್ಲಿ ಒಂದು ದೊಡ್ಡ ಅ’ಗಹರಣವನ್ನ ರೋಹಿಣಿ ಸಿಂಧೂರಿ ಅವರು ಇನ್ನೇನು ಬಯಲು ಮಾಡುವಲ್ಲಿ ಇದ್ದರೂ ಅಷ್ಟರಲ್ಲಿ ಅವರನ್ನ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ.. ಮತ್ತೆ ಇದೀಗ ಮೈಸೂರಿನಲ್ಲಿ ರೋಹಿಣಿ ಸಿಂಧೂರಿ ಅವರ‌ ಜಾಗಕ್ಕೆ ನೂತನವಾಗಿ ಅಧಿಕಾರಿಯಾಗಿ ಡಿ.ಸಿ ಗೌತಮ್ ಅವರನ್ನು ಮೈಸೂರಿನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ..

ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿಗೆ ನೂತನವಾಗಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಆಗಿರುವ ಡಾ. ಬಾಗಡಿ ಗೌತಮ್ ಅವರು ನಿಜಕ್ಕೂ ಯಾರು ಎನ್ನುವ ಕುತೂಹಲ‌ ಎಲ್ಲರಿಗೂ ಇದ್ದೇ ಇದೆ.. ಇನ್ನೂ‌ ಗೌತಮ್ ಅವರು ಈಗಾಗಲೇ ಜಿಲ್ಲಾಧಿಕಾರಿಯಾಗಿ ದಕ್ಷ ಪ್ರಾಮಾಣಿಕ ಅಧಿಕಾರಿ ಎಂದು ಹೆಸರು ಪಡೆದಿರುವ ಮಹಿಳಾ ಜಿಲ್ಲಾಧಿಕಾರಿ ಒಬ್ಬರ ಗಂಡ ಕೂಡ ಹೌದು.. ಗೌತಮ್ ಅವರು 2009ರ ಐ.ಎ.ಎಸ್ ಅಧಿಕಾರಿಗಳ ಬ್ಯಾಚ್ ನವರು ಇವರು ಇದಕ್ಕೂ ಮೊದಲು ಅಡಿಷನಲ್ ಕಮಿಷನರ್ ಆಫ್ ಕಮರ್ಷಿಯಲ್ ಟ್ಯಾಕ್ಸಸ್ ಆಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದರು.. ಇನ್ನೂ ಇವರು ಪತ್ನಿ ಕೂಡ ಐಎಎಸ್‌ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರು ಮತ್ಯಾರೂ ಅಲ್ಲ ಅಶ್ವಥಿ ಅವರು.

ಹೌದು ಅಶ್ವಥಿ ಅವರು ಈಗಾಗಲೇ ಬೇರೆಲ್ಲೂ ಅಲ್ಲ ಮೈಸೂರಿನ ಪಕ್ಕದ ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಈಗ ಪತಿ ಪತ್ನಿ ಇಬ್ಬರೂ ಕೂಡ ಅಕ್ಕಪಕ್ಕದ ಜಿಲ್ಲೆಯಲ್ಲಿಯೇ ಒಟ್ಟಿಗೆ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವ ಅವಕಾಶ ದೊರೆತಿದೆ.. ಇನ್ನೂ‌ ಒಟ್ಟಿನಲ್ಲಿ ಸುಮಾರು ವರ್ಷಗಳ ಕಾಲ ಕಷ್ಟಪಟ್ಟು ಓದಿ ಎಷ್ಟೇ ದೊಡ್ಡ ಅಧಿಕಾರಿ ಆದರೂ ಇಲ್ಲಿ‌ ರಾಜಕಾರಣಿಗಳ ಅಧಿಕಾರವೇ ಜಾಸ್ತಿ ಎನ್ನುವಂತಾಗಿದೆ.. ಇನ್ನೂ‌ ರೋಹಿಣಿ ಸಿಂಧೂರಿ ಅವರು ವಾಟ್ಸ್ ಆಪ್ ಮೂಲಕ ಮೈಸೂರಿನ ಜನತೆಗೆ ಧನ್ಯವಾದ ತಿಳಿಸಿದ್ದಾರೆ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಸಾಧ್ಯವಾದಷ್ಟು ಉತ್ತಮ ರೀತಿಯ ಕೆಲಸವನ್ನ ಮಾಡಿದ್ದೇನೆ ಮೈಸೂರಿನಲ್ಲಿ ನನಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದಕ್ಕೆ ಧನ್ಯವಾದಗಳು ಎಂದಿದ್ದಾರೆ.. ಸ್ನೇಹಿತರೆ ರೋಹಿಣಿ ಸಿಂಧೂರಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..