Advertisements

DSP ಹಾಗಿ ಅಧಿಕಾರಿ ಸ್ವೀಕರಿಸಿದ ದೇಶದ ಮೊದಲ ಖ್ಯಾತ ಅಥ್ಲೆಟಿಕ್ ಮಹಿಳೆ.! ಅವರ ಈ ಸಾಧನೆಗೆ ಸ್ಪೂರ್ತಿ ಯಾರು ಗೊತ್ತಾ? ನೀವೇ ನೋಡಿ..

Inspire

ನಮಸ್ತೆ ಸ್ನೇಹಿತರೆ, ಹೆಣ್ಣು ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋದಕ್ಕೆ ಇದೇ ನೋಡಿ ಸಾಕ್ಷಿ.. ಹೌದು ಸ್ನೇಹಿತರೆ, ದೇಶದಲ್ಲಿ ಪ್ರಥಮ ಬಾರಿಗೆ ತನ್ನ ಬಾಲ್ಯದ ಕನಸನ್ನು ಕ್ರೀಡೆಯ ಮೂಲಕ ನನಸಾಗಿಸಿಕೊಂಡ, ಹಿಮಾ ದಾಸ್, ಬಾಲ್ಯದಲ್ಲಿದ್ದಾಗಲೇ, ಅವರಿಗೆ ತಾನು ಮುಂದೊಂದು ದಿನ ಉನ್ನತ ಪೊಲೀಸ್‌ ಅಧಿಕಾರಿಯಾಗಬೇಕು ಎಂಬ ಕನಸು ಕಂಡಿದ್ದರಂತೆ, ಇದೀಗ ಬಡತನದ ಬೇಗೆಯಿಂದ ಬೆಂದು ತನ್ನ ಓಟದ ಸ್ಪರ್ಧೆಯ ಮೂಲಕವೇ ಇಡೀ ದೇಶದ ಮನೆಮಗಳಾಗಿ ಗುರುತಿಸಿಕೊಂಡಿದ ಇವರು ಈಗ ತಾನು ಬಾಲ್ಯದಲ್ಲಿ ಕಂಡ ಕನಸನ್ನು ಡಿಎಸ್‌ಪಿ ಹುದ್ದೆ ಪಡೆಯುವ ಮೂಲಕ ತಮ್ಮ ಸುಂದರ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ..

[widget id=”custom_html-2″]

Advertisements
Advertisements

ಇನ್ನು 2018ರಲ್ಲಿ ಹಿಮಾ ದಾಸ್‌ ಅವರು ವಿಶ್ವ ಕಿರಿಯರ ಚಾಂಪಿಯನ್‌ ಶಿಪ್‌ನಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಾಂಪಿಯನ್‌ ಆಗುವ ಮೂಲಕ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತ ಸಾಧನೆ ಮಾಡಿದ್ದರು. ಅಲ್ಲದೇ ಪ್ರತಿಯೊಬ್ಬ ಮಹಿಳೆಯಾರಿಗೂ ಕೂಡ ಮಾದರಿಯಾದರು.. ಇದಲ್ಲದೆ ಹಿಮಾ ದಾಸ್ ಅವರು ಜಕಾರ್ತಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನ ಮಹಿಳೆಯರ 4400 ಮೀಟರ್‌ ರಿಲೇ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆ ಚಿನ್ನದ ಪದಕವನ್ನು ಗೆದ್ದುಕೊಂಟಿದ್ದು ಅಲ್ಲದೇ ಆ ತಂಡದ ಸದಸ್ಯರಾಗಿ ಆಯ್ಕೆಯಾದರು.. ಇದರ ಮದ್ಯದಲ್ಲಿ ತನ್ನ ಬಾಲ್ಯದ ಪೋಲಿಸ್ ಅಧಿಕಾರಿ ಆಗುವ ಕನಸನ್ನು, ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ ದೇಶದ ಹೆಮ್ಮೆಯ ಕ್ರೀಡಾಪಟುವಿನಿಂದ ಆಯ್ಕೆಯಾದ ಹಿಮಾ ದಾಸ್ ಅವರಿಗೆ ಅಸ್ಸಾಂ ನ ಡಿ ಎಸ್ ಪಿ ಹಾಗಿ ನೇಮಕಾತಿ ಪತ್ರ ಕೊಡುವ ಮೂಲಕ ಅವರಿಗೆ ಸನ್ಮಾನ ಮಾಡಲಾಯಿತು..

[widget id=”custom_html-2″]

ಹಿಮಾ ದಾಸ್ ಅವರು ಅಧಿಕಾರವನ್ನು ಸ್ವೀಕರಿಸಿ ಮೇಲೆ ತನ್ನ ಸಾಧನೆ ಬಗ್ಗೆ ಹೇಳಿದ್ದೇನು ಗೊತ್ತಾ,? ‘ನಾನು ಬಾಲ್ಯದಲ್ಲಿ ಶಾಲೆಗೆ ಹೋಗುವಾಗಲ್ಲೇ ದೇಶದ ಉನ್ನತ ಪೋಲಿಸ್ ಅಧಿಕಾರಿಯಾಗಬೇಕು ಎಂಬ ಕನಸನ್ನು ಕಂಡಿದ್ದೆ, ನಮ್ಮ ಅಮ್ಮ ಕೂಡ ನನ್ನ ಕನಸು ನನಸಾಗಲ್ಲಿ‌ ಎಂದು ಹಾರೈಸಿದ್ದರು.‌ ಅಲ್ಲದೇ ದುರ್ಗಾದೇವಿ ಪೂಜೆ ಮಾಡುವ ಸಮಯದಲ್ಲಿ ನಮ್ಮ ತಾಯಿ ನನಗೆ ಆಟಿಕೆಯ ಗನ್ ಅನ್ನು ಕೊಟ್ಟಿದ್ದರು, ಆಟಿಕೆಯ ಗನ್ ಅನ್ನು ಕೊಟ್ಟು ಮುಂದೊಂದು ದಿನ ನಿನ್ನ ಕನಸು ನ‌ನಸಾದ ಮೇಲೆ ಜನರಿಗೆ ಒಳ್ಳೆಯ ಪೋಲಿಸ್ ಅಧಿಕಾರಿಯಾಗಿ ಸೇವೆ ಮಾಡು ಎಂದು ನನಗೆ ಪ್ರೋತ್ಸಾಹ ನೀಡಿದರು ಎಂದು ಹಿಮಾ ದಾಸ್ ಅವರು ತನ್ನ ಮನದಾಳದ ಮಾತನ್ನೂ ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.. ಸ್ನೇಹಿತರೆ ಹಿಮಾ ದಾಸ್ ಅವರ ಈ ಸಾಧನೆಯು ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..