Advertisements

ಕೃಷಿಯಲ್ಲಿ ಹೊಸ ಟೆಕ್ನಿಕ್ ಬಳಸಿ ವ್ಯವಸಾಯ ಮಾಡಿದ ಇಂಜಿನಿಯರಿಂಗ್ ಮಹಿಳೆ.! ಇವರು ಮಾಡಿದ ಕೃಷಿಯ ಬೆಳೆಗೆ ವಿದೇಶದಲ್ಲಿ ಕೂಡ ಬಾರಿ ಬೇಡಿಕೆ..

Inspire

ನಮಸ್ತೆ ಸ್ನೇಹಿತರೆ, ಸಮಾನ್ಯವಾಗಿ ಪ್ರತಿಯೊಬ್ಬ ತಂದೆ ತಾಯಿಯರು ಕೂಡ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೋಡಿಸಬೇಕು, ಹಾಗೆಯೇ ಅವರು ಒಳ್ಳೆಯ ಕೆಲಸಗಳಿಗೆ ಹೋಗಬೇಕು, ನಾವು ಪಟ್ಟ ಕಷ್ಟವನ್ನು ಮಕ್ಕಳು ಅನುಭವಿಸಬಾರದು ಎಂದು 80% ನಷ್ಟು ಜನರು ಯೋಚನೆ ಮಾಡುತ್ತಾರೆ.. ಯಾಕೆ ಇವರು ಈ ರೀತಿ ಯೋಚನೆ ಮಾಡುತ್ತಾರೆ ಎಂದರೆ ‘ವ್ಯವಸಾಯ ಅಂದರೆ ಕಷ್ಟದ ಜೀವನ ಒಂದು ವೇಳೆ ಕಷ್ಟ ಪಟ್ಟು ದುಡಿದರು ಕೈಗೆ ಹಣ ಸಿಗುವುದಿಲ್ಲ, ಜೀವನ ಉತ್ತಮ ರೀತಿಯಲ್ಲಿ ನಡೆಸಲು ಸಾಧ್ಯವಾಗುವುದಿಲ್ಲ ಎಂದು, ಆದರೆ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ವ್ಯವಸಾಯ ಮಾಡಿಕೊಂಡು ಐಶಾರಾಮಿಯಾಗಿ ಜೀವನ ಮಾಡುತ್ತಿದ್ದಾರೆ..‌ ಇನ್ನು ಬೇರೆ ಬೇರೆ ದೇಶದ ಜನರು ಈ ವ್ಯವಸಾಯದಲ್ಲಿ ಕೋಟಿ ಗಟ್ಟಲೆ ಲಾಭಗಳನ್ನು ಗಳಿಸುತ್ತಾ ವಿಭಿನ್ನ ರೀತಿಯಲ್ಲಿ ವ್ಯವಸಾಯ ಪದ್ದತಿಯನ್ನು ಅನುಸರಿಸುತ್ತಾ ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್ ರೀತಿಯಲ್ಲಿ ಬದುಕುತ್ತಿದ್ದಾರೆ..

[widget id=”custom_html-2″]

Advertisements
Advertisements

ಯಾಕೆಂದರೆ ವಿದೇಶದ ಜನರು ವ್ಯವಸಾಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ, ಸುಮಾರು 70 ವರ್ಷಗಳ ಹಿಂದೆ ಮಾಡುತ್ತಿದ್ದ ವ್ಯವಸಾಯ ಪದ್ದತಿಯನ್ನು ಅನುಸರಿಸುತ್ತಾ, ಈಗಲೂ ಅದೇರೀತಿ ವ್ಯವಸಾಯ ಮಾಡುತ್ತಾ, ಹಿಂದಿನ ಕಾಲದ ಹಾಗೆ ವ್ಯವಸಾಯದಲ್ಲಿ ಹಿಂದೆ ಹೋಗಿದ್ದೇವೆ, ಸುಮಾರು ವರ್ಷಗಳ ಹಿಂದೆ ಕುದುರೆ ಗಾಡಿ, ಎತ್ತಿನ ಗಾಡಿಯಲ್ಲಿ, ಪ್ರಯಾಣ ಮಾಡುತ್ತಿದ್ದರು, ಈಗ ಕಾರು, ಬೈಕ್, ವಿಮಾನ, ಈಗೆ ನಾನಾ ರೀತಿಯ ಹೊಸ ಪದ್ದತಿಗಳಿಗೆ ಎಲ್ಲರು ಹೊಂದಿಕೊಳ್ಳುತ್ತಿದ್ದೇವೆ, ಈ ಪದ್ದತಿಯನ್ನು ಅನುಸರಿಸಿದ ಈ ಹುಡುಗಿ ತನಗೆ ಬರುತ್ತಿದ್ದ ಲಕ್ಷ ಲಕ್ಷ ಸಂಪಾದನೆಯನ್ನು ಬಿಟ್ಟು ವ್ಯವಸಾಯ ಮಾಡುವುದರಲ್ಲಿ ಯಾವ ರೀತಿ ಯಶಸ್ಸು ಸಾಧಿಸಿದ್ದಾರೆ ಗೊತ್ತಾ.. ನೋಡೋಣ ಬನ್ನಿ, ಈ ಮಹಿಳೆಯ ಹೆಸರು ವಲ್ಲಾರಿ ಚಂದ್ರಕರ್ ಇವರು ಛತ್ತಿಸ್ಗಢ ರಾಜ್ಯದವರು, ಇವರು ತಮ್ಮ ವಿದ್ಯಾಭ್ಯಾಸದಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಟೆಕ್ ಮಾಡಿದರು, ವಲ್ಲಾರಿ ಚಂದ್ರಕರ್ ಅವರಿಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಪಡೆಯುವ ಕೆಲಸ ಸಿಕ್ಕಿತು..

[widget id=”custom_html-2″]

ಆದರೆ ಅವರಿಗೆ ಕಂಪನಿಗಳಲ್ಲಿ ಕೆಲಸ ಮಾಡಲು ಇಷ್ಟ ಇಲ್ಲದೆ ಒಂದಷ್ಟು ತಿಂಗಳುಗಳ ಕಾಲ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.. ಇನ್ನು ರಾಯಪುರ್ ನಿಂದ ತಮ್ಮ ಹಳ್ಳಿಗೆ ಪ್ರಯಾಣ ಮಾಡುತ್ತಿದ್ದ ವಲ್ಲಾರಿ ಚಂದ್ರಕರ್ ಅವರು ಅಲ್ಲಿನ ವ್ಯವಸಾಯದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡರು.. ಆಗ ವಲ್ಲಾರಿ ಚಂದ್ರಕರ್ ಅವರು ತನ್ನ ತಂದೆಯ ಬಳಿ ಹೋಗಿ ನನಗೆ ಒಂದಷ್ಟು ಜಮೀನನ್ನು ಖರೀದಿ ಮಾಡಿಕೊಡಿ ಎಂದು ಕೇಳಿದರು, ನಂತರ ವ್ಯವಸಾಯ ಮಾಡುವುದಕ್ಕೆ ಬಂದ ವಲ್ಲಾರಿ ಚಂದ್ರಕರ್ ಅವರನ್ನು ನೋಡಿದ ಅಲ್ಲಿನ ಜನ ಇವರು ಅನಕ್ಷರಸ್ಥ ಇರಬೇಕೆಂದು ಅವರ ಬಗ್ಗೆ ಟೀಕೆ ಮಾಡಿದರು, ಆದರೆ ವಲ್ಲಾರಿ ಚಂದ್ರಕರ್ ಅವರ ತಂದೆ ಮಗಳ ಆಸೆಯಂತೆ 15 ಎಕರೆ ಭೂಮಿಯನ್ನು ಖರೀದಿ ಮಾಡಿ ವಲ್ಲಾರಿ‌ ಅವರಿಗೆ ನೀಡಿದರು.. ನಂತರ 15 ಎಕರೆ ಇರುವ ಜಮೀನನ್ನು ನೋಡಿದ ಈ ಮಹಿಳೆ ವ್ಯವಸಾಯ ಮಾಡುವುದಕ್ಕೆ ವಿಭಿನ್ನ ರೀತಿಯ ಆಲೋಚನೆ ಮಾಡಿದ ಈ ಮಹಿಳೆ,

[widget id=”custom_html-2″]

ರೈತರು ಹಿಂದಿನ ಕಾಲದ ವ್ಯವಸಾಯ ಪದ್ದತಿಯನ್ನು ಅನುಸರಿಸದೆ, ಕಾಲಕ್ಕೆ ತಕ್ಕಂತೆ ಹೊಸ ಪದ್ದತಿಯಲ್ಲಿ ವ್ಯವಸಾಯ ಮಾಡಬೇಕು ಎಂದು ಆಲೋಚನೆ ಮಾಡಿದರು.. ನಂತರ ಅಧುನಿಕ ವ್ಯವಸಾಯ ಪದ್ದತಿಯ ಬಗ್ಗೆ ಒಂದಷ್ಟು ಮಾಹಿತಿಯನ್ನು ಸಂಗ್ರಹಣೆ ಮಾಡಿ, ಇಸ್ರೇಲ್, ಥೈಲ್ಯಾಂಡ್, ದೇಶಗಳಲ್ಲಿ ಮಾಡುತ್ತಿದ್ದ ವ್ಯವಸಾಯ ಪದ್ದತಿಯನ್ನು ನೋಡಿ ಆ ಪದ್ದತಿಯಲ್ಲಿ ವ್ಯವಸಾಯ ಮಾಡಲು ಶುರುಮಾಡಿದರು.. ‘ಎಲ್ಲಿ ಸತತ ಪ್ರಯತ್ನ ಇರುತ್ತೊ ಅಲ್ಲಿ ಫಲ ಇದೆ ಇರುತ್ತದೆ ಎನ್ನುವ ಹಾಗೆ’ ‌ವಲ್ಲಾರಿಗೆ ವ್ಯವಸಾಯದಲ್ಲಿ ಒಂದೆರಡು ತಿಂಗಳು ಕಷ್ಟವಾಯಿತು, ನಂತರ ವ್ಯವಸಾಯ ಮಾಡುವ ವಿಧಾನವನ್ನು ಕಲಿತುಕೊಂಡರು, ಹೊಸ ವ್ಯವಸಾಯ ಪದ್ದತಿಯಲ್ಲಿ ಟೊಮ್ಯಾಟೊ, ಬೀನ್ಸ್, ಹಾಗಲಕಾಯಿ‌, ಕ್ಯಾಪ್ಸಿಕಂ ನಂತಹ ವಿವಿಧ ರೀತಿಯ ಬೆಳೆಯನ್ನು ಬೆಳೆಯಲು ಶುರುಮಾಡಿ ಅದರಲ್ಲಿ ಯಶಸ್ಸನ್ನು ಸಾಧಿಸಿದರು..

ಈಗೆ ವಿದೇಶಿ ವ್ಯವಸಾಯ ಪದ್ದತಿಯಲ್ಲಿ ಒಳ್ಳೆಯ ಇಳುವರಿಯನ್ನು ತೆಗೆಯುತ್ತಿದ್ದರು ವಲ್ಲಾರಿ, ನಂತರ ಉತ್ತಮವಾಗಿ ಬಂದ ಬೆಳೆಯನ್ನು ಬೇರೆ ಬೇರೆ ನಗರಗಳಲ್ಲಿ ಮಾರಾಟ ಮಾಡುತ್ತಿದ್ದರು.. ‌ಇನ್ನು ವಲ್ಲಾರಿ ಅವರು ಬೆಳೆಯುತ್ತಿರುವ ತರಕಾರಿಗಳು ಉತ್ತಮ ಗುಣಮಟ್ಟ ಹೊಂದಿದ್ದು ಇಸ್ರೇಲ್ ನಿಂದ ಕೂಡ ಈ‌ ತರಕಾರಿಗಳಿಗೆ ಆರ್ಡರ್ ಗಳು ಬರುತ್ತಿದ್ದವು.. ಅದರಿಂದ ಲಕ್ಷಾಂತರ ರೂಪಾಯಿ ಹಣವನ್ನು ಗಳಿಸುತ್ತಿದ್ದರು ವಲ್ಲಾರಿ ಅವರು.. ನಮ್ಮ ರೈತರು ಕೂಡ ವ್ಯವಸಾಯದಲ್ಲಿ ಹೊಸ ಪದ್ದತಿಯನ್ನು ಅಳವಡಿಸಿ ಕೊಂಡರೆ ಅವರು ಕೂಡ ಈ ಮಹಿಳೆಯ ರೀತಿ ಹಣವನ್ನು ಸಂಪಾದನೆ ಮಾಡಬಹುದು.. ಸ್ನೇಹಿತರೆ ವ್ಯವಸಾಯವನ್ನು ಈ ರೀತಿ ಕೂಡ ಮಾಡಬಹುದು ಎಂದು ತೋರಿಸಿ ಕೊಟ್ಟ ವಲ್ಲಾರಿ ಚಂದ್ರಕರ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..