Advertisements

ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಈ ಖ್ಯಾತ ನಟಿಯರು ಯಾರು ಗೊತ್ತಾ.? ಇವರ ಜೀವನ ನೋಡಿದ್ರೆ‌ ಆಶ್ಚರ್ಯ ಪಡ್ತೀರಾ..

Cinema

ನಮಸ್ತೆ ಸ್ನೇಹಿತರೆ, ‌ಈ‌ ಪ್ರಪಂಚದಲ್ಲಿ ಏನೇ ನಿಂತರು‌ ಸಮಯ ಮಾತ್ರ ನಿಲ್ಲೋದಿಲ್ಲ.. ಅದರ ಜೊತೆ ಓಡುವ ನಮ್ಮ‌ ಜೀವನ ಕೂಡ ನಿಲ್ಲೋದಿಲ್ಲ, ಆಗಾಗಿ ಹೊಟ್ಟೆ ತುಂಬಿಸಿ ಕೊಳ್ಳಲು ಸಲುವಾಗಿ, ಜೀವನದಲ್ಲಿ ಏನಾದರೂ ಒಂದು ಕೆಲಸ ಮಾಡಲೇಬೇಕು.. ಈಗೆ ಪರಿಸ್ಥಿತಿಯನ್ನು ಎದುರಿಸಿ, ನಾವು ಸ್ಟಾರ್ ನಟರು ಎನ್ನುವ ಮನೋಭಾವ ಇಲ್ಲದೆ ಗಂಡಸರು ಓಡಿಸುವ ಹಾಗೆ ಆಟೋವನ್ನು ಓಡಿಸಿ ತಮ್ಮ ಕುಟುಂಬವನ್ನು ನಡೆಸುತ್ತಿರುವ ಈ ಖ್ಯಾತ ನಟಿಯರು ಯಾರೆಂದು ನೋಡೋಣ ಬನ್ನಿ.. ಮಲೆಯಾಳಂ ಚಿತ್ರಗಳಲ್ಲಿ ಹಲವಾರು‌ ಸಿನಿಮಾಗಳಲ್ಲಿ ನಟಿಸಿರುವ ನಟಿ ಅನೀಸ್ ಸಿನಿಮಾ ಆಕ್ಟಿಂಗ್ ಇಲ್ಲದಿದ್ದಾಗ ಬಿಡುವಿನ ಸಮಯದಲ್ಲಿ ಆಟೋರಿಕ್ಷವನ್ನು ಓಡಿಸಿ ಒಂದಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ..

Advertisements
Advertisements

ಅಲ್ಲದೆ ತಮ್ಮ ಮಕ್ಕಳನ್ನು ಓದಿಸಲು ಅವರಿಗೆ ಉತ್ತಮ ಜೀವನವನ್ನು ರೂಪಿಸಲು ಸಿನಿಮಾ ನಟನೆಯಿಂದ ಬರುವ ಹಣ ಸಾಕಾಗುವುದಿಲ್ಲ ಎಂದು ಕೊಚ್ಚಿ ನಗರದಲ್ಲಿ ಆಟೋರಿಕ್ಷ ಓಡಿಸುತ್ತಾ‌ ತಮ್ಮ ಮಕ್ಕಳಿಗೆ ಒಳ್ಳೆಯ ಕಡೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.. ತನ್ನ ಕುಟುಂಬದ ಪೋಷಣೆಗಾಗಿ ಆರೋಗ್ಯದ ಸಮಸ್ಯೆಯಲ್ಲಿ ಸಿಲುಕಿದ ತಮ್ಮ ಅಕ್ಕನನ್ನು ನೋಡಿಕೊಳ್ಳುವ ಸಲುವಾಗಿ ಆಟೋರಿಕ್ಷ ಓಡಿಸುತ್ತಿರುವ ಮರಾಠಿಯ ನಟಿ ಲಕ್ಷ್ಮೀ ಅವರು ಸುಮಾರು ವರ್ಷಗಳ ಹಲವಾರು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಪಡೆದಿದ್ದರು.. ಆದರೆ ನಟನೆಯಿಂದ ಬರುತ್ತಿದ್ದ ಹಣ ಪ್ರತಿನಿತ್ಯ ಸಮಸ್ಯೆಯು ಇರುವ ತನ್ನ ಕುಟುಂಬವನ್ನು ನೋಡಿಕೊಳ್ಳಲು ಸಾಕಾಗುತ್ತಿರಲಿಲ್ಲ.. ಈಗಾಗಿ ನಟನೆಯ ಜೊತೆಗೆ ಆಟೋಕೂಡ ಓಡಿಸುತ್ತಿರುವ ನಟಿ ಲಕ್ಷ್ಮೀ ಅವರು..

ಸ್ವಾವಲಂಬನೆಯಿಂದ ತಮ್ಮ ಮನೆಯವರನ್ನು ಸಂತೋಷವಾಗಿ‌ ಇರಿಸಿದ್ದಾರೆ.. ರಂಗ್ ಬದಲ್ತೆ ಓದನಿ, ಚಂದ್ರಗುಪ್ತ ಮೌರ್ಯ ದಂತಹ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿರುವ ಈ ಖ್ಯಾತ ನಟಿ‌ ಯಶಸ್ರೀ ಮುಸುರುಕರ್‌ ಅವರು ಕಾರಿನ ಸಹವಾಸ ಬೇಡ ಎಂದು ತನ್ನ ಕಾರ್ ಅನ್ನು ಮಾರಾಟ ಮಾಡಿ‌ ಆಟೋರಿಕ್ಷವನ್ನ ತೆಗೆದು ಕೊಂಡಿದ್ದಾರೆ.. ಶೂಟಿಂಗ್ ಸೆಟ್ ಗು ಹಾಗು ಇತರ ಸ್ಥಳಗಳಿಗೆ ಆಟೋದಲ್ಲಿ ಹೋಗುವ ಈ ನಟಿ ರಸ್ತೆಯ ಮಧ್ಯದಲ್ಲಿ ಯಾರಾದರೂ ಡ್ರಾಪ್ ಕೇಳಿದ್ರೆ ಅವರನ್ನು ಕೂಡ ಕರೆದುಕೊಂಡು ಹೋಗುತ್ತಿದ್ದರು.. ರಸ್ತೆಯಲ್ಲಿ ಆಟೋ ಚಾಲನೆ ಮಾಡುವಾಗ ಜನರು ಈ ನಟಿಯನ್ನು ವಿಚಿತ್ರವಾಗಿ ನೀಡುತ್ತಿದ್ದರು.. ಯಾವುದಕ್ಕೂ ಲೆಕ್ಕಿಸದೆ ಮುಂಬೈನಲ್ಲಿ ಎಲ್ಲಿ ಬೇಕಾದರೂ ಹೋಗಬೇಕು ಎಂದರೆ ಆಟೋ ಓಡಿಸುಕೊಂಡೆ ಹೋಗುತ್ತಿದ್ದರು..

ಈ ನಟಿ ದುಡಿಯುವುದಕ್ಕೆ‌ ಆಟೋ ಓಡಿಸದಿದ್ದರು ದುಡಿಯುವ ಸ್ಥಳಕ್ಕೆ ಆಟೋವನ್ನು ಓಡಿಸಿಕೊಂಡು ಹೋಗಿ ಕಾರ್ ಮತ್ತು ಕಾರ್ ಡ್ರೈವರ್ ವೆಚ್ಚ ಇಲ್ಲದಂತೆ ಮಾಡಿಕೊಂಡಿದ್ದಾರೆ.. ನಾನು ನಟಿ ನಾನು ಆಟೋ ಓಡಿಸಿದ್ದರೆ‌ ನನ್ನ ಸ್ಟೇಟಸ್ ಏನಾಗುತ್ತದೆ ಎಂದು ಆಲೋಚನೆ ಮಾಡದೆ ಕಷ್ಟದಲ್ಲಿ ಕೂಡ ಸ್ವಾವಲಂಬನೆಯಾಗಿ ಬದುಕುತ್ತಿರುವ ಈ ನಟಿಯರ ಆತ್ಮ ಸ್ಥೈರ್ಯವನ್ನು ಮೆಚ್ಚಲೇಬೇಕು.. ಸ್ನೇಹಿತರೆ ಈ ನಟಿಯರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..