Advertisements

ತನ್ನ 2 ಎಕರೆ ಜಮೀನಿನಲ್ಲಿ ಈ ರೈತ ವರ್ಷಕ್ಕೆ 22 ಲಕ್ಷ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ.! ಅದು ಹೇಗೆ ಗೊತ್ತಾ ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ನಾನು ಇಂಜಿನಿಯರಿಂಗ್ ಆಗಬೇಕು, ಲಾಯರ್ ಹೋಗಬೇಕು ಅಂತ ಕನಸು ಕಾಣುತ್ತಾರ, ಅಲ್ಲದೇ ಹುಟ್ಟಿದರೆ ದೊಡ್ಡ ದೊಡ್ಡ ವ್ಯಕ್ತಿಗಳ ಮನೆಯಲ್ಲಿ ಹುಟ್ಟಬೇಕು ಎಂದು ಆಲೋಚನೆ ಮಾಡುತ್ತಾರೆ, ಆದರೆ ಯಾರು ಕೂಡ ದೇಶಕ್ಕೆ ಅನ್ನ ನೀಡುವ ರೈತನ ಮಗನಾಗಿ ಹಾಗು ರೈತನಾಗಿ ಕೇಲಸ ಮಾಡಬೇಕು ಎಂದು ಯಾರು ಕೂಡ ಯೋಚನೆ ಮಾಡೋದಿಲ್ಲ, ಈಗಿನ ಪ್ರಪಂಚದಲ್ಲಿ ನಾವು ರೈತರ ಮಕ್ಕಳು ಎಂದು ಯಾರು ಕೂಡ ಹೇಳಿಕೊಳ್ಳುವುದಿಲ್ಲ, ಯಾಕೆಂದರೆ ಅದಕ್ಕೆ ಕಾರಣ ಈ ಸಮಜದ ಪರಿಸ್ಥಿತಿ.. ರೈತ ಅಂದರೆ ಅವರ ಬಳಿ ಹಣ ಇರೋದಿಲ್ಲ, ಎನ್ನುವ ಭಾವನೆ..

[widget id=”custom_html-2″]

Advertisements
Advertisements

ಅಷ್ಟೇ ಯಾಕೆ ರೈತರ ಮಕ್ಕಳಿಗೆ ಹುಡುಗಿ ಕೂಡಾ ಕೊಡೋದಿಲ್ಲ, ಅದರೆ ಈಗಿನ ಸಮಾಜಕ್ಕೆ ಗೊತ್ತಿಲ್ಲದ ವಿಷಯ ಏನೆಂದರೆ, ಪ್ರತಿಯೊಬ್ಬ ರೈತ ಒಬ್ಬ ವಿಜ್ಞಾನ ಆಗಿರುತ್ತಾನೆ.. ಈ ರೈತ ಕೂಡ ಹಾಗೆ ಪ್ರಾರಂಭದಲ್ಲಿ ನಷ್ಟ ಹಾಗು ಸೋಲನ್ನು ಕಂಡರು ಆ ಸೋಲಿನಿಂದ ಪಾಠ ಕಲಿತು ಈಗ ಮತ್ತೊಬ್ಬರಿಗೆ ಮಾದರಿ ರೈತನಾಗಿ ಬೆಳೆದಿದ್ದಾನೆ.. ಹೌದು ದೊಡ್ಡಬಳ್ಳಾಪುರದ ಈ ರೈತನ ಹೆಸರು ಸದಾನಂದ, ಇವರು ಕೂಡ ಪ್ರಾರಂಭದಲ್ಲಿ ಎಲ್ಲಾ ರೈತರು ಮಾಡುವಂತೆ ತಿಳಿಯದೆ ಕೆಲವು ತಪ್ಪುಗಳನ್ನು ಮಾಡಿದರು, ಆ ತಪ್ಪುಗಳು ಯಾವುವು ಗೊತ್ತಾ,? ಸಾಮಾನ್ಯವಾಗಿ ನಮ್ಮ ರೈತರು ಹೆಚ್ಚಾಗಿ ತೋಟದ ಅಕ್ಕಪಕ್ಕದಲ್ಲಿ ಯಾರಾದರೂ ಆದರೆ ಟೊಮ್ಯಾಟೊ ಹೀರೇಕಾಯಿ ಇಂತಹ ಬೆಳೆಗಳನ್ನು ಬೆಳೆದರೆ ಅದನ್ನು ನೋಡಿ ಅವರು ಕೂಡ ಅದೆ ಬೆಳೆಯನ್ನು ಬೆಳೆಯುತ್ತಿದ್ದರು..

[widget id=”custom_html-2″]

ಅಲ್ಲದೇ ಇರುವ ಜಮೀನಿನಲ್ಲಿ ಪೂರ್ತಿಯಾಗಿ ಒಂದೇ ಬೆಳೆಯನ್ನು ಬೆಳೆಯುತ್ತಾರೆ, ಆದರೆ ರೈತರು ಕೃಷಿ ಮಾಡುವಾಗ ಈ ಎರಡು ಉಪಾಯಗಳನ್ನು ಮಾಡಬಾರದ ಕೃಷಿಯಲ್ಲಿ ಈ ರೀತಿ ಮಾಡಿದ್ದರೆ ತುಂಬಾನೇ ಅಪಾಯಕಾರಿ, ಯಾಕೆಂದರೆ ಯಾರಾದರೂ ಟೊಮ್ಯಾಟೊ ಬೆಳೆ ಹಾಕಿದರೆ ಅಂತ ನಾವು ಕೂಡ ಅದೆ ಬೆಳೆ ಹಾಕಿದರೆ ಉತ್ಪಾದನೆ ಹೆಚ್ಚಾಗಿ, ಅದರ ಬೆಲೆ ಪಾತಾಳಕ್ಕೆ ಕೂಸಿಯಬಹುದು.. ಇರುವ ಜಮೀನಿಗೆ ಒಂದೇ ರೀತಿಯ ಬೆಳೆ ಹಾಗಿದ್ದರೆ, ಒಂದೊಂದು ಬಾರಿ ಆ ಬೆಳೆ ನಮ್ಮ ಕೈ ಹಿಡಿಯುತ್ತದೆ ಆದರೆ ಹೆಚ್ಚು ಬಾರಿ ಅದೆ ಬೆಳೆ ನಮ್ಮ ಕೈ ಸುಡುತ್ತದೆ, ಹೇಗೆ ಮಾಡಿದ್ದರೆ ಕೃಷಿಯ ಮೇಲೆ ನಂಬಿಕೆ ಕಳೆದುಹೋಗುತ್ತದೆ.. ಇನ್ನು ಪ್ರಾರಂಭದಲ್ಲಿ ಇಂತಹ ತಪ್ಪುಗಳನ್ನು ಮಾಡಿದ ಸದಾನಂದ ಅವರು ಕೂಡ ಕೈ ಸುಟ್ಟು ಕೊಂಡರು..

[widget id=”custom_html-2″]

ಈ ರೀತಿ ಆದರೆ ಜೀವನ ಸಾಗಿಸೋದು ತುಂಬಾ ಕಷ್ಟ ಎಂದಿದ ಸದಾನಂದ ಅವರು ಒಂದು ಉಪಾಯ ಮಾಡಿದರು, ಅದು‌ ಎನ್ನು ಅಂದರೆ ತನ್ನಗಿರುವ ಎರಡು ಎಕರೆ ಜಮೀನನ್ನು ವ್ಯವಸ್ಥಿತವಾಗಿ ವಿಂಗಡಿಸಿ, ಅದಕ್ಕೆ ಕೆಲವು ಅಡಿಕೆ ಹಾಗು ತೆಂಗಿನ ಮರಗಳನ್ನು ಹಾಕಿ ಬೆಳೆಸಿದರು.. ಒಂದು ತಿಂಗಳಾದ ನಂತರ ಶುಂಠಿ ಬೆಳೆ ಸಪೋಟ‌ ಬೆಳೆ, ಅನಂತರ ಟೊಮ್ಯಾಟೊ ಕ್ಯಾಪ್ಸಿಕಂ, ಈಗೆ ಕಾಲಕ್ಕೆ ತಕ್ಕಂತೆ ಸುಮಾರು ೩೦ ರೀತಿಯ ಬೆಳೆಯನ್ನು ಬೆಳೆಯುತ್ತಿದ್ದರು.. ಸದಾನಂದ ಅವರ ಉಪಾಯ ಹೇಗಿತ್ತು ಅಂದರೆ, ಈ ತಿಂಗಳು ಸಪೋಟೋ ಬೆಳೆ ಬಂದರೆ, ಮುಂದಿನ ತಿಂಗಳು ಶುಂಠಿ ಬೆಳೆ ಬರುತ್ತಿತ್ತು..

ಹಾಗೆ ಪ್ರತಿ ತಿಂಗಳು ತನ್ನ ಕೈಗೆ ಹಣ ಬರುವಂತೆ ಮಾಡಿಕೊಂಡರು ಸದಾನಂದ ಅವರು, ಇನ್ನು ಇದರಲ್ಲಿ ಇರುವ ದೊಡ್ಡ ಲಾಭ ಎನೆಂದರೆ, ಟೊಮ್ಯಾಟೊದಲ್ಲಿ ನಷ್ಟ ಆದರೆ ಈರುಳ್ಳಿಯಲ್ಲಿ ‌ಲಾಭ ಸಿಗುತ್ತದೆ.. ಈ ರೀತಿ ಮಾಡಿದಾಗ ಒಂದರಲ್ಲಿ ನಷ್ಟವಾದರೆ ಮತ್ತೊಂದರಲ್ಲಿ ಲಾಭ ಆಗುತ್ತಿತ್ತು, ಇದು ಸದಾನಂದ ಅವರ ಉಪಾಯವಾಗಿತ್ತು, ಈಗೆ ವಿವಿಧ ರೀತಿಯ ಬೆಳೆಯಿಂದ ವರ್ಷಕ್ಕೆ ಸುಮಾರು ೨೨ಲಕ್ಷದಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ‌ ಸದಾನಂದ ಅವರು.. ಕೃಷಿ ಅನ್ನೋಂದು‌ ಸಂಶೋಧನೆಯ ಆವಿಷ್ಕಾರ ಇದ್ದ ಹಾಗೆ, ಅದಕ್ಕೆ ಯಾವುದೇ ಸೀಮಿತ ಮಿತಿ ಕೂಡ ಇಲ್ಲ.. ಹೊಸ ಹೊಸ ಪ್ರಯೋಗಗಳು ಮಾಡುವುದರಿಂದ ಹೊಸ ವಿಧಾನ ಕಂಡುಹಿಡಿಯ ಬಹುದಾಗಿದೆ.. ಸ್ನೇಹಿತರೆ ಸದಾನಂದ ಅವರು ಈ ಕೃಷಿ ಬೆಳೆ ಬೆಳೆಯಲು ಬಳಸಿದ ಉಪಾಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..