Advertisements

ಹಣ ಕೊಟ್ಟು ಅಜ್ಜಿಯ ಬಳಿ ಹಣ್ಣನ್ನು ಪಡೆದು ನಂತರ ಅಜ್ಜಿಗೆ ಬಯ್ಯುತ್ತಿದ್ದ ವ್ಯಕ್ತಿಗೆ! ಈ ಅಜ್ಜಿ ಮಾಡಿದ್ದೇನು ಗೊತ್ತಾ? ನೀವೇ ನೋಡಿ…

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ‌ ಮನುಷ್ಯರು ತುಂಬಾನೇ ಸ್ವಾರ್ಥಿಗಳಾಗಿದ್ದಾರೆ.. ಈಗ ಜನಗಳು ತಾವಾಯಿತು ತಮ್ಮ ಕೆಲಸವಾಯಿತು ತಮ್ಮ ಕುಟುಂಬ ವಾಯಿತು ಎನ್ನುವಷ್ಟರಲ್ಲೇ ಇರುತ್ತಾರೆ.. ಆದರೆ ಹೊರಗಿನ ಜನರ ಬಗ್ಗೆ ಯಾರು ಕೂಡ ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ಮೋಹನ್ ಎನ್ನುವ ವ್ಯಕ್ತಿ ಮಾಡಿದ ಕೆಲಸ ಕೇಳಿದರೆ ನೀವು ಕೂಡ ಆಶ್ಚರ್ಯಪಡ್ತಿರಾ.. ಹೌದು ಮೋಹನ್ ಎನ್ನುವ ವ್ಯಕ್ತಿ ಪ್ರತಿನಿತ್ಯ ಸಾವಿತ್ರಮ್ಮ ಎಂಬ ವಯಸ್ಸಾದ ಅಜ್ಜಿಯ ಬಳಿ ಹಣ್ಣು ಖರೀದಿ ಮಾಡಲು ಹೋಗುತ್ತಿದ್ದ.. ಮೋಹನ್ ಪ್ರತಿನಿತ್ಯ ಅಜ್ಜಿಯ ಬಳಿ ಹಣಕೊಟ್ಟು ಹಣ್ಣುಗಳನ್ನು ಖರೀದಿ ಮಾಡುತ್ತಿದ್ದ.. ಇನ್ನು ಖರೀದಿ ಮಾಡಿದ ಹಣ್ಣಿನಲ್ಲಿ ಒಂದನ್ನು ಅಲ್ಲೇ ತಿಂದು, ನಂತರ ಅಜ್ಜಿಗೆ ಈ ಹಣ್ಣು ತುಂಬಾ ಕಹಿಯಾಗಿದೆ ಒಂದು ಸಲ ನೀವು ತಿಂದು ನೋಡಿ ಎಂದು ಪ್ರತಿನಿತ್ಯ ಒಂದು ಹಣ್ಣನ್ನು ಅಜ್ಜಿಗೆ ನೀಡುತ್ತಿದ್ದನು..

[widget id=”custom_html-2″]

Advertisements
Advertisements

ನಂತರ ಅಜ್ಜಿ ಮೋಹನ್ ಕೊಟ್ಟ ಹಣ್ಣನ್ನು ತಿಂದು ಹಣ್ಣು ತುಂಬಾ ರುಚಿಯಾಗಿದೆ ಎಂದು ಹೇಳಿ.. ಅಜ್ಜಿ ಹಣ್ಣನ್ನು ಪೂರ್ತಿ ತಿಂದ ನಂತರ ಮೋಹನ್ ಎನ್ನು ಮಾತಾಡದೆ ಉಳಿದ ಹಣ್ಣುಗಳನ್ನು ತೆಗೆದುಕೊಂಡು ತನ್ನ ಪಾಡಿಗೆ ಮನೆಗೆ ವಾಪಸು ಹಿಂತಿರುಗುತ್ತಿದ್ದ.. ಹೀಗೆ ಪ್ರತಿದಿನ ಅಜ್ಜಿಯ ಬಳಿ ಹಣಕೊಟ್ಟು ಹಣ್ಣನ್ನು ಪಡೆದು ಅದರಲ್ಲಿ ಒಂದನ್ನು ತಿಂದು ಕಹಿಯಾಗಿದೆ ಎಂದು ಅಜ್ಜಿಗೆ ಹೇಳಿ ಪ್ರತಿನಿತ್ಯ ಒಂದು ಹಣ್ಣನ್ನು ಅಜ್ಜಿಗಾಗಿ ನೀಡುತ್ತಿದ್ದ.. ಒಂದು ದಿನ ಮೋಹನ್ ಹೆಂಡತಿ ಹಣ್ಣುಗಳು ತುಂಬಾ ಚೆನ್ನಾಗಿವೆ.‌. ನೀವು ಚೆನ್ನಾಗಿಲ್ಲ ಎಂದು ಪ್ರತಿನಿತ್ಯ ಯಾಕೆ ಡ್ರಾಮ ಮಾಡುತ್ತೀರಾ ಎಂದು ಕೇಳಿದಳು.. ಆಗ ಮೋಹನ್ ತನ್ನ ಹೆಂಡತಿಗೆ ನಗುತ್ತಾ ಈ ರೀತಿ ಹೇಳಿದ್ದನ್ನು.. ಸಾವಿತ್ರಮ್ಮ ಪ್ರತಿನಿತ್ಯ ಒಳ್ಳೆಯ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ.. ಆದರೆ ಸಾವಿತ್ರಮ್ಮ ತನಗಾಗಿ ಎಂದು ಒಂದು ಹಣ್ಣನ್ನು ಕೂಡ ಎಂದು ತಿನ್ನುವುದಿಲ್ಲ..

[widget id=”custom_html-2″]

ಅದಕ್ಕಾಗಿ ನಾನು ಪ್ರತಿನಿತ್ಯ ಒಂದು ಹಣ್ಣನ್ನು ತಿಂದು ನೋಡಿ ಕಹಿ ಎಂದು ಹೇಳಿದಾಗ ಆಗ ಅಜ್ಜಿ ಒಂದು ಹಣ್ಣನ್ನು ತಿನ್ನುತ್ತಾರೆ.. ಆದರೆ ವಯಸ್ಸಾದವರು ಪ್ರತಿನಿತ್ಯ ಒಂದು ಹಣ್ಣನ್ನು ತಿನ್ನಬೇಕು ಆಗ ಅವರ ಆರೋಗ್ಯ ಚೆನ್ನಾಗಿರುತ್ತದೆ.. ಅದರೆ ಆ ಅಜ್ಜಿ ಹಣ ಖರ್ಚಾಗುತ್ತದೆ ಎಂದು ಹಣ್ಣನ್ನು ತಿನ್ನೋದಿಲ್ಲ.. ಅದಕ್ಕೆ ನಾನು ಪ್ರತಿದಿನ ಅಜ್ಜಿಗೆ ಮೊದಲು ಹಣ ಕೊಟ್ಟು ನಂತರ ಹಣ್ಣುಗಳು ಚೆನ್ನಾಗಿದ್ದರೂ , ಹಣ್ಣು ಚೆನ್ನಾಗಿಲ್ಲ ಎಂದು ಹೇಳಿ, ಅಜ್ಜಿಗೆ ಒಂದು ಹಣ್ಣು ತಿನ್ನಲು ಕೊಡ್ತೀನಿ ಅಂತ ಮೋಹನ್ ತನ್ನ ಹೆಂಡತಿಗೆ ಹೇಳಿದ.. ಇನ್ನು ತನ್ನ ಗಂಡನ ಒಳ್ಳೆಯ ಮನಸ್ಸನ್ನು ನೋಡಿ ಮೋಹನ್ ಹೆಂಡತಿ ಗಂಡನನ್ನು ಹೊಗಳಿದಳು, ಇನ್ನು ಅಜ್ಜಿ ಮತ್ತು ಮೋಹನ್ ಮಧ್ಯೆ ನಡೆಯುತ್ತಿದ್ದ ಹಣ್ಣು ತಿನ್ನುವ ನಾಟಕವನ್ನು ಎದುರಿಗೆ ಇದ್ದ ತರಕಾರಿ ಅಂಗಡಿಯವನು ಅಜ್ಜಿ ಬಳಿ ಬಂದು, ಅಜ್ಜಿಗೆ ಮೋಹನ್ ಎನ್ನುವ ವ್ಯಕ್ತಿ ಪ್ರತಿದಿನ ಹಣ್ಣುಗಳು ಚೆನ್ನಾಗಿಲ್ಲ ಎಂದು ಹೇಳಿ ದಿನಾಲು ಬೈಯುತ್ತಿರುತ್ತಾನೆ ಆದರೂ ನೀನು ತಕ್ಕಡಿಯ ತೂಕಕ್ಕಿಂತ ಹೆಚ್ಚು ಹಣ್ಣನ್ನು ಯಾಕೆ ನೀಡುತ್ತೀರಾ ಎಂದು ಕೇಳುತ್ತಾನೆ..

ಆಗ ಸಾವಿತ್ರಮ್ಮ ನಗುತ್ತಾ.. ನಾನು ಒಂದು ಹಣ್ಣನ್ನು ತಿನ್ನಲಿ ಎಂದು ಹೇಳಿ ಪ್ರತಿನಿತ್ಯ ಹಣ್ಣು ಚೆನ್ನಾಗಿಲ್ಲ ಎಂದು ಹೇಳುತ್ತಾನೆ.. ಈ ವಿಷಯ ನನಗೆ ಗೊತ್ತಿಲ್ಲ ಎಂದು ಆ ವ್ಯಕ್ತಿ ಅಂದುಕೊಂಡಿದ್ದಾನೆ ಎಂದು ಅಜ್ಜಿ ಹೇಳಿದ್ದಳು.. ಆದರೆ ಅದು ನನಗೆ ಗೊತ್ತು ಅದಕ್ಕಾಗಿ ನಾನು ತಕ್ಕಡಿಯ ತೂಕಕ್ಕಿಂತ ಹೆಚ್ಚು ಹಣ್ಣನ್ನು ಕೊಡುತ್ತೇನೆ ಎಂದು ಸಾವಿತ್ರಮ್ಮ ಹೇಳಿದಳು.. ಅಜ್ಜಿಯ ಆರೋಗ್ಯ ಚೆನ್ನಾಗಿರಲಿ ಎಂದು ಹೇಳಿ ಮೋಹನ್ ಹಣ ಕೊಟ್ಟು ವಾಪಸ್ ಹಣ್ಣನ್ನು ಅಜ್ಜಿಗೆ ತಿನ್ನಲು ಕೊಟ್ಟರೆ.. ಆಗ ಅಜ್ಜಿ ನನ್ನ ಆರೋಗ್ಯ ಚೆನ್ನಾಗಿರಲಿ ಎಂದು ಹೇಳಿ ಒಂದು ಹಣ್ಣು ನನಗೆ ಕೊಡುತ್ತಾರೆ ಅದಕ್ಕಾಗಿ ನಾನು ಅವರ ಆರೋಗ್ಯ ಚೆನ್ನಾಗಿರಲಿ ಎಂದು ತೂಕಕ್ಕಿಂತ ಒಂದು ಹಣ್ಣು ಹೆಚ್ಚಾಗಿ ನೀಡುತ್ತಿದ್ದೇನೆ ಎಂದು ಅಜ್ಜಿ ಹೇಳಿದಳು.. ಸ್ನೇಹಿತರೆ ಅಜ್ಜಿ ಮಾಡಿದ ಕೆಲಸ ಸರೀನಾ ಅಥವಾ ಮೋಹನ್ ಮಾಡಿದ ಕೆಲಸ ಸರೀನಾ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..