Advertisements

ಮಂತ್ರಾಲಯಕ್ಕೆ ಭೇಟಿ ನೀಡಿದ ನಟಿ ಹರಿಪ್ರಿಯಾ.!

Cinema

ನಮಸ್ತೆ ಸ್ನೇಹಿತರೆ, ನಟಿ ಹರೀಪ್ರೀಯಾ ಕನ್ನಡ ಚಿತ್ರರಂಗದ ಟಾಪ್ ನಟಿಯಾರಲ್ಲಿ ಒಬ್ಬರು, ಇವರು ಕನ್ನಡ ಮಾತ್ರವೇ ಸ್ಯಾಂಡಲ್ವುಡ್ ನಲ್ಲಿ ಕೂಡ ಅದ್ಭುತವಾಗಿ ನಟಿಸಿದ್ದಾರೆ, ಇವರ ಮೂಲ ಹೆಸರು ಶ್ರುತಿ ಅಂತ ಆದರೆ ಸಿನಿಮಾದಲ್ಲಿ ಇವರನ್ನು ಹರಿಪ್ರಿಯಾ ಹೆಸರಿನಿಂದ ಪ್ರಸಿದ್ಧರಾದ ಇವರು, ಭಾರತೀಯ ಚಲನಚಿತ್ರದ ನಟಿ ಮತ್ತು ರೂಪದರ್ಶಿ ಕೂಡ ಹೌದು, ನಟಿ ಹರೀಪ್ರೀಯಾ ಅವರು1991 ಅಕ್ಟೋಬರ್ 29ರಂದು ಬೆಂಗಳೂರಿನಲ್ಲಿ ಜನಿಸಿದರು, ಆದರೆ ಇವರು ಬೆಳೆದದ್ದು ಮಾತ್ರ ಕೋಲಾರದ ಚಿಕ್ಕಬಳ್ಳಾಪುರ ಪಟ್ಟಣದಲ್ಲಿ.. ಅಲ್ಲಿಯೇ ಅವರು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಅಲ್ಲದೆ ಇವರು ಭರತನಾಟ್ಯದಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡರು,

[widget id=”custom_html-2″]

Advertisements
Advertisements

ಭರತನಾಟ್ಯ ಕಲಿತ ನಂತರ ಹಲವಾರು ಭರತನಾಟ್ಯ ಕಾರ್ಯಕ್ರಮ ಮಾಡಿ ಸೈ ಎನಿಸಿಕೊಂಡಿದ್ದಾರೆ, ಇನ್ನೂ ಹರೀಪ್ರೀಯಾ ಅವರು 2008 ರಲ್ಲಿ ತೆರೆಕಂಡ ಮನಸುಗಳು ಮಾತು ಮಧುರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಅದಾದ ನಂತರ ಕನ್ನಡ ಅಲ್ಲದೆ ತೆಲುಗು ಭಾಷೆಯ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ ಜನರ ಗಮನವನ್ನ ತನ್ನತ್ತ ಸೆಳೆದಿದ್ದಾರೆ, ಸದ್ಯ ಹರೀಪ್ರೀಯಾ ಅವರು ಮಂತ್ರಾಲಯಕ್ಕೆ ಭೇಟಿ ಗುರು ರಾಯರ ದರ್ಶನವನ್ನ ಪಡೆದಿದ್ದಾರೆ, ಅಲ್ಲದೆ ರಾಯರ ಸನ್ನಿಧಿಯಲ್ಲಿ ಕಳೆದ ದಿನ ತುಂಬಾ ವಿಶೇಷವಾಗಿದೆ ಎಂದು ಕೇಲವು ಸಾಲುಗಳನ್ನು ಬರೆದುಕೊಂಡು, ರಾಯರ ಸನ್ನಿಧಿಯಲ್ಲಿ ತೆಗೆದ ಪೋಟೋಗಳು ತಮ್ಮ‌ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ,

[widget id=”custom_html-2″]

ಅಲ್ಲದೆ ಹರೀಪ್ರೀಯಾ ಅಲ್ಲಿನ ಸ್ವಾಮಿಗಳ ಬಗ್ಗೆ ಅಲ್ಲಿ ನಡೆದ ಸನ್ಮಾನದ ಬಗ್ಗೆ ಈ ರೀತಿ ಬರೆದುಕೊಂಡು, ಮಂತ್ರಾಲಯದ ಶ್ರೀ ಸುಬುಧೇಂದ್ರ ಸ್ವಾಮಿ ಅವರಿಂದ ಸನ್ಮಾನ ಸ್ವೀಕರಿಸಿದ್ದು ನನಗೆ ಅಪಾರ ಹೆಮ್ಮೆ ಇದೆ. ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ದಿನದಂದು ಗೌರವ ಸಿಕ್ಕಿರುವುದು ಇನ್ನಷ್ಟು ವಿಶೇಷ. ಮಂತ್ರಾಲಯ ನನ್ನನ್ನು ವಿಸ್ಮಯಗೊಳಿಸುವುದನ್ನು ಎಂದಿಗೂ ಕಮ್ಮಿಯಾಗಿಲ್ಲ ಎಂದು ಬರೆದುಕೊಂಡು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.. ಸ್ನೇಹಿತರೆ ನಟಿ‌ ಹರೀಪ್ರೀಯಾ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..