Advertisements

ಕೇವಲ 10 ಗುಂಟೆ ಜಮೀನಿನಲ್ಲಿ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ ಹಾವೇರಿಯ ಈ ರೈತ! ಆ ಬೆಳೆ ಯಾವುದು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ರೈತರು ಯಾವುದೇ ಇಂಜನಿಯರಿಂಗ್ ಹಾಗು ದೊಡ್ಡ ಉದ್ಯಮಿಗಳಿಗೂ ಕಮ್ಮಿಇಲ್ಲ ಅನ್ನೋದಕ್ಕೆ ಈ ಕಾವೇರಿ ರೈತ ಉದಾಹರಣೆ ಹಾಗಿದ್ದಾರೆ.. ಹೌದು ಹಾವೇರಿ ಜಿಲ್ಲೆಯ ಬಸಪುರ‌ ಎಂಬ ಗ್ರಾಮದಲ್ಲಿ ಯಲ್ಲಪ್ಪ ಎಂಬ ರೈತ ತನ್ನ ಬಳಿ ಇದ್ದ ಎರಡು ಎಕರೆ ಜಮೀನಿನಲ್ಲಿ ಹತ್ತು ಗುಂಟೆ ಜಾಗದಲ್ಲಿ ಮಗನ ಸಲಹೆಯಿಂದ ಡ್ರ್ಯಾಗನ್ ಪ್ರೂಟ್ ಬೆಳೆಯನ್ನ ಬೆಳೆದಿದ್ದಾರೆ.. ಇನ್ನೂ ಈ ರೀತಿಯ ಬೆಳೆಯನ್ನ ತಮ್ಮ ಜಮೀನಿನಲ್ಲಿ ಯಾವ ರೀತಿ ಬೆಳೆಯಬೇಕು ಎನ್ನುವ ಮಾಹಿತಿಯನ್ನು ಕೃಷಿ ಅಧಿಕಾರಿಗಳಿಂದ ಸಲಹೆ ಪಡೆದು ಕಾಗವಾಡದಲ್ಲಿ ಬೆಳೆದಿದ ಡ್ರ್ಯಾಗನ್ ಪ್ರೂಟ್ ಬೆಳೆಯನ್ನು ನೋಡಿ ಯಲ್ಲಪ್ಪ ಅವರಿಗೆ ಖುಷಿಯಾಗಿ ಅಲಿಂದ್ದ ಸಸಿಗಳನ್ನು ತಂದು ತಮ್ಮ‌ ಜಮೀನಿನಲ್ಲಿ ಬೆಳೆಸಿದರು..

Advertisements
Advertisements

ನಂತರ ತಮ್ಮ ಜಮೀನಿನಲ್ಲಿ‌ 200 ಕಲ್ಲಿನ ಕಂಬಗಳನ್ನ ನಿಲ್ಲಿಸಿ ಒಂದು ಕಂಬಕ್ಕೆ ನಾಲ್ಕು ಸಸಿಗಳನ್ನ ಬೆಳೆಸಿದರು ಮಣ್ಣನ್ನು ಹದಮಾಡಿ ತಿಪ್ಲೇಗೊಬ್ಬರ ಹಾಕಿ ಈ ಸಸಿಯನ್ನ ಬೆಳಸುತ್ತಿದ್ದರು ನಂತರ ಆ ಸಸಿ ಬೆಳೆಯುತ್ತಿದ್ದಂತೆ ಅಗ್ಗದಿಂದ ಕಂಬಕ್ಕೆ ಕಟ್ಟಿದ ಮೇಲೆ ಅದಕ್ಕೆ ಒಂದು ಗಾಡಿಯ ಟೈಯರ್ ಆಕಿ ಕೊಡೆಯ ಆಕಾರದಲ್ಲಿ ಟೈಯರ್ ಮೇಲೆ ಗಿಡ ಹೂ ಬಿಡುತ್ತದೆ.‌ ಇನ್ನೂ ಈ ಡ್ರ್ಯಾಗನ್‌ ಹಣ್ಣು ಎರಡು ರೀತಿಯ ಬಣ್ಣದಲ್ಲಿ ಇರುತ್ತದೆ ಅದು ಕೆಂಪು ಮತ್ತು ಬಿಳಿ ಬಣ್ಣದಲ್ಲಿ ಇನ್ನೂ ಈ ಬೆಳೆಗೆ‌ ಅಷ್ಟೇನೂ ನೀರಿನ ಅವಶ್ಯಕತೆ ಇರುವುದಿಲ್ಲ ವಾರಕ್ಕೆ ಅರ್ಧತಾಸು ನೀರು ಬಿಟ್ಟರೆ ಸಾಕು ಅಷ್ಟೇ ಅಲ್ಲದೆ ಯಲ್ಲಪ್ಪ ಅವರು ಈ‌ ಬೆಳೆಗೆ ಸಾವಯವ ಗೊಬ್ಬರವನ್ನು ಬೆರೆಸಿ ಹಾಕಿದ್ದಾರೆ..

ಹತ್ತು ಕುಂಟೆ ಜಾಗದಲ್ಲಿ ಡ್ರ್ಯಾಗನ್ ಬೆಳೆಯಿಂದ ಸುಮಾರು ಎರಡರಿಂದ ಮೂರುಲಕ್ಷ ರೂಪಾಯಿ ಆದಾಯವನ್ನ ಗಳಿಸುತ್ತಿದ್ದಾರೆ.. ಇನ್ನೂ ಒಂದು ಕೇಜಿಗೆ ಮಾರುಕಟ್ಟೆಯಲ್ಲಿ ಈ ಡ್ರ್ಯಾಗನ್ ಹಣ್ಣಿಗೆ 70 ರೂಪಾಯಿ ಇದೇ ಯಲ್ಲಪ್ಪ ಅವರು ಈ ಹಣ್ಣನ್ನು ಮಾರುಕಟ್ಟೆಗೆ ಈ ಹಣ್ಣುಗಳನ್ನು ತೆಗೆದುಕೊಂಡು ಹೋಗುವುದಿಲ್ಲ.. ಈ‌ ಹಣ್ಣನ್ನು ಖರೀದಿ ಮಾಡುವವರು ಯಲ್ಲಪ್ಪ ಅವರ ಜಮೀನಿನ ಬಳಿ ಬಂದು ಅಲ್ಲಿಯೇ ಹಣಕೊಟ್ಟು ಹಣ್ಣನ್ನು ಖರೀದಿ ಮಾಡುತ್ತಿದ್ದರು.. ಡ್ರ್ಯಾಗನ್ ಹಣ್ಣನ್ನು ಕ’ಟ್ ಮಾಡಿದ ನಂತರ ಆ ಗರಿಯಲ್ಲಿ ಇರುವ ಫಲವತ್ತಾದ ಸಸಿಗಳನ್ನು ಕ’ಟ್ ಮಾಡಿ ಒಂದು ಕೇಜಿ ಪ್ಯಾಕೆಟ್ ನಲ್ಲಿ ತಿ’ಪ್ಪೇಗೊಬ್ಬರ ಮತ್ತು ಮಣ್ಣನ್ನ ಹಾಕಿ

ಸಸಿಯನ್ನ ಇಟ್ಟು ನೀರು ಹಾಕಿ ಹಾಗೆಯೇ ಇಡಬೇಕು ಒಂದು ತಿಂಗಳ ನಂತರ ಚಿಗುರು ಬರುತ್ತದೆ ಅದನ್ನ ರೈತರು ಬೆಳೆಸಬಹುದಾಗಿದೆ.. ಯಲ್ಲಪ್ಪ ಅವರು ಡ್ರ್ಯಾಗನ್ ಬೆಳೆಯನ್ನು ಬೆಳೆಯಲು ಹೆಚ್ಚಿನ ಬಂಡವಾಳ ಬೇಕು ನಂತರ ದಿನಗಳಲ್ಲಿ ಈ ಬೆಳೆಯಿಂದ ಉತ್ತಮ ಆದಾಯ ಪಡೆಯಬಹುದು ಎಂದು ಹೇಳಿದ್ದಾರೆ ಅಲ್ಲದೇ ಅವರು ಮೊದಲು ತಮ್ಮ‌ ಜಮೀನಿನಲ್ಲಿ ಬೆಳೆಯುತ್ತಿರುವ ಬೆಳೆಗಳಿಗೆ ತುಂಬಾ ನಷ್ಟ ಅನುಭವಿಸುವ ಬದಲಿಗೆ ಜಮೀನಿನಲ್ಲಿ ಹೊಸ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತರ ರೀತಿಯ ಆದಾಯ ಗಳಿಸಬಹುದು ಎಂದು ಇತರ ರೈತರಿಗೆ ಸಲಹೆಯನ್ನ ನೀಡಿದ್ದಾರೆ ಕಾವೇರಿಯ ಯಲ್ಲಪ್ಪ ಅವರು.. ಸ್ನೇಹಿತರೆ ನಮ್ಮ ರೈತರ ಹೊಸ ಹೊಸ ಪ್ರಯತ್ನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ