Advertisements

ನಟ ಶಂಕರ್ ನಾಗ್ ಅವರ ಜೀವನದ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸತ್ಯ ಘ’ಟನೆಗಳು ಏನು ಗೊತ್ತಾ? ಇಲ್ಲಿದೆ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ನಟ ಶಂಕರ್ ನಾಗ್ ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳ ಪಾಲಿಗೆ ಕರಾಟೆ ಕಿಂಗ್ ಹಾಗು ಆಟೋ ರಾಜ್ ಎಂಬ ಹೆಸರಿನ ಫೇ’ಮಸ್ ಆದಂತಹ ಹೆಸರಾಂತ ನಟ ಶಂಕರ್ ನಾಗ್ ಅವರು.. ಕನ್ನಡ ಚಿತ್ರರಂಗದಲ್ಲಿ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಇನ್ನೂ ಶಂಕರ್ ನಾಗ್ ಅವರು ನವೆಂಬರ್ 09/1954ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್‌ನಾಗ್ ಅವರು ಹುಟ್ಟಿದರು.. ಬಾಲ್ಯದಲ್ಲಿ ಶಂಕರ್ ನಾಗ್ ಅವರ‌ ತಂದೆ ಸದಾನಂದ ಅವರು ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್ ಅಂತ.. ನಂತರ ಬಣ್ಣದ ಲೋಕಕ್ಕೆ ಬಂದ ನಂತರ ಶಂಕರ್ ನಾಗ್ ಎಂಬ ಹೆಸರಿನಿಂದ ಫೇಮಸ್ ಆದರೂ..

Advertisements
Advertisements

ಇನ್ನೂ ಶಂಕರ್ ನಾಗ್ ಅವರು ವಿದ್ಯಾಭ್ಯಾಸವನ್ನ‌ ಮುಗಿಸಿದ ಬಳಿಕ ಮುಂಬೈಗೆ ತೆರಳಿದರು.. ಮುಂಬೈನಲ್ಲಿ ಮರಾಠಿ ಚಿತ್ರಮಂದಿರದ ಕಡೆಗೆ ಹೆಚ್ಚು ಆಕರ್ಷಿತರಾದ ಶಂಕರ್‌ನಾಗ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀ’ವ್ರವಾಗಿ ತಮ್ಮನ್ನು ತಾವು ತೊಡಗಿಕೊಂಡಿದ್ದರು. ತಮ್ಮ ಅಣ್ಣನ ಹಾಗೆ ಶಂಕರ್ ನಾಗ್ ಅವರು ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಆದರೆ ಸಂಗೀತದ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದ ಶಂಕರ್ ನಾಗ್ ಅವರು ಕೊಳಲು ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸುವುದನ್ನ ಕಲಿತರು. ಅನಂತರ 1978ರಲ್ಲಿ ನಿರ್ದೇಶಕ ಗಿರೀಶ್ ಕಾರ್ನಾಡ್ ಅವರು ನಿರ್ದೇಶನ ಮಾಡಿದ ‘ಒಂದಾನೊಂದು ಕಾಲದಲ್ಲಿ’ ಎನ್ನುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಮೊದಲ ಬಾರಿಗೆ ಶಂಕರ್ ನಾಗ್ ಅವರು ಪಾದಾರ್ಪಣೆ ಮಾಡಿದರು..

ನಂತರ 12 ವರ್ಷಗಳಲ್ಲಿ ಕನ್ನಡ ಚಿತ್ರಗಳಲ್ಲಿ ಸುಮಾರು 92 ಚಿತ್ರಗಳಲ್ಲಿ ನಟಿಸಿದರು ನಟ ಶಂಕರ್ ನಾಗ್ ಅವರು.. ಇನ್ನೂ ಶಂಕರ್ ನಾಗ್ ಅವರು ಮೊದಲ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ ಗೆದ್ದ ಮಗ, ಈ ಸಿನಿಮಾದಲ್ಲಿ ತಮ್ಮ ಸಹೋದರ ಅನಂತ ನಾಗ್ ಅವರೊಡನೆ ಮಿಂಚಿನ ಓಟ, ಜನ್ಮ ಜನ್ಮದ ಅನುಬಂಧ, ಮತ್ತು ಗೀತಾ ಚಿತ್ರಗಳನ್ನ ನಿರ್ಮಿಸಿ ಅದ್ಭುತವಾಗಿ ನಟನೆ ಮಾಡಿದ್ದರು.. ಇನ್ನೂ ಶಂಕರ್ ನಾಗ್ ಅವರು ಕಲಾವಿದೆ ಆಗಿದ್ದ ಅರುಂಧತಿ ನಾಗ್ ಅವರನ್ನ‌ ಪ್ರೀತಿಸಿ ನಂತರ ಇಬ್ಬರು ಮದುವೆಯಾದರು.. ಇನ್ನೂ ಶಂಕರ್ ನಾಗ್ ದಂಪತಿಗಳಿಗೆ ಒಬ್ಬಳು ಮಗಳು ಕೂಡ ಇದ್ದಾಳೆ ಮಗಳ ಹೆಸರು ಕಾವ್ಯ ನಾಗ್ ಅಂತ.. ನಂತರ ಶಂಕರ್ ನಾಗ್ ಮತ್ತು ಪತ್ನಿ ಅರುಂಧತಿ ನಾಗ್ ಇಬ್ಬರು ಸೇರಿ ಸಂಕೇತ್ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ಅದರ ಅಡಿಯಲ್ಲಿ ಅಂಜುಮಲ್ಲಿಗೆ, ನೋಡಿ ಸ್ವಾಮಿ ನಾವಿರೋದು‌ ಹೀಗೆ, ಆಟ ಬೊಂಬಾಟ, ನಾಗಮಂಡಲ, ಇನ್ನೂ ಮುಂತಾದ ಸುಂದರ ನಾಟಕಗಳನ್ನ ನಿರ್ಮಾಣ ಮಾಡಿದರು..

ಆದರೆ ಶಂಕರ್‌ನಾಗ್ ದಂಪತಿಗಳು ರಂಗಭೂಮಿ ಕಲಾವಿದರಿಗೆ ಸಹಾಯವಾಗುವಂತೆ ನಾಟಕಗಳ ಪ್ರದರ್ಶನ ಸುಗಮವಾಗಿ ನಡೆಯಬೇಕು ಎಂದು ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆದರೆ ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರ್‌ನಾಗ್ ನಿ’ಧನರಾದರು.. ನಂತರ ಶಂಕರ್ ನಾಗ್ ಅವರ‌ ಪತ್ನಿ ಅರುಂಧತಿ ನಾಗ್ ಅವರು ತನ್ನ ಗಂಡನ ಆಸೆಯಂತೆ ಯೋಜನೆಯನ್ನು ಮುಂದುವರೆಸಿ ಇಂದು ಕಾರ್ಯರೂಪಕ್ಕೆ ತಂದಿದ್ದಾರೆ.. ಅಷ್ಟೇ ಅಲ್ಲದೆ ಆ ರಂಗಮಂದಿರಕ್ಕೆ ರಂಗಶಂಕರ್ ಎಂದು ಹೆಸರಿಟ್ಟಿದ್ದಾರೆ.. ಈ ರಂಗಮಂದಿರ ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ನಿರ್ಮಾಣವಾಗಿದೆ.. ಶಂಕರ್ ನಾಗ್ ಅವರು ಸಾಯುವ ಮುನ್ನವೇ ಹಲವಾರು ಪ್ರಶ್ನೆಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ಹೌದು ಮಿಂಚಿನ ಓಟ ಮತ್ತು ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರಗಳಿಗೆ ಕ್ರಮವಾಗಿ ದ್ವಿತೀಯ ಅತ್ಯುತ್ತಮ ಚಿತ್ರ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಗಳನ್ನು ರಾಜ್ಯಸರ್ಕಾರದ ವತಿಯಿಂದ ತಮ್ಮದಾಗಿಸಿಕೊಂಡರು.

ಇನ್ನೂ 1984ರಲ್ಲಿ ಆ’ಕ್ಸಿಡೆಂಟ್ ಪ್ರಥಮ ಅತ್ಯುತ್ತಮ ಚಿತ್ರ ಎಂದು ರಾಜ್ಯ ಸರ್ಕಾರವಷ್ಟೇ ಅಲ್ಲದೆ ಪಾನನಿಷೇಧದ ಬಗೆಗಿನ ಉತ್ತಮ ಚಿತ್ರವೆಂದು ಪರಿಗಣಿತವಾಗಿ ರಜತ ಕಮಲ ಮತ್ತು ನಗದು ಬಹುಮಾನವನ್ನು ರಾಷ್ಟ್ರ ಪ್ರಶಸ್ತಿಯಾಗಿ ಪಡೆದರು. ಇನ್ನೂ ನಿ’ಗೂಢ ರ’ಹಸ್ಯ ಶಂಕರ್‌ನಾಗ್ ಅಭಿನಯದ ಕೊನೆಯ ಚಿತ್ರವಾಗಿತ್ತು.. ಇನ್ನೂ ನಟ ಶಂಕರ್ ನಾಗ್ ಅವರು ತಮ್ಮ ಜೀವನದಲ್ಲಿ ಒಂದು ಕನಸನ್ನು ಕೂಡ ಒಂದಿದ್ದರು ಅದೇನೆಂದರೆ ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಸರ್ಕಾರದ ಮುಂದೆ ಇಟ್ಟಿದ್ದರು ಶಂಕರ್‌ನಾಗ್ ಅವರು.. ಸ್ನೇಹಿತರೆ ನಟ ಶಂಕರ್ ನಾಗ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ…