Advertisements

ಸರ್ಪ ಆದಿಶೇಷನ ಬಗ್ಗೆ ನಿಮಗೆ ತಿಳಿಯದೆ ಇರುವ ಕೆಲವೊಂದು ಇಂಟ್ರೆಸ್ಟಿಂಗ್ ರಹಸ್ಯಗಳು..!

Adhyatma

ನಮಸ್ತೇ ಸ್ನೇಹಿತರೆ.. ಶ್ರೀ ಮಹಾವಿಷ್ಣು ತ್ರಿಮೂರ್ತಿಗಳಲ್ಲಿ ಅತಿ ಶ್ರೇಷ್ಠ ಹಾಗೂ ಜಗತ್ತಿನಲ್ಲಿ ಒಬ್ಬ ಪರಿಪಾಲಕ.. ಇನ್ನೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ಶ್ರೀ ಮಹಾವಿಷ್ಣು ಜಗತ್ತಿನ ರಕ್ಷಣೆಗಾಗಿ ಅನೇಕ ಅವತಾರಗಳನ್ನು ತಾಳಿದ್ದಾನೆ.. ಹಾಗೆ ಲಕ್ಷ್ಮೀದೇವಿಯೂ ಕೂಡ ಜಗತ್ತಿನ ರಕ್ಷಣೆಗಾಗಿ.. ಭೂಲೋಕದಲ್ಲಿ ಜನಿಸಿ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನೆರವಾಗುತ್ತಾಳೆ.. ಇನ್ನೂ ಶ್ರೀ ವಿಷ್ಣು ಸರ್ಪವನ್ನ ತನ್ನ ಆಸನವನ್ನಾಗಿ ಮಾಡಿಕೊಂಡಿದ್ದಾನೆ ಎಂಬುದು.. ನಿಮಗೆಲ್ಲಾ ತಿಳಿದಿದೆ‌‌.. ಅಷ್ಟಕ್ಕೂ ವಿಷ್ಣು ತನ್ನ ಆಸನವನ್ನಾಗಿ ಮಾಡಿಕೊಂಡಿರುವ ಸರ್ಪ ಯಾವುದೆಂದರೆ ಶೇಷನಾಗ.. ಈ ಶೇಷನಾಗ ಸರ್ಪಗಳಲ್ಲೇ ಅತಿ ಶ್ರೇಷ್ಠ ನಾಗ ಎಂದು ಅನಿಸಿಕೊಂಡಿದ್ದು.. ವಿಷ್ಣುವಿನ ಸೇವಕ ಮತ್ತು ಅಭಿವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ..

[widget id=”custom_html-2″]

Advertisements
Advertisements

ಶೇಷನಾಗ ಭೂಲೋಕದಲ್ಲಿ ಎರಡು ಬಾರಿ ಜಗತ್ತಿನ ರಕ್ಷಣೆಗಾಗಿ ಜನ್ಮ ತಾಳಿದವನು.. ದ್ವಾಪರಯುಗದಲ್ಲಿ ಶ್ರೀ ವಿಷ್ಣು ಅವತಾರಿ ಕೃಷ್ಣನ ಸಹೋದರ ಬಲರಾಮನಾಗಿ ಹಾಗೂ ತೇತ್ರಾಯುಗದಲ್ಲಿ ಶ್ರೀರಾಮನ ಸಹೋದರ ಲಕ್ಷ್ಮಣನಾಗಿ ಅವತಾರವೆತ್ತಿದ್ದನು ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ.. ಶೇಷನಾಗ ಎಲ್ಲಾ ಸ’ರ್ಪಗಳಿಗಿಂತ ಶ್ರೇಷ್ಠ ಹಾಗೂ ರಾಜನೂ ಕೂಡ ಹೌದು.. ವಿಶ್ವದಲ್ಲೇ ಬ್ರಹ್ಮಾಂಡ ಸೃಷ್ಟಿಯ ಸಮಯದಲ್ಲಿ ಶೇಷ ನಾಗ ಪ್ರಥಮ ಜೀವಿಗಳಲ್ಲಿ ಒಬ್ಬನಾಗಿದ್ದವನು.. ಇನ್ನೂ ತನ್ನ ಆರಾಧ್ಯ ದೈವ ವಿಷ್ಣು ವಿಶ್ರಾಂತಿ ಪಡೆಯಲು ತನ್ನ ದೇಹವನ್ನು ಸುರುಳಿಯಾಕಾರದಲ್ಲಿ ಸುತ್ತಿಕೊಂಡು ಆಸನವನ್ನಾಗಿ ಮಾಡಿಕೊಂಡಿದ್ದಾನೆ..

[widget id=”custom_html-2″]

ದ್ವಾಪರಯುಗದಲ್ಲಿ ಭೀ’ಕರ ಚಂ’ಡಮಾರುತ ಬೀಸುವ ಸಮಯದಲ್ಲಿ ಯಮುನಾ ನದಿಯ ಮೂಲಕ ವಸುದೇವನು ಕೃಷ್ಣನನ್ನ ಕರೆದೊಯ್ಯುತ್ತಿದ್ದನು ಆ ಸಮಯದಲ್ಲಿ ಆದಿಶೇಷ ಶ್ರೀ ಕೃಷ್ಣನನಿಗೆ ನೆರವಾಗುತ್ತಾನೆ.. ಶ್ರೀ ಕೃಷ್ಣನ ಅಣ್ಣ ಬಲರಾಮನ ಅವತಾರವೂ ಕೂಡ ಆದಿಶೆಷನೇ.. ಇವನನ್ನು ಅನಂತ-ಶೇಷ ಅಥವಾ ಆದಿಶೇಷ ಎಂದೆಲ್ಲಾ ಕರೆಯುತ್ತಾರೆ.. ಇವನು ವಿಶ್ವ ಬ್ರಹ್ಮಾಂಡ ವಿ’ನಾಶದ ನಂತರವೂ ಕೂಡ ಅಸ್ತಿತ್ವದಲ್ಲಿರುತ್ತಾನೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ..

ಶೇಷನಾಗ ದಂತಕಥೆಗಳ ಕಾರಣದಿಂದಾಗಿ ಸ’ರ್ಪಗಳನ್ನು ಪೂಜಿಸುತ್ತಾರೆ.. ಶಿವನ ಕೊರಳಿನಲ್ಲೂ ಕೂಡ ಸ’ರ್ಪಕ್ಕೆ ವಿಶೇಷ ಸ್ಥಾನವಿದೆ.. ಶೇಷ ನಾಗ ಸಹೋದರ ವಾಸುಕಿಯನ್ನು ಸಮುದ್ರ ಮಂಥನದ ಸಮಯದಲ್ಲಿ ಕ್ಷೀರಸಾಗರವನ್ನು ಮಥಿಸುವ ಹಗ್ಗವಾಗಿ ಬಳಸಲಾಗಿತ್ತು.. ಇದು ಹಿಂದೂ ಧರ್ಮದಲ್ಲಿ ಒಂದು ಪ್ರಮುಖ ಘಟನೆ ಎಂದೆನಿಸಿಕೊಂಡಿದೆ..