ನಮಸ್ತೆ ಸ್ನೇಹಿತರೆ, ಕಿಸ್ ಚಿತ್ರದ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕ್ಯೂಟ್ ಅಂಡ್ ಬ್ಯೂಟಿಫುಲ್ ನಟಿ ಅಂದ್ರೆ ಅದು ಶ್ರೀ ಲೀಲಾ.. ತಮ್ಮ ಮೊದಲ ಚಿತ್ರದಿಂದಲ್ಲೇ ಸಾಕಷ್ಟು ಅಭಿಮಾನಿ ಬಳಗವನ್ನು ನಟಿ ಶ್ರೀ ಲೀಲಾ ಅವರು ಒಂದಿದ್ದಾರೆ..ಮೊದಲ ಚಿತ್ರದಿಂದಲೇ ಭರವಸೆಯ ನಟಿ ಎಂಬ ಹೊಗಳಿಕೆಗೆ ಪಾತ್ರವಾಗಿದ್ದಾರೆ.. ಅಷ್ಟೇ ಅಲ್ಲದೆ ಬೇರೆ ಭಾಷೆಯಲ್ಲಿ ಕೂಡ ನಟ ಮಾಡುವಂತಹ ಅವಕಾಶವನ್ನ ಪಡೆದಿರುವ ನಟಿ ಶ್ರೀ ಲೀಲಾ ಅವರು ಒಂದಾದ ಮೇಲೆ ಒಂದು ಚಿತ್ರಗಳ ನಟನೆ ಮಾಡುತ್ತಾ ತುಂಬಾನೇ ಬ್ಯುಸಿಯಾಗಿದ್ದಾರೆ..
[widget id=”custom_html-2″]
ಕನ್ನಡದಲ್ಲಿ ಕಿಸ್ ಭರಾಟೆ ಮತ್ತು ಈಗಾಗಲೇ ಬಿಡುಗಡೆ ಆಗಿರುವಂತಹ ಬೈ.ಟು.ಲವ್ ಸಿನಿಮಾದಲ್ಲಿ ನಟನೆಯನ್ನ ಮಾಡಿ ಎಲ್ಲೆಡೆ ಸೈ ಎನಿಸಿಕೊಂಡಿದ್ದಾರೆ.. ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ನಟಿ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ.. ಶ್ರೀ ಲೀಲಾ ಅವರು ರೀಲ್ ಲೈಪ್ ನಲ್ಲಿ ಮಾತ್ರವಲ್ಲದೆ ರೀಯಲ್ ಲೈಪ್ ನಲ್ಲಿ ಹೀರೋಯಿನ್ ಆಗಿದ್ದಾರೆ..
[widget id=”custom_html-2″]
[widget id=”custom_html-2″]

[widget id=”custom_html-2″]
ಹೌದು ಇಬ್ಬರು ದಿವ್ಯಾಂಕ ಮಕ್ಕಳನ್ನ ದತ್ತ ಪಡೆದಿದ್ದಾರೆ.. ಮಾತೃಶ್ರೀ ಮನು ವಿಕಾಸ ಕೇಂದ್ರದಲ್ಲಿ ಇಬ್ಬರು ಮಕ್ಕಳನ್ನ ದತ್ತು ಪಡೆದಿದ್ದಾರೆ.. ಇದರಲ್ಲಿ ಎಂಟು ತಿಂಗಳ ಗಂಡು ಮಗು ಗುರು ಹಾಗು ಶೋಭಿತ ಎನ್ನುವ ಹೆಣ್ಣು ಮಗುವನ್ನ ಶ್ರೀ ಲೀಲಾ ಅವರು ದತ್ತು ಪಡೆದಿದ್ದಾರೆ.. ಹೌದು ಪೆಬ್ರವರಿ 18 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿರುವ ಬೈ.ಟು.ಲವ್ ಚಿತ್ರಕ್ಕೆ ಈ ಮಕ್ಕಳಿಗೂ ಒಂದು ರೀತಿ ವಿಶೇಷವಾದ ನಂಟ್ಟು ಇದೇ.. ಇ ಸಿನಿಮಾ ಇವತ್ತಿನ ಪೀಳಿಗೆಗೆ ಬದುಕಿನ ಬಗ್ಗೆ ಪಾಠ ಮಾಡಲಿದೆ ಅಂತೆ.. ಅಂತಹಾ ವಿಶೇಷ ಇರುವಂತಹ ವಿಚಾರಗಳು ಈ ಸಿನಿಮಾದಲ್ಲಿ ಇದೇ.. ಹೀಗೇಲ್ಲಾ ಇರುತ್ತೆ ಅಂತ ಗೊತ್ತಿತ್ತು. ಆದ್ರೆ ಹತ್ತಿರದಿಂದ ನೋಡಿರಲಿಲ್ಲ. ಈ ಜಾಗಕ್ಕೆ ಬಂದಿದ್ದು ನನಗೆ ಹೊಸ ಲೋಕಕ್ಕೆ ಬಂದಂತೆ ಆಗಿದೆ. ಈ ಬಗ್ಗೆ ನಮ್ಮ ಕೈಯಲ್ಲಿ ಆಗುವಷ್ಟು ಜವಾಬ್ದಾರಿ ತೆಗೆದುಕೊಳ್ಳಬೇಕು. ಅಂಗವಿಕಲತೆ ಅಥವಾ ಮೆಡಿಕಲ್ ಕಂಡಿಷನ್ ಕಾರಣದಿಂದ ಈ ಮುಗ್ಧ ಮಕ್ಕಳನ್ನು ರೈಲ್ವೇ ಸ್ಟೇಷನ್, ಬಸ್ ಸ್ಟಾಪ್, ರಸ್ತೆ ಬದಿಯಲ್ಲಿ ಬಿಟ್ಟು ಹೋಗಿಬಿಡುತ್ತಾರೆ.
[widget id=”custom_html-2″]

ಇಂತಹ ಕೆಲಸ ಮಾಡಬಾರದು. ಅಷ್ಟು ಚಿಕ್ಕ ಮಕ್ಕಳಿಗೆ ಏನು ತಾನೇ ತಿಳಿಯುತ್ತದೆ..? ಯಾರು ಎತ್ತಿಕೊಂಡರು ಅವರೇ ಅಮ್ಮ ಎಂದುಕೊಳ್ಳುತ್ತಾರೆ ಅಷ್ಟು ಮುಗ್ಧರು ಇವರು… ಮಕ್ಕಳನ್ನು ನೋಡಿಕೊಳ್ಳುವ ತುಂಬಾ ಜಾಗಗಳಿವೆ. ನಮ್ಮ ಕೈಯಲ್ಲಿ ಆಗುವಷ್ಟು ಸಹಾಯ ಮಾಡಬೇಕು. ಇದಕ್ಕೆ ಲಕ್ಷವೂ, ಸಾವಿರಾರು ರೂಪಾಯಿ ಬೇಕಿಲ್ಲ” ಎಂದಿದ್ದಾರೆ. “ಇಂತಹ ವಿಷಯ ಇಟ್ಟುಕೊಂಡು ಮಾಡಿರುವ ಚಿತ್ರದಲ್ಲಿ ನಟಿಸಿರುವುದಕ್ಕೆ ನನಗೆ ಹೆಮ್ಮೆಯಿದೆ. ಈಗ ನನಗೆ ನನ್ನ ಜೀವನದ ಗುರಿ ಏನು ಎಂಬುದು ಇಲ್ಲಿ ಅರ್ಥವಾಗಿದೆ. ತಂದೆ ತಾಯಿ ಈ ಮಕ್ಕಳನ್ನು ಬಿಟ್ಟು ಹೋದರೂ ನಾವೆಲ್ಲರೂ ಸೇರಿ ಈ ಮಕ್ಕಳ ಕುಟುಂಬವಾಗೋಣ. ಇನ್ಮುಂದೆ ಗುರು, ಶೋಭು ಇಬ್ಬರು ನನ್ನ ಮಕ್ಕಳು. ಅವರ ಪೂರ್ತಿ ಜವಾಬ್ದಾರಿ ನನ್ನದು” ಎಂದಿದ್ದಾರೆ ನಟಿ ಶ್ರೀಲೀಲಾ.. ಸ್ನೇಹಿತರೆ ನಟಿ ಶ್ರೀ ಲೀಲಾ ಅವರ ಈ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…
[widget id=”custom_html-2″]