Advertisements

ಬೆಳೆ ಹಾಳು ಮಾಡುತ್ತಿದ್ದ ಕೋತಿಗಳನ್ನು ಓಡಿಸಲು ಈ ರೈತ ಮಾಡಿದ ಸೂಪರ್ ಟೆಕ್ನಿಕ್ ಏನ್ ಗೊತ್ತಾ! ಈ ಟೆಕ್ನಿಕ್ ವಿದೇಶದಲ್ಲೂ ವೈರಲ್..

Kannada Mahiti

ನಮಸ್ತೆ ಸ್ನೇಹಿತರೆ, ರೈತರಿಗೆ ಇದೊಂದು ದೊಡ್ಡ ಪಜೀತಿ, ಯಾಕೆಂದರೆ ಒಬ್ಬ ರೈತ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ತಿಂಗಳುಗಳ ಕಾಲ ಬೆಳೆಯನ್ನು ನೋಡಿಕೊಂಡು ನಂತರ ಬೆಳೆಯನ್ನು ಕಟಾವ್ ಮಾಡುತ್ತಿದ್ದರು, ಆದರೆ ಏಕಾಏಕಿಯಾಗಿ ದಾಳಿ ಮಾಡುವ ಕೋತಿಗಳ ಗುಂಪೊಂದು ಆ ಬೆಳೆಯನ್ನು ಪೂರ್ತಿಯಾಗಿ ನಾಶ ಮಾಡುತ್ತಿದ್ದವು, ಇಂತಹ ಪರಿಸ್ಥಿತಿಯಲ್ಲಿ ರೈತರು ಕೋತಿಗಳ ಮೇಲೆ ಕಂಪ್ಲೇಂಟ್ ಕೊಡಲು ಸಾಧ್ಯವಾಗುವುದಿಲ್ಲ ಅಥವಾ ಅವುಗಳಿಗೆ ಬುದ್ಧಿ ಕಲಿಸಲು ಕೂಡ ಆಗುವುದಿಲ್ಲ ಏನು ಮಾಡಲು ಆಗದ ಸ್ಥಿತಿಗೆ ತಲುಪುತ್ತಿದ್ದರು ಇನ್ನು ಇಂತಹ ಕಷ್ಟವನ್ನು ಎದುರಿಸುತ್ತಿದ್ದ ರೈತ ಒಂದು ಒಳ್ಳೆಯ ಉಪಾಯವನ್ನು ಮಾಡಿದ್ದಾನೆ ಅಷ್ಟಕ್ಕೂ ಈ ರೈತ ಮಾಡಿದ ಉಪಾಯ ಏನು ಗೊತ್ತಾ?

[widget id=”custom_html-2″]

Advertisements
Advertisements

ಹೌದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಈ ರೈತನ ಹೆಸರು ಶ್ರೀಕಾಂತ್. ಹೇಳಿ ಕೇಳಿ ಇದು ಮಲೆನಾಡು ಪ್ರದೇಶ. ಇನ್ನು ಈ ಜಾಗದಲ್ಲಿ ಕೋತಿಗಳ ಹಾವಳಿಯನ್ನು ಹೇಳಲು ಸಾಧ್ಯವಾಗುವುದಿಲ್ಲ, ಇನ್ನೇನೂ ಫಸಲು ಬಂದು ಕಟ್ಟು ಮಾಡುವ ಸಮಯದಲ್ಲೇ ಕಾಫಿ, ಅಡಿಕೆ ತೋಟ, ಬಾಳೆಹಣ್ಣು ತೋಟ ಹಾಗೆ ಇತರ ಬೆಳೆಗಳ ಮೇಲೆ ದಾ’ಳಿ ಮಾಡುತ್ತಿದ್ದ ಕೋತಿಗಳು ಗುಂಪೊಂದು ತೋಟವನ್ನು ಪೂರ್ತಿಯಾಗಿ ನಾ’ಶ ಮಾಡುತ್ತಿದ್ದವು. ಅಲ್ಲದೆ ಅವುಗಳನ್ನು ನಿಯಂತ್ರಣ ಮಾಡುವುದು ರೈತರಿಗೆ ಅಸಾಧ್ಯವಾಗುತ್ತಿತ್ತು, ಇನ್ನು ಈ ಕೋತಿಗಳು ಮಾಡುವ ಈ ದಾ’ಳಿಯ ಬಗ್ಗೆ ಯೋಚನೆ ಮಾಡುತ್ತಿದ್ದ ಶ್ರೀಕಾಂತ್ ಗೆ ಭಟ್ಕಳದ ರೈತನ ಐಡಿಯಾ ಇವರ ಕಣ್ಣಿಗೆ ಬಿದ್ದಿತ್ತು. ಇನ್ನು ಭಟ್ಕಳದ ರೈತ ತೋಟದ ಬೆಳೆಯನ್ನು ರಕ್ಷಿಸಲು ಒಂದು ದೊಡ್ಡ ಟೈಗರ್ ಡಾಲ್ ಅನ್ನು ತಂದು

[widget id=”custom_html-2″]

ತಮ್ಮ ತೋಟದಲ್ಲಿ ಇಟ್ಟಿದ್ದರು. ಅದನ್ನು ನೋಡಿ ನಿಜವಾದ ಹುಲಿ ಎಂದು ತಿಳಿದು ತೋಟಕ್ಕೆ ಕೋತಿಗಳು ಬರುತ್ತಿರಲಿಲ್ಲ. ಟೈಗರ್ ಡಾಲ್ ಸ್ವಲ್ಪ ದಿನ ಕೆಲಸ ಮಾಡುತ್ತಿತ್ತು. ಆದರೆ ಮಳೆಯಿಂದ ಟೈಗರ್ ಡಾಲ್ ನ ಕಲರ್ ಚೇಂಜ್ ಆಯ್ತು. ಮತ್ತೆ ಆ ಕೋತಿಗಳು ಟೈಗರ್ ಡಾಲ್ ನೋಡಿ ಇದು ನಕಲಿ ಎಂದು ತಿಳಿದು ಮತ್ತೆ ತೋಟದ ಮೇಲೆ ದಾ’ಳಿ ಮಾಡಲು ಶುರು ಮಾಡಿದವು. ಮತ್ತೆ ಯೋಚನೆ ಮಾಡುತ್ತಿದ್ದ ಶ್ರೀಕಾಂತ್ ಗೆ ಒಂದು ಒಳ್ಳೆ ಐಡಿಯಾ ಹೊಳೆಯಿತು. ಇವರು ತಮ್ಮ ಮನೆಯಲ್ಲಿದ್ದ ಎರಡು ನಾಯಿಗಳಿಗೆ ಹುಲಿ ಇರುವ ಹಾಗೆ ಪೇಂಟಿಂಗ್ ಮಾಡಿದರು‌ ನಂತರ ನಾಯಿಗಳು ಹುಲಿಯ ಬಣ್ಣ ಹೇಗೆ ಇದೆಯೋ ಅದೇ ರೀತಿ ಕಾಣುತ್ತಿದ್ದವು. ನಂತರ ಮನೆಯ ಎರಡು ನಾಯಿಗಳನ್ನು ಬೆಳಗ್ಗೆ ಒಂದು ರೌಂಡ್ ಮತ್ತು ಸಂಜೆ ಒಂದು ರೌಂಡ್ ತಮ್ಮ ತೋಟದಲ್ಲಿ ತಿರುಗಾಡಿಸುತ್ತಿದ್ದರು..

[widget id=”custom_html-2″]

ಇದನ್ನು ನೋಡಿದ ಕೋತಿಗಳು ನಿಜವಾದ ಹುಲಿ ಬಂದಿದೆ ಎಂದು, ಅದರ ಕೈಗೆ ನಾವು ಸಿಕ್ಕಿದರೆ ನಾವು ಉಳಿಯುವುದಿಲ್ಲ ಎಂದು ತಿಳಿದ ಕೋತಿಗಳು ಮತ್ತೆ ಆ ತೋಟದ ಕಡೆ ತಿರುಗಿ ನೋಡಲೇ ಇಲ್ಲ. ಕೊನೆಗೂ ತೋಟದ ಮಾಲಿಕ ಶ್ರೀಕಾಂತ್ ಮಾಡಿದ ಈ ಉಪಾಯ ಸಕ್ಸಸ್ ಆಯಿತು. ಇನ್ನು ಶ್ರೀಕಾಂತ್ ಮಾಡಿದ ಐಡಿಯಾ ನೋಡಿದ ಸುತ್ತಮುತ್ತಲಿನ ರೈತರು ತಮ್ಮ ತೋಟದಲ್ಲಿ ಬೆಳೆಯ ರಕ್ಷಣೆಗೆ ಅವರು ಸಹಾ ಶ್ರೀಕಾಂತ್ ಮಾಡಿದ ಹಾಗೆ ಉಪಾಯ ಮಾಡಿ ತಮ್ಮ ಬೆಳೆಯನ್ನು ರಕ್ಷಣೆ ಮಾಡುತ್ತಿದ್ದರು..