Advertisements

ಈ ಒಂದು ಹಲಸಿನ ಮರದಿಂದ ವರ್ಷಕ್ಕೆ ಲಕ್ಷಗಟ್ಟಲೆ ಹಣ ಸಂಪಾದನೆ? ಇಲ್ಲಿದೆ ನೋಡಿ ಈ ಮರದ ಆಸಕ್ತಿದಾಯಕ ಸ್ಟೋರಿ..

Kannada Mahiti

ನಮಸ್ತೆ ಸ್ನೇಹಿತರೆ, ಒಬ್ಬ ರೈತ ಒಳ್ಳೆಯ ತಂತ್ರಜ್ಞಾನ ಬಳಸಿ ವ್ಯವಸಾಯ ಮಾಡುತ್ತಾರೆ, ಇಂತಹ ವ್ಯವಸಾಯದ ಮುಂದೆ ದೊಡ್ಡ ದೊಡ್ಡ ವ್ಯಕ್ತಿಗಳು ಕೂಡ ಸಾಟಿ ಇಲ್ಲ, ಇಲ್ಲಿ ಒಬ್ಬ ರೈತ ಒಂದು ಹಲಸಿನ ಮರದಿಂದ ಹತ್ತು ಲಕ್ಷಕ್ಕೂ ಹೆಚ್ಚು ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ.. ಅಷ್ಟಕ್ಕೂ ಈ ಹಲಸಿನ ಮರದಿಂದ ಅಷ್ಟು ಹಣ ಸಂಪಾದನೆ ಮಾಡಲು ಹೇಗೆ ಸಾಧ್ಯ ಎಂಬುದನ್ನು ತಿಳಿಯೋಣ ಬನ್ನಿ, ಒಂದು ಹಲಸಿನ ಮರದಿಂದ ಹತ್ತು ಲಕ್ಷ ರೂಪಾಯಿ ಹಣವನ್ನು ಸಂಪಾದನೆ ಮಾಡುತ್ತಿದ್ದ ಈ ರೈತನನ್ನು ನೋಡಿ ಎಲ್ಲರೂ ಕೂಡ ಆರ್ಶ್ವಯ ಪಟ್ಟಿದ್ದರು.. ಆದರೆ ಈ ಹಲಸಿನ ಮರವನ್ನು ಸಿದ್ದು ಹಲಸಿನ ಮರ ಎಂದು ಕರೆಯುತ್ತಿದ್ದರು,

Advertisements
Advertisements

ಈ ಹಲಸಿನ ಮರ ಸುಮಾರು 36 ವರ್ಷಗಳ ಹಳೆಯ ಮರ, ಈ ಹಲಸಿನ ಮರ ಇರೋದು ‘ತುಮಕೂರಿನ ಜಿಲ್ಲೆಯ ಗುಬ್ಬಿ ತಾಲುಕಿನ ಚೇಲುರು ಗ್ರಾಮದಲ್ಲಿ ಈ ಹಲಸಿನ ಮರ ಪತ್ತೆಯಾಗಿದೆ.. ಈ ಹಲಸಿನ ಮರದ ಮಾಲೀಕನ ಹೆಸರು ಎಸ್, ಎಸ್ ಪರಮೇಶ್ವ, ಪರಮೇಶ್ವರವರು ಈ ಮರವನ್ನು ತನ್ನ ತಂದೆಯ ಜ್ಞಾಪಕಾರ್ಥವಾಗಿ ಬೆಳೆಸಿದರು ಈ‌ ಮರಕ್ಕೆ ಸಿದ್ದು ಎಂದು ಹೆಸರಿಟ್ಟಿದ್ದರೆ, ಅದಕ್ಕೆ ಈ ತಳಿಯನ್ನು ಅವರ ತಂದೆಯ ಹೆಸರಿನಲ್ಲಿ ಕರೆಯಲಾಗುತ್ತದೆ ಅದರೆ ನಮ್ಮ ಭಾರತದಲ್ಲಿ 37ಕ್ಕೂ ಹೆಚ್ಚಿನ ಹಲಸಿನ ತಳಿಗಳಿವೆ ಆದರೆ ಈ ಎಲ್ಲಾ ಹಲಸಿನ ತಳಿಗಳ ಪೈಕಿ ಸಿದ್ದು ಹಲಸಿನ ತಳಿ ಸ್ಟೇಷನ್ ಹಾಗು ವಿಶೇಷ ಮತ್ತು ಹಲಸಿನ ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ… ಎರಡು ವರ್ಷಗಳ ಹಿಂದೆ ಸಿದ್ದು ಹಲಸಿನ ಹಣ್ಣನ್ನು ಪ್ರಯೋಗಾಲಯಕ್ಕೆ ಒಳಪಡಿಸಿದಾಗ ಅದರಲ್ಲಿ ಲೀಕೊಪಿನಾಂಶ ಹೆಚ್ಚಾಗಿರುವುದು ಪತ್ತೆಯಾಗಿದೆ..

100 ಗ್ರಾಂ ಸಿದ್ದು ಹಲಸಿನ ಹಣ್ಣಿನಲ್ಲಿ 2 ಎಂಜಿ ಲೀಕೊಪಿನಾಂಶ ಹೆಚ್ಚಾಗಿದ್ದು ಬೇರೆ ತಳಿಯ ಹಲಸಿನ ಹಣ್ಣಿನಲ್ಲಿ 0.2 ಲೀಕೊಪಿನಾಂಶ ಇರುತ್ತದೆ.. ಲೀಕೊಪಿನಾಂಶ ಮನುಷ್ಯನ ದೇಹದ ಹೃದಯ ಸಂಬಂಧಿ ಕಾಯಿಲೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.. ಇದರಿಂದ ಸಿದ್ದು ಹಲಸಿನ ಹಣ್ಣಿಗೆ ಹಾಗು ಇಂತಹ ಹಲಸಿನ ಮರದ ಸಸಿಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ, ಆದರೆ ಈ ಹಲಸಿನ ಮರದಿಂದ ವರ್ಷಕ್ಕೆ ಹತ್ತು ಲಕ್ಷದ ವರೆಗೂ ಸಂಪಾದನೆ ಮಾಡುತ್ತಿದೆ ಎಂದಿದ್ದರು, ವರ್ಷದಿಂದ ವರ್ಷಕ್ಕೆ ಈ ಹಲಸಿನ ಮರದ ಈ ತಳಿಗಳ ಬೇಡಿಕೆ ಹೆಚ್ಚಾಗುತ್ತಿದ್ದು ಒಂದು ಲಕ್ಷದವರೆಗೆ ಸಸಿಗಳಿಗೆ ಬೇಡಿಕೆ ಬರುತ್ತಿತ್ತು..

ಆದರೆ ಈ ರೈತ ಸುಮಾರು ವರ್ಷಕ್ಕೆ 4500 ಸಸಿಗಳನ್ನು ಪೂರೈಕೆ ಮಾಡಿ ಒಂದು ಸಸಿಯನ್ನು 200 ರೂಪಾಯಿಗೆ ಮಾರಾಟ ಮಾಡುತ್ತಿದ್ದರು, ಇನ್ನು ಈ ಹಲಸಿನ ಮರ ಸಸಿಗಳಿಂದ ಒಂಬತ್ತು ಲಕ್ಷದ ರವರೆಗೆ ಲಾಭವನ್ನು ಗಳಿಸುತ್ತಿದ್ದ ಈ ರೈತ, ತನ್ನ ಜೀವನವನ್ನೇ ಬದಲಾವಣೆ ಮಾಡಿದ ಹಲಸಿನ ಮರವನ್ನು ಕಳ್ಳರಿಂದ ರಕ್ಷಣೆ ಪಡೆಯಲು ಆ ಮರಕ್ಕೆ ಸಿಸಿ ಟಿವಿಯನ್ನು ಅಳವಡಿಸಿದ್ದಾರೆ.. ಇನ್ನು ಸಿದ್ದು ಹಲಸಿನ ಮರದ ತಳಿಯನ್ನು ಅಭಿವೃದ್ಧಿ ಪಡಿಸಲು ಆಸ್ಟ್ರೇಲಿಯಾದ ಕಂಪನಿಗಳು ಆಸಕ್ತಿ ವಹಿಸಿದವು, ಆದರೆ ಭಾರತದ ತೋಟಗಾರಿಕೆಯ ಅನ್ವಯ ವಿದೇಶಗಳಿಗೆ ದೇಶೀಯ ತಳಿಗಳನ್ನು ನೀಡುವುದಿಲ್ಲ ಎಂದು ನಿರಾಕರಿಸಿದ್ದರು.. ಈ ಸಿದ್ದು ಹಲಸಿನ ಹಣ್ಣಿನ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ…